Advertisement

ಚಿಯರ್‌ ಫಾರ್‌ ಇಂಡಿಯಾ…

10:29 PM Jul 22, 2021 | Team Udayavani |

ಟೋಕಿಯೊ: ಶುಕ್ರವಾರ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ಭಾರತದ ಕೇವಲ 26 ಸದಸ್ಯರಷ್ಟೇ ರಂಗು ತುಂಬಲಿದ್ದಾರೆ. ಇವರಲ್ಲಿ 20 ಕ್ರೀಡಾಪಟುಗಳಾದರೆ, ಉಳಿದವರು ಅಧಿಕಾರಿಗಳು. ಕೋವಿಡ್‌ ಮುನ್ನೆಚ್ಚರಿಕೆಯ ಕಾರಣದಿಂದ ಉಳಿದವರೆಲ್ಲ ದೂರ ಉಳಿಯಲಿದ್ದಾರೆ ಎಂದು ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷ ನರೀಂದರ್‌ ಬಾತ್ರಾ ಸ್ಪಷ್ಟಪಡಿಸಿದ್ದಾರೆ.

Advertisement

“ನಮ್ಮ ಕ್ರೀಡಾಪಟುಗಳು ಹೆಚ್ಚು ಜಾಗರೂಕರಾಗಿರಬೇಕು. ಯಾವುದೇ ಅಪಾಯಕ್ಕೆ ಸಿಲುಕಬಾರದೆಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಬಾತ್ರಾ ಹೇಳಿದರು.

ಶೂಟಿಂಗ್‌, ಬ್ಯಾಡ್ಮಿಂಟನ್‌, ಆರ್ಚರಿ, ಹಾಕಿ ಸೇರಿದಂತೆ 7 ಕ್ರೀಡೆಗಳ ಸ್ಪರ್ಧಿಗಳು ಸಮಾರಂಭದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಧ್ವಜ ಧಾರಿಯಾದ ಕಾರಣ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಉಪಸ್ಥಿತರಿರುತ್ತಾರೆ. ಬಾಕ್ಸರ್‌ ಮೇರಿ ಕೋಮ್‌ ಮತ್ತೋರ್ವ ಧ್ವಜಧಾರಿಯಾಗಿದ್ದಾರೆ.

26 ಸದಸ್ಯರ ತಂಡ:

ಗುರುವಾರ ಬಿಡುಗಡೆಗೊಳಿಸಲಾದ “ಪಥಸಂಚಲ ಪಟ್ಟಿ’ಯಲ್ಲಿ ಭಾರತದ ಬಾಕ್ಸರ್‌ಗಳಿಗೆ ಗರಿಷ್ಠ 8 ಸ್ಥಾನ ಲಭಿಸಿದೆ. ಉಳಿದಂತೆ ಟೇಬಲ್‌ ಟೆನಿಸ್‌,  ಸೈಲಿಂಗ್‌ ವಿಭಾಗದ ತಲಾ ನಾಲ್ವರು ಸ್ಪರ್ಧಿಗಳಿರುತ್ತಾರೆ. ಉಳಿದವರೆಂದರೆ ರೋಯಿಂಗ್‌, ಜಿಮ್ನಾಸ್ಟಿಕ್‌, ಸ್ವಿಮ್ಮಿಂಗ್‌ ಮತ್ತು ಫೆನ್ಸಿಂಗ್‌ ಕ್ರೀಡಾಪಟುಗಳು.

Advertisement

ಮಣಿಕಾ ಬಾತ್ರಾ, ಶರತ್‌ ಕಮಲ್‌, ಸಿ.ಎ. ಭವಾನಿದೇವಿ, ಪ್ರಣತಿ ನಾಯಕ್‌, ಸಾಜನ್‌ ಪ್ರಕಾಶ್‌, ಲೊವಿÉನಾ ಬೊರ್ಗೊಹೈನ್‌, ಪೂಜಾ ರಾಣಿ, ಅಮಿತ್‌ ಪಂಘಲ್‌, ಮನೀಷ್‌ ಕೌಶಿಕ್‌, ಆಶಿಷ್‌ ಕುಮಾರ್‌, ಸತೀಶ್‌ ಕುಮಾರ್‌ ಪಥಸಂಚಲನದಲ್ಲಿ ಪಾಲ್ಗೊಳ್ಳಲಿರುವ ಭಾರತದ ಪ್ರಮುಖ ಕ್ರೀಡಾಪಟುಗಳು.

ಸಮಾರಂಭದಲ್ಲಿ ಜಪಾನ್‌ ಅಕ್ಷರಮಾಲಿಕೆ ಯಂತೆ ತಂಡಗಳ ಪ್ರವೇಶವಾಗಲಿದ್ದು, ಭಾರತ 21ನೇ ಸ್ಥಾನಿಯಾಗಿ ರಂಗಪ್ರವೇಶ ಮಾಡಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಭಾರತದ 50ಕ್ಕಿಂತ ಹೆಚ್ಚು ಸದಸ್ಯರು ಪಾಲ್ಗೊಳ್ಳುವುದಿಲ್ಲ ಎಂದು ಐಒಎ ಕಾರ್ಯದರ್ಶಿ ರಾಜೀವ್‌ ಮೆಹ್ತಾ ಮೊದಲೇ ತಿಳಿಸಿದ್ದರು. ಆದರೆ ಈ ಸಂಖ್ಯೆಯೀಗ 26ಕ್ಕೆ ಇಳಿದಿದೆ.

ಉದ್ಘಾಟನೆಯ ಮರುದಿನ ಸ್ಪರ್ಧೆ ಇದ್ದವರಿಗೆ ಈ ಸಮಾರಂಭದಿಂದ ದೂರ ಇರುವಂತೆ ಮೊದಲೇ ಸೂಚಿಸಲಾಗಿತ್ತು.

950 ಜನರ ಉಪಸ್ಥಿತಿ :

ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ಕೇವಲ 950 ವೀಕ್ಷಕರು ಸಾಕ್ಷಿಯಾಗಲಿದ್ದಾರೆ. ಪಥಸಂಚಲನದ ವೇಳೆ ಪ್ರಧಾನ ಸ್ಟೇಡಿಯಂನಲ್ಲಿ ಉಪಸ್ಥಿತರಿರುವವರೆಂದರೆ ಅಧಿಕಾರಿಗಳು ಮತ್ತು ಪತ್ರಕರ್ತರು ಮಾತ್ರ. ವೀಕ್ಷಕರನ್ನು ಸಂಪೂರ್ಣವಾಗಿ ನಿರ್ಬಂಧಿಸಲಾದ ಕಾರಣ ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ಕಳೆಗುಂದಲಿದೆ.

ಕ್ರೀಡಾಗ್ರಾಮದಲ್ಲಿ ಮತ್ತೆರಡು ಕೊರೊನಾ ಕೇಸ್‌ :

ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಗುರುವಾರ ಮತ್ತಿಬ್ಬರು ಆ್ಯತ್ಲೀಟ್‌ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಒಲಿಂಪಿಕ್ಸ್‌ ಸಮಿತಿ ತಿಳಿಸಿದೆ. ಆದರೆ ಆ್ಯತ್ಲೀಟ್‌ಗಳ ಹೆಸರನ್ನು ಪ್ರಕಟಿಸಿಲ್ಲ. ಈ ಪ್ರಕರಣದೊಂದಿಗೆ ಕಳೆದ ಒಂದು ತಿಂಗಳಲ್ಲಿ ದಾಖಲಾದ ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.

“ಕ್ರೀಡಾಪಟುಗಳು ಕೊರೊನಾ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಪಂದ್ಯಗಳನ್ನು ಮುಂದುವರಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ವಿಚಾರವಾಗಿ ಈಗಾಗಲೇ ಮಾರ್ಗಸೂಚಿಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ’ ಎಂದು ಆಯೋಜಕರು ತಿಳಿಸಿದ್ದಾರೆ.

  ಕೊರೊನಾ ಭಯ: ಹಿಂದೆ ಸರಿದ ಗಿನಿಯ

ಇನ್ನೇನು ಒಲಿಂಪಿಕ್ಸ್‌ ಆರಂಭವಾಯಿತು ಎನ್ನುವಷ್ಟರಲ್ಲಿ ಕೋವಿಡ್‌-19 ಸಾಂಕ್ರಾಮಿಕ ಭೀತಿಯಿಂದ ಪಶ್ಚಿಮ ಆಫ್ರಿಕಾ ರಾಷ್ಟ್ರ ಗಿನಿಯ ಹಿಂದೆ ಸರಿದಿದೆ. ದೇಶದ ಕ್ರೀಡಾ ಸಚಿವರು ಇದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಕೋವಿಡ್‌-19 ರೂಪಾಂತರಿಗಳ ಆತಂಕದಿಂದ ಹಿನ್ನೆಲೆಯಲ್ಲಿ ಗಿನಿಯ ಆಟಗಾರರ ಆರೋಗ್ಯವನ್ನು ಗಮನದಲ್ಲಿರಿಸಿ ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವ ನಿರ್ಧಾರ ಮಾಡಲಾಗಿದೆ. ಮತ್ತು ಈ ವಿಚಾರವನ್ನು ಒಲಿಂಪಿಕ್ಸ್‌ ಸಮಿತಿಗೆ ಪತ್ರದ ಮೂಲಕ ತಿಳಿಸಲಾಗಿದೆ ಎಂದು ಸಚಿವರು ಹೇಳಿ¨ªಾರೆ.

ಐತಿಹಾಸಿಕ ಸವಾಲಿನ ಒಲಿಂಪಿಕ್ಸ್‌ :

ಒಲಿಂಪಿಕ್ಸ್‌ ಚರಿತ್ರೆಯಲ್ಲಿ ಹಿಂದೆಂದೂ ಕಾಣದಷ್ಟು ಸವಾಲುಗಳನ್ನು ಎದುರಿಸಿ ಟೋಕಿಯೊ ಕ್ರೀಡಾಕೂಟ ಆರಂಭವಾಗುತ್ತಿದೆ. ಹೀಗಾಗಿ ಇದು ಐತಿಹಾಸಿಕ ಮಹತ್ವ ಪಡೆದಿದೆ. ಅದು ಎದುರಿಸಿದ ಸವಾಲುಗಳು ಹೀಗಿವೆ…

  1. ಕಳೆದ ವರ್ಷ ನಡೆಯಬೇಕಿದ್ದ ಕೂಟ ಈ ಬಾರಿಗೆ ಮುಂದೂಡಲ್ಪಟ್ಟಿತು. ಇನ್ನೇನು ಕೂಟ ಶುರುವಾಗಬೇಕು ಎನ್ನುವಾಗ ಮತ್ತೆ ಕೊರೊನಾ ತೀವ್ರಗೊಂಡಿತು.
  2. ಕೊರೊನಾದಿಂದ ಕೂಟವನ್ನು ನಿಲ್ಲಿಸಿ ಎಂದು ಜಪಾನ್‌ನಾದ್ಯಂತ ತೀವ್ರ ಪ್ರತಿಭಟನೆ. ಒಂದೊಂದೇ ಕಾರ್ಯಕ್ರಮಗಳು ರದ್ದು.
  3. ದೇಶ ವಿದೇಶಗಳ ಪ್ರೇಕ್ಷಕರಿಗೇ ಪ್ರವೇಶ ನಿಷೇಧ, ಸಾಲುಸಾಲು ಕೊರೊನಾ ಸೋಂಕಿನ ವರದಿಗಳು.
  4. ಒಲಿಂಪಿಕ್ಸ್‌ ಉದ್ಘಾಟನೆಗೆ ಒಂದೆರಡು ತಿಂಗಳಿದ್ದಾಗ ಸಂಘಟನಾ ಸಮಿತಿ ಮುಖ್ಯಸ್ಥ ಯೊಶಿರೊ ಮೋರಿ ರಾಜೀನಾಮೆ. ಮಹಿಳೆಯರನ್ನು ಅವಮಾನಿಸಿದರು ಎಂಬ ಕಾರಣಕ್ಕೆ ಈ ಸ್ಥಿತಿ.
  5. ಒಲಿಂಪಿಕ್ಸ್‌ ಶುರುವಾಗುವ ಹಿಂದಿನದಿನ ಉದ್ಘಾಟನಾ ಸಮಾರಂಭದ ನಿರ್ದೇಶಕ ಕೊಬಯಶಿ ರಾಜೀನಾಮೆ.

24 ಮಂದಿ ಒಡಹುಟ್ಟಿದವರು :

ಈ ಬಾರಿಯ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ 24 ಮಂದಿ ಒಡಹುಟ್ಟಿದವರು ಸ್ಪರ್ಧೆಗಿಳಿಯಲಿ¨ªಾರೆ. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ 36 ಒಡಹುಟ್ಟಿದವರು ಪಾಲ್ಗೊಂಡಿದ್ದರು.

ಭಾರತದ ವೇಳಾಪಟ್ಟಿ

ಶನಿವಾರ (ಜು. 24) :

ವನಿತಾ ಬಾಕ್ಸಿಂಗ್‌  :

(69 ಕೆಜಿ, ರೌಂಡ್‌ ಆಫ್ 32)

ಲವ್ಲೀನಾ ಬೊರ್ಗೊಹೈನ್‌

ಬೆಳಗ್ಗೆ 7.30

ಪುರುಷರ ಬಾಕ್ಸಿಂಗ್‌

(69 ಕೆಜಿ, ರೌಂಡ್‌ ಆಫ್ 32) :

ವಿಕಾಸ್‌ ಕೃಷ್ಣನ್‌

ಬೆಳಗ್ಗೆ  9.54, ಅಪರಾಹ್ನ 3.40

ಈಕ್ವೇಸ್ಟ್ರಿಯನ್‌

ಫೌವಾದ್‌ ಮಿರ್ಜಾ

ಅಪರಾಹ್ನ 1.30

ಪುರುಷರ ಹಾಕಿ:

ಭಾರತ-ನ್ಯೂಜಿಲ್ಯಾಂಡ್‌

ಬೆಳಗ್ಗೆ 6.30

ವನಿತಾ ಹಾಕಿ:

ಭಾರತ-ನೆದರ್ಲೆಂಡ್ಸ್‌

ಸಂಜೆ 5.15

ವನಿತಾ ಜ್ಯೂಡೊ:

ಸುಶೀಲಾ ಲಿಕ್ಮಬಾಮ್‌: ಬೆಳಗ್ಗೆ 7.30

ಪುರುಷರ ರೋಯಿಂಗ್‌:

ಲೈಟ್‌ವೇಟ್‌ ಡಬಲ್ಸ್‌ ಸ್ಕಲ್ಸ್‌ ಹೀಟ್ಸ್‌

ಅರ್ಜುನ್‌ ಲಾಲ್‌-ಅರವಿಂದ್‌ ಸಿಂಗ್‌

ಬೆಳಗ್ಗೆ 7.50

ಸೈಲಿಂಗ್‌:

ಲೇಸರ್‌ (ರೇಸ್‌ 1 ಮತ್ತು 2)

ವಿಷ್ಣು ಸರವಣನ್‌

ಬೆಳಗ್ಗೆ 11.05

ಶೂಟಿಂಗ್‌:

ವನಿತಾ 10 ಮೀ. ಏರ್‌ ರೈಫ‌ಲ್‌

ಅಪೂರ್ವಿ ಚಂಡೇಲ, ಇಳವೆನಿಲ್‌ ವಲರಿವನ್‌

ಅರ್ಹತಾ ಸುತ್ತು: ಬೆಳಗ್ಗೆ 5.00

ಫೈನಲ್‌: ಬೆಳಗ್ಗೆ 7.15

ಪುರುಷರ 10 ಮೀ. ಏರ್‌ ಪಿಸ್ತೂಲ್‌

ಸೌರಭ್‌ ಚೌಧರಿ, ಅಭಿಷೇಕ್‌ ವರ್ಮ

ಅರ್ಹತಾ ಸುತ್ತು: ಬೆಳಗ್ಗೆ 9.30

ಫೈನಲ್‌: ಬೆಳಗ್ಗೆ 11.15

ಟೇಬಲ್‌ ಟೆನಿಸ್‌:

ಪುರುಷ/ವನಿತೆಯರ ಆರಂಭಿಕ ಸುತ್ತು

ಶರತ್‌ ಕಮಲ್‌, ಜಿ. ಸಥಿಯನ್‌, ಮಣಿಕಾ          ಬಾತ್ರಾ, ಸುತೀರ್ಥ ಮುಖರ್ಜಿ ಬೆಳಗ್ಗೆ 5.30

ಮಿಕ್ಸೆಡ್‌ ಡಬಲ್ಸ್‌ (ರೌಂಡ್‌ ಆಫ್ 16)

ಶರತ್‌ ಕಮಲ್‌-ಮಣಿಕಾ ಬಾತ್ರಾ

ಬೆಳಗ್ಗೆ 7.45

ವನಿತಾ ವೇಟ್‌ಲಿಫ್ಟಿಂಗ್‌ (49 ಕೆಜಿ) :

ಮೀರಾಬಾಯಿ ಚಾನು

ಬೆಳಗ್ಗೆ 6.20

ಫೈನಲ್‌: ಬೆಳಗ್ಗೆ 10.20

Advertisement

Udayavani is now on Telegram. Click here to join our channel and stay updated with the latest news.

Next