Advertisement

ಓಲೀ ಪೋಪ್‌ಗೆ ಬೆನ್‌ ಸ್ಟೋಕ್ಸ್‌ ಶುಭ ಹಾರೈಕೆ

06:45 AM Aug 10, 2018 | |

ಲಂಡನ್‌: ಪ್ರವಾಸಿ ಭಾರತದ ವಿರುದ್ಧ ಲಾರ್ಡ್ಸ್‌ನಲ್ಲಿ ಟೆಸ್ಟ್‌ಕ್ಯಾಪ್‌ ಧರಿಸಲಿರುವ ಯುವ ಆಟಗಾರ ಓಲೀ ಪೋಪ್‌ ಅವರಿಗೆ ಬೆನ್‌ ಸ್ಟೋಕ್ಸ್‌ ಶುಭ ಹಾರೈಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಡೇವಿಡ್‌ ಮಾಲನ್‌ ಬದಲು ಪೋಪ್‌ ಸ್ಥಾನ ಸಂಪಾದಿಸಲಿದ್ದಾರೆ ಎಂದು ಇಂಗ್ಲೆಂಡ್‌ ನಾಯಕ ಜೋ ರೂಟ್‌ ಬುಧವಾರವೇ ತಿಳಿಸಿದ್ದರು.  20ರ ಹರೆಯದ ಪೋಪ್‌ ಸರ್ರೆ ಕೌಂಟಿಯ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಆಗಿದ್ದಾರೆ.

Advertisement

“ಓಲೀ ಪೋಪ್‌ಗೆ ಗುಡ್‌ ಲಕ್‌. ಈ ಅದೃಷ್ಟ ಪಂದ್ಯದುದ್ದಕ್ಕೂ ಮುಂದುವರಿಯಲಿ. ಟೆಸ್ಟ್‌ ಪಾದಾರ್ಪಣೆಯ ರೋಮಾಂಚನವೆಲ್ಲ ನಿಮ್ಮದಾಗಲಿ’ ಎಂದು ಪೋಪ್‌ ಅವರಿಗೆ ಸ್ಟೋಕ್ಸ್‌ ಶುಭ ಹಾರೈಸಿದ್ದಾರೆ.

ಎಜ್‌ಬಾಸ್ಟನ್‌ನಲ್ಲಿ ಭಾರತವನ್ನು ಕಾಡಿದ ಬೆನ್‌ ಸ್ಟೋಕ್ಸ್‌ ನೈಟ್‌ ಕ್ಲಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಕಾರಣ ಲಾರ್ಡ್ಸ್‌ ಟೆಸ್ಟ್‌ ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ. ಸ್ಟೋಕ್ಸ್‌ ವಿರುದ್ಧವಾಗಿ ಸಾಕ್ಷ್ಯ ಹೇಳಲಾಗುತ್ತಿದ್ದು, ಸದ್ಯ ಈ ಕ್ರಿಕೆಟಿಗನ ಭವಿಷ್ಯ ಅನಿಶ್ಚಿತತೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next