Advertisement

ತುಳಸಿ ಗಿಡದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ ಗುಬ್ಬಿ

06:28 PM Jul 28, 2023 | Team Udayavani |

ಭರಮಸಾಗರ: ಸಮೀಪದ ಲಕ್ಷ್ಮೀಸಾಗರ ಗ್ರಾಮದ ಅಂಗನವಾಡಿ ಕೇಂದ್ರದ ಆವಣದಲ್ಲಿರುವ ತುಳಸಿ ಗಿಡದಲ್ಲಿ ಗುಬ್ಬಿಯೊಂದು ಗೂಡು ಕಟ್ಟಿಕೊಂಡು ಮೂರು ಮರಿಗಳಿಗೆ ಜನ್ಮ ನೀಡಿ ಲಾಲನೆ ಪಾಲನೆಯಲ್ಲಿ ನಿರತವಾಗಿರುವುದು ಗಮನ ಸೆಳೆಯುತ್ತಿದೆ.

Advertisement

ಅಂಗನವಾಡಿ ಕೇಂದ್ರಗಳೆಂದರೆ ಕೇವಲ ಚಿಣ್ಣರ ಆರೈಕೆ ಕೇಂದ್ರವಲ್ಲ ಇಲ್ಲಿ ಪಕ್ಷಿಗಳ ಸಂತಾನ ಮತ್ತು ಪಾಲನೆ ಕೂಡ ಕಾಣಬಹುದು ಎಂಬುದಕ್ಕೆ ಇಲ್ಲಿನ ಘಟನೆ ನಿದರ್ಶನ ನೀಡಿದಂತಿದೆ.

ಕೇಂದ್ರದ ಆವರಣದಲ್ಲಿ ಯಾವುದೇ ಗಲಾಟೆ ಇಲ್ಲದೆ ತುಂಬಾ ಶಾಂತಿಯ ವಾತಾವರಣ ಇರುವ ಕಾರಣ ಗುಬ್ಬಿ ಗೂಡು ಕಟ್ಟಲು ಕಾರಣ ಎನ್ನಲಾಗಿದೆ. ತುಳಸಿ ಗಿಡದಲ್ಲಿನ ಗುಬ್ಬಿ ಗೂಡನ್ನು ಮತ್ತು ಮರಿಗಳನ್ನು ಇಲ್ಲಿನ ಅಂಗನವಾಡಿ ಶಿಕ್ಷಕಿ ನಿತ್ಯ ಪುಟಾಣಿ ಮಕ್ಕಳಿಗೆ ವೀಕ್ಷಣೆಗೆ ಅವಕಾಶ ನೀಡಿ ಪಕ್ಷಿ ಪ್ರಪಂಚದ ಕಿರು ಪರಿಚಯ ಮಾಡಿಕೊಡಲಾಗುತ್ತಿದೆ.

ಇತ್ತ ಗೂಡು, ಗೂಡಿನ ಮರಿಗಳನ್ನು ಶಿಶು ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಡಿ.ಪುಷ್ಪ ರವರು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ. ಗುಬ್ಬಿ ಗೂಡಿಗೆ ಅಗತ್ಯ ರಕ್ಷಣೆ ನೀಡಿ ಮರಿಗಳ ಪೋಷಣೆಗೆ ನೆರವಾಗುವಂತೆ ಸಲಹೆ ನೀಡಿ ಪ್ರಾಣಿಪಕ್ಷಿಗಳ ಕುರಿತು ತಮ್ಮ ಪ್ರೀತಿ ವಾತ್ಸಲ್ಯ ವನ್ನು ಮಹಿಳಾ ಅಧಿಕಾರಿ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next