Advertisement

ಟೋಕಿಯೊ ಕ್ರೀಡಾಂಗಣಗಳು ಅಭ್ಯಾಸಕ್ಕೆ ಮುಕ್ತ

11:25 PM Jul 27, 2020 | Hari Prasad |

ಟೋಕಿಯೊ: ಕೋವಿಡ್ 19 ಹಾವಳಿಯೊಂದು ಇಲ್ಲದೇ ಹೋಗಿದ್ದರೆ ಈ ವೇಳೆಗೆ ಟೋಕಿಯೊ ಒಲಿಂಪಿಕ್ಸ್‌ ಭರದಿಂದ ಸಾಗುತ್ತಿತ್ತು.

Advertisement

ವಿಶ್ವದ ಕ್ರೀಡಾಭಿಮಾನಿಗಳು ಪದಕಗಳ ಕುರಿತು ನಾನಾ ಲೆಕ್ಕಾಚಾರ ಹಾಕಿಕೊಂಡು ತಮ್ಮ ದೇಶದ ಕ್ರೀಡಾಳುಗಳ ಗೆಲುವಿಗೆ ಹಾರೈಸುತ್ತಿದ್ದರು.

ಆದರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಆದರೆ ಒಲಿಂಪಿಕ್ಸ್‌ಗೆಂದೇ ನಿರ್ಮಿಸಿದ ಕ್ರೀಡಾಂಗಣಳೇನೂ ಭಣಗುಡುತ್ತಿಲ್ಲ.

ಇದರಲ್ಲಿ ಕೆಲವನ್ನು ಕ್ರೀಡಾಪಟುಗಳ ಅಭ್ಯಾಸಕ್ಕೆ ಹಾಗೂ ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗಿದೆ.

ನೂತನವಾಗಿ ನಿರ್ಮಾಣಗೊಂಡ ‘ಕ್ಯಾನೋಯಿ ಸ್ಲಾಲಮ್‌ ಸೆಂಟರ್‌’ ಸೋಮವಾರ ಕ್ರೀಡಾಳುಗಳ ಅಭ್ಯಾಸಕ್ಕೆ ತೆರೆಯಲ್ಪಟ್ಟಿತು.

Advertisement

ನವೀಕೃತ ‘ಟಟ್ಸುಮಿ ಸ್ವಿಮ್ಮಿಂಗ್‌ ಸೆಂಟರ್‌’ ಆಗಸ್ಟ್‌ ನಡು ಭಾಗದಲ್ಲಿ ವಾಟರ್‌ ಪೋಲೊ ಮೊದಲಾದ ಜಲ ಕ್ರೀಡೆಗಳಿಗೆ ಲಭ್ಯವಾಗಲಿದೆ. ಕೋವಿಡ್ 19 ಪರಿಸ್ಥಿತಿಯನ್ನು ಗಮನಿಸಿ, ಇತರ ಕೆಲವು ಒಲಿಂಪಿಕ್ಸ್‌ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ತೆರೆಯಲಾಗುವುದು ಎಂದು ಟೋಕಿಯೊ ಮೆಟ್ರೋಪೊಲಿಟನ್‌ ಗವರ್ನ್ಮೆಂಟ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next