1 ಆಲಿವ್ ಎಣ್ಣೆಗೆ ಪೇಸ್ಟ್ ಮಾಡಿದ ಸೌತೆಕಾಯಿ ಹಾಗೂ ಹಾಲು ಹಾಕಿ ಮುಖಕ್ಕೆ ಹಚ್ಚಿಕೊಂಡರೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಮಿಶ್ರಣವೂ ಚರ್ಮದ ಬಣ್ಣ ಸುಧಾರಿಸಲು ಸಹಕಾರಿ.
2 ಒಂದು ಚಮಚ ಆಲಿವ್ ಎಣ್ಣೆಗೆ
ಒಂದು ಚಮಚ ಗ್ಲಿಸರಿನ್ ಬೆರೆಸಿ ಮಾಸ್ಕ್ ತಯಾರಿಸಿ 20 ನಿಮಿಷ ಮುಖಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣವೂ ಚರ್ಮದಲ್ಲಿರುವ ಉರಿಯೂತವನ್ನು ಶಮನಗೊಳಿಸಿ ಚರ್ಮದ ವರ್ಣದ್ರವ್ಯ ಹೆಚ್ಚಾಗುವಂತೆ ಮಾಡುತ್ತದೆ.
3 ಆ್ಯಪಲ್ ಸೀಡರ್ ವಿನೆಗರ್, ಆಲಿವ್ ಎಣ್ಣೆ ಮತ್ತು ಸ್ವಲ್ಪ ನೀರನ್ನು ಹಾಕಿದ ಮಿಶ್ರಣವನ್ನು ಹಚ್ಚಿ 20 ನಿಮಿಷ ಕಾಲ ಹಾಗೇ ಮುಖದಲ್ಲಿ ಒಣಗಲು ಬಿಡಿ. ಅನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ಚರ್ಮದ ಸತ್ತ ಕೋಶಗಳನ್ನು ನಿವಾರಿಸುತ್ತದೆ. ಆ್ಯಪಲ್ ಸೀಡರ್ ವಿನೇಗರ್ ಚರ್ಮ ಬಿಳಿಯಾಗಿಸುವುದು. ಈ ಮಿಶ್ರಣವನ್ನು ಫ್ರಿvj…ನಲ್ಲಿಟ್ಟುಕೊಂಡು ಬಳಸಬಹುದು.
4 ಆಲಿವ್ ತೈಲ ಮತ್ತು ಹರಳೆಣ್ಣೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲವಿದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಿಕೊಂಡು ಚರ್ಮದ ವರ್ಣದ್ರವ್ಯ ಸರಿಪಡಿಸಲು ನೆರವಾಗುವುದು. ಒಂದು ಚಮಚ ಆಲಿವ್ ತೈಲ, ಒಂದು ಚಮಚ ಹರಳೆಣ್ಣೆ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ವೃತ್ತಾಕಾರದಲ್ಲಿ ಮುಖಕ್ಕೆ ಇದರಿಂದ ಮಸಾಜ್ ಮಾಡಿ. 5 ನಿಮಿಷ ಕಾಲ ಹಾಗೆ ಬಿಡಿ. ಅನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.
5 ಆಲಿವ್ ಎಣ್ಣೆಯಲ್ಲಿರುವ ಅಪರಿಮಿ ತವಾದ ಪೋಷಕಾಂಶವೂ ಕೂದಲುದುರುವುದನ್ನು ಕಡಿಮೆ ಮಾಡುತ್ತದೆ. ವಾರಕ್ಕೊಮ್ಮೆ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ.
6 ಒಣ ತ್ವಚ್ಛೆ ಇರುವವರು ಆಲಿವ್ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡರೆ ಮೃದುವಾದ ತ್ವಚ್ಛೆ ಪಡೆಬಹುದು.
Advertisement