Advertisement

ಒಲಿಂಪಿಕ್‌ ಚಾಂಪಿಯನ್‌ ಬೈಲ್ಸ್‌ ಭರ್ಜರಿ ಪುನರಾಗಮನ

03:35 PM Jul 30, 2018 | |

ಕೊಲಂಬಸ್‌ (ಓಹಿಯೊ): ಒಲಿಂಪಿಕ್‌ ಜಿಮ್ನಾಸ್ಟಿಕ್ಸ್‌ ಚಾಂಪಿಯನ್‌, ಅಮೆರಿಕದ ಸಿಮೋನ್‌ ಬೈಲ್ಸ್‌ ಸ್ಪರ್ಧಾತ್ಮಕ ಕ್ರೀಡಾಕೂಟಕ್ಕೆ ಭರ್ಜರಿ ಪುನರಾಗಮನ ಸಾರಿದ್ದಾರೆ. ಕೊಲಂಬಸ್‌ನಲ್ಲಿ ನಡೆದ “ಯುಎಸ್‌ ಕ್ಲಾಸಿಕ್‌’ ಕೂಟದ ಸೀನಿಯರ್‌ ಆಲ್‌ರೌಂಡ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರು ಒಟ್ಟು 58.700 ಅಂಕಗಳನ್ನು ಕಲೆಹಾಕಿದರು.

Advertisement

ರಿಲೀ ಮೆಕಸ್ಕರ್‌ ದ್ವಿತೀಯ (57.500) ಹಾಗೂ 2017ರ ವಿಶ್ವ ಆಲ್‌ರೌಂಡ್‌ ಚಾಂಪಿಯನ್‌ ಮಾರ್ಗನ್‌ ಹರ್ಡ್‌ ತೃತೀಯ ಸ್ಥಾನಿಯಾದರು (56.350). ರಿಯೋ ಒಲಿಂಪಿಕ್ಸ್‌ನಲ್ಲಿ 4 ಚಿನ್ನ ಸಹಿತ 5 ಪದಕ ಗೆದ್ದು ವಿಶ್ವದಾಖಲೆಯನ್ನು ಸರಿದೂಗಿಸಿದ್ದ ಸಿಮೋನ್‌ ಬೈಲ್ಸ್‌, ಅನಂತರ ಯಾವುದೇ ಕೂಟಗಳಲ್ಲಿ ಪಾಲ್ಗೊಂಡಿರಲಿಲ್ಲ. ಮುಂದಿನ ಗುರಿ 2020ರ ಟೋಕಿಯೊ ಒಲಿಂಪಿಕ್ಸ್‌ ಎಂಬುದಾಗಿ ಬೈಲ್ಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next