Advertisement
ಹೌದು. ಈ ಹಿರಿಯ ಕಲಾವಿದೆಯ ಹೆಸರು ನಾಗಮ್ಮ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡಬೋಗನಹಳ್ಳಿ ಇವರೂರು. 76 ವಯಸ್ಸಿನ ಈ ಹಿರಿಯ ಕಲಾವಿದೆ, ಪಾರಂಪರಿಕ ಗೊಂಬೆಯಾಟ ಕಲೆಯನ್ನೇ ನಂಬಿ ಜೀವಿಸಿದವರು. ಈ ಕಲೆಗಾಗಿಯೇ ಜೀವ ಮುಡುಪಿಟ್ಟ ನಾಗಮ್ಮ ಇದೀಗ ತೀವ್ರ ಬಡತನ, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಜತೆಗೆ ಒಂದಷ್ಟು ಅನಾರೋಗ್ಯವೂ ಇದೆ. ನಡೆದಾಡಲೂ ಆಗದ ಪರಿಸ್ಥಿತಿ.ಸದಾ ಇಬ್ಬರು ಸಹಾಯಕರು ಬೇಕೇ ಬೇಕು. ಸದ್ಯ ಅಳಿಯನ ಊರಲ್ಲಿ ಆರೈಕೆ ಪಡೆಯುತ್ತಿದ್ದಾರೆ.
ಎಲ್ಲ ಸದಸ್ಯರು ಕೂಡ ಪ್ರಶಸ್ತಿ ಆಯ್ಕೆ ಮಾಡಬೇಕಿತ್ತು. ಈ ವೇಳೆ ನಾಗಮ್ಮ ಅವರು ಸಂದರ್ಶನಕ್ಕೆ ಸಿಕ್ಕಿರಲಿಲ್ಲ.
Related Articles
ಪ್ರದಾನವಾಗಿದ್ದು, ಈ ಹಿರಿಯ ಕಲಾವಿದೆ ಇಬ್ಬರು ಸಹಾಯಕರೊಂದಿಗೆ ವೇದಿಕೆ ಹತ್ತಿ, ತಮ್ಮ ಕಲಾ ಜೀವಮಾನದ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿ ಖುಷಿ ಪಟ್ಟಿದ್ದರು. ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ನಗದು ಚೆಕ್ ಕೂಡ ಕೊಡಲಾಗಿದ್ದು, ಒಟ್ಟು 5 ಜನ ಗೌರವ ಪ್ರಶಸ್ತಿ 9 ಜನ ವಾರ್ಷಿಕ ಪ್ರಶಸ್ತಿ (25 ಸಾವಿರ ನಗದು) ಪುರಸ್ಕೃತರಿಗೆಲ್ಲ ಚೆಕ್ ಕೊಡಲಾಗಿತ್ತು.
Advertisement
ಆದರೆ ಈ ಹಿರಿಯ ಕಲಾವಿದೆ ನಾಗಮ್ಮ ಅವರಿಗೆ ಕೊಟ್ಟ ಚೆಕ್ (ಪ್ರಶಸ್ತಿ ಕೊಡುವ ವೇಳೆ ಕವರ್‌ನಲ್ಲಿಟ್ಟು ಕೊಡಲಾಗಿತ್ತು)ಗೆ ಅಕಾಡೆಮಿಯ ರಿಜಿಸ್ಟ್ರಾರ್ ಸಹಿಯೇ ಮಾಡಿಲ್ಲ. ಅದನ್ನು ನಾಗಮ್ಮ ಅವರೂ ನೋಡಿಲ್ಲ. ತಮ್ಮೂರಿಗೆ ಹೋಗಿ ಬ್ಯಾಂಕ್ ಖಾತೆಗೆ ಚೆಕ್ ಹಾಕಿದ್ದು, ಅದು ವಾಪಸ್ ಆಗಿದೆ. ಹಣ ಜಮೆಯಾಗದ ಕುರಿತು ಅಕಾಡೆಮಿ ಸಿಬ್ಬಂದಿಗೆ ತಿಳಿಸಿದರೆ, ಚೆಕ್ ಕಳುಹಿಸಿ ಆ ಮೇಲೆ ಮತ್ತೊಂದು ಚೆಕ್ ಕಳುಹಿಸುತ್ತೇವೆ, ಇಲ್ಲವೇ ಬ್ಯಾಂಕ್ ಖಾತೆಗೆ ಹಾಕ್ತೀವಿ ಎಂಬ ಉತ್ತರ ಬಂದಿದೆ.
ಕಳೆದ ಏ.18ರಂದೇ ಪ್ರಶಸ್ತಿ ಮತ್ತು ಚೆಕ್ ಕೈ ಸೇರಿದರೂ ಆ ಹಣ ಸಿಕ್ಕಿಲ್ಲ. ಪ್ರಶಸ್ತಿಯ ಹಣದಲ್ಲೇ ಒಂದಷ್ಟು ಆಸ್ಪತ್ರೆಯ ಖರ್ಚು ಪೂರೈಸಿಕೊಳ್ಳಬೇಕೆಂದಿದ್ದ ಕಲಾವಿದೆ, ಕಳೆದೊಂದು ವಾರದಿಂದ ಇಬ್ಬರು ಸಹಾಯಕರೊಂದಿಗೆ 2-3 ಬಾರಿ ಬ್ಯಾಂಕ್‌ಗೆ ಅಲೆಯುವಂತಾಗಿದೆ. ಅದೂ ಸದ್ಯ ಕಲಾವಿದೆ ಇರುವ ಊರಿಂದ 68 ಕಿ.ಮೀ ದೂರದಲ್ಲಿ ಅವರು ಖಾತೆ ಹೊಂದಿರುವ ಬ್ಯಾಂಕ್ ಇದೆ.
ಒಟ್ಟಾರೆ ಅಧಿಕಾರಿ-ಸಿಬ್ಬಂದಿಗಳ ಬೇಜವಾಬ್ದಾರಿ ಯಿಂದ ಈ ಹಿರಿಯ ಕಲಾವಿದೆಯೊಬ್ಬರು ಪ್ರಶಸ್ತಿ ಹಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅಕಾಡೆಮಿ ಸದಸ್ಯರು, ಹಿರಿಯ ಕಲಾವಿದರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಪ್ರದಾನ ದಿನದಂದು ಎಲ್ಲರಿಗೂ ಚೆಕ್ ಕೊಡಲಾಗಿದೆ. ಆದರೆ ನಾಗಮ್ಮ ಅವರಿಗೆ ಕೊಟ್ಟ ಚೆಕ್‌ಗೆ ಸಹಿ ಮಾಡದೇ ಇರುವುದು ಬಳಿಕ ಗೊತ್ತಾಗಿದೆ. ಈಗಾಗಲೇ ಒಂದು ಬಾರಿ ಆರ್ ಟಿಜಿಎಸ್ ಮಾಡಿಸಿದ್ದು, ಅದೂ ರಿಟನ್ ಆಗಿದೆ. ಕೂಡಲೇ ಅವರಿಗೆ ಪ್ರಶಸ್ತಿ ಹಣ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು.ಎನ್. ಹೇಮಾವತಿ, ರಿಜಿಸ್ಟ್ರಾರ್,
ಕರ್ನಾಟಕ ಬಯಲಾಟ ಅಕಾಡೆಮಿ. ಶ್ರೀಶೈಲ ಕೆ.ಬಿರಾದಾರ