Advertisement

ಭಾರತೀಯ ಶೂಟಿಂಗ್‌ ತಂಡಕ್ಕೆ ಕೋಚ್‌ ಇಂಗ್ಲೆಂಡ್‌ ತಾರೆ ಪೀಟರ್‌ ವಿಲ್ಸನ್‌ ಅರ್ಜಿ

09:08 PM Aug 17, 2024 | Team Udayavani |

ಹೊಸದಿಲ್ಲಿ: ಭಾರತೀಯ ಶೂಟಿಂಗ್‌ ತಂಡದ ಕೋಚ್‌ ಆಗಲು ಇಂಗ್ಲೆಂಡ್‌ ಶೂಟಿಂಗ್‌ ದಿಗ್ಗಜ ಪೀಟರ್‌ ವಿಲ್ಸನ್‌ ಆಸಕ್ತಿ ತೋರಿದ್ದಾರೆ. ಅವರು 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ವರೆಗೆ ಭಾರತಕ್ಕೆ ತರಬೇತಿ ನೀಡಲು ಸಿದ್ಧರಾಗಿದ್ದು, ಅರ್ಜಿ ಸಲ್ಲಿಸಿದ್ದಾರೆ.

Advertisement

ಇತ್ತೀಚೆಗೆ ಮುಗಿದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಇಂಗ್ಲೆಂಡ್‌ನ‌ ನಥನ್‌ ಹೇಲ್ಸ್‌ ಟ್ರ್ಯಾಪ್‌ ಶೂಟಿಂಗ್‌ನಲ್ಲಿ ಚಿನ್ನ ಗೆಲ್ಲಲು ವಿಲ್ಸನ್‌ ನೆರವಾಗಿದ್ದರು. 37 ವರ್ಷದ ಪೀಟರ್‌ ವಿಲ್ಸನ್‌ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರು. ಅಪಘಾತವೊಂದರಲ್ಲಿ ಸಿಲುಕಿ ಕ್ರಿಕೆಟ್‌ ಆಡುವ ಶಕ್ತಿ ಕಳೆದುಕೊಂಡ ಅನಂತರ ಶೂಟಿಂಗ್‌ಗೆ ಹೊರಳಿಕೊಂಡರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಡಬಲ್‌ ಟ್ರ್ಯಾಪ್‌ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದರು. ಆ ವಿಭಾಗದಲ್ಲಿ ವಿಶ್ವದಾಖಲೆಯನ್ನೂ ಹೊಂದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಡಬಲ್‌ ಟ್ರ್ಯಾಪ್‌ ಶೂಟಿಂಗ್‌ ಸ್ಥಾನ ಕಳೆದುಕೊಂಡ ಅನಂತರ ತರಬೇತಿಗೆ ಅವರು ಹೊರಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next