Advertisement

ಮುಂದಿನ ಒಲಿಂಪಿಕ್ಸ್‌ಗೂ ಬಾರ್ಟೊನೀಜ್‌ ಕೋಚ್‌: ನೀರಜ್‌

05:09 PM Oct 09, 2021 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ನಲ್ಲಿ ನಡೆಯಲಿರುವ 2024 ಒಲಿಂಪಿಕ್ಸ್‌ ಕ್ರೀಡಾಕೂಟದ ವರೆಗೂ ಜರ್ಮನಿಯ ಕ್ಲಾಸ್‌ ಬಾರ್ಟೊನಿಜ್‌ ಅವರನ್ನೇ ತಮ್ಮ ಕೋಚ್‌ ಆಗಿ ಮುಂದುವರಿಸಬೇಕು ಎಂದು ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ ಹೇಳಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ನೀರಜ್‌, “ಕೆಲವು ಕೋಚ್‌ಗಳು ನಮ್ಮ ಅಭ್ಯಾಸ ತಂತ್ರಗಳನ್ನು ಕಲಿಸಲು ಕೋಲು ಹಿಡಿದು ಬೆನ್ನು ಹತ್ತುತ್ತಾರೆ. ಆದರೆ ಕ್ಲಾಸ್‌ ಅವರ ಶೈಲಿಯೇ ವಿಭಿನ್ನ. ಅವರೊಂದಿಗೆ ನನ್ನ ಹೊಂದಾಣಿಕೆ ಉತ್ತಮವಾಗಿದೆ. ಅದಕ್ಕಾಗಿಯೇ ಅವರು ಮುಂದಿನ ಒಲಿಂಪಿಕ್ಸ್‌ ವರೆಗೂ ಮುಂದುವರಿಯಬೇಕು’ ಎಂದಿದ್ದಾರೆ.

ಟೋಕಿಯೊ ಯಶಸ್ಸಿಗೆ ಕಾರಣ
“ಟೋಕಿಯೊ ಒಲಿಂಪಿಕ್ಸ್‌ ಜಾವೆಲಿನ್‌ ತ್ರೋ ಫೈನಲ್‌ಗ‌ೂ ಮುನ್ನ ಎರಡು-ಮೂರು ತ್ರೋಗಳ ವಾರ್ಮ್ಅಪ್‌ ಮಾತ್ರ ಮಾಡಿದ್ದೆ. ಆದರೆ ಬಹಳಷ್ಟು ಸ್ಪರ್ಧಿಗಳು ಎರಡು ಗಂಟೆಗಳ ಮೊದಲೇ ಬಂದು ಅಭ್ಯಾಸ ಮಾಡಿದರು. ಸ್ಪರ್ಧೆಯ ಕಣದಲ್ಲಿ ನಾನು ಶ್ರೇಷ್ಠ ಮಟ್ಟದ ಎಸೆತ ಎಸೆಯಲು ಶಕ್ತಿಯನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿತ್ತು. ಜತೆಗೆ ಟೋಕಿಯೋದಲ್ಲಿ ಬಿಸಿಲಿನ ತಾಪವೂ ವಿಪರೀತವಾಗಿದ್ದ ಕಾರಣ ಕೋಚ್‌ ನನಗೆ ಈ ಸಲಹೆ ಕೊಟ್ಟಿದ್ದರು. ಇದರಿಂದ ನನ್ನ ಪ್ರದರ್ಶನ ಉತ್ತಮವಾಗಿ ಮೂಡಿಬಂದಿತು’ ಎಂದು ಚೋಪ್ರಾ ಹೇಳಿದರು.

ಇದನ್ನೂ ಓದಿ:ವಿರಾಟ್ ಕೊಹ್ಲಿ ಹೇಳಿದ ಒಂದು ಮಾತಿನಿಂದ ಇಶಾನ್ ಕಿಶಾನ್ ಬ್ಯಾಟಿಂಗ್ ವೈಖರಿಯೇ ಬದಲಾಯಿತು!

 

Advertisement
Advertisement

Udayavani is now on Telegram. Click here to join our channel and stay updated with the latest news.

Next