ಬಂಕಾಪುರ: ಪಟ್ಟಣದ ಪುರಾತನ ಜಮಾರಸಿ ಬಾವಿ ಸ್ವಚ್ಛತೆಗೆ ಮುಂದಾದ ಯುವ ಸಮೂಹದ ಕಾರ್ಯಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಕಾರ್ಯಕ್ರಮದಡಿ ಕೈಗೊಳ್ಳಲಾದ ಈ ಪುರಾತನ ಬಾವಿ ಸ್ವಚ್ಛತಾ ಕಾರ್ಯವನ್ನು ಸುಮಾರು ಮೂರು ತಿಂಗಳ ಹಿಂದೆಯೇ ಆರಂಭಿಸಲಾಗಿತ್ತು. ಆದರೆ, ಹಣಕಾಸಿನ ತೊಂದರೆಯಿಂದ ಇದುವರೆಗೂ ಪೂರ್ಣಗೊಂಡಿರಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಂಗಾಧರ ಶೆಟ್ಟರ, ಸೋಮಶೇಖರ ಗೌರಿಮಠ, ಶಿವಾನಂದ ದೇವಸೂರ ಸೇರಿದಂತೆ ಸಂಘದ ಹಲವು ಸದಸ್ಯರು ಸಾರ್ವಜನಿಕರ ಸಹಕಾರದೊಂದಿಗೆ ಜಮಾರಸಿ ಬಾವಿ ಸ್ವಚ್ಛತೆಗೆ ಮುಂದಾದರು. ಪ್ರಥಮ ಹಂತದಲ್ಲಿ ಪುರಸಭೆಯವರು ಇವರೊಂದಿಗೆ ಕೈಜೋಡಿಸಿದರು.
ಬಾವಿಯ ಸ್ವತ್ಛತೆಗೆ ಮುಂದಾದಾಗ ಕೆಲ ಶಿಲಾಶಾಸನಗಳು ಲಭ್ಯವಾಗಿದ್ದು, ಇದರಿಂದ ಇದು ಜಮಾರಸಿ ಬಾವಿಯಾಗಿರದೇ ದೇಮರಸಿಯ ಬಾವಿಯಾಗಿರುವುದಾಗಿ ಶಿಲಾಶಾಸನಗಳಿಂದ ತಿಳಿದು ಬಂದಿದೆ. ಶಿಲಾಶಾಸನ ಹಳೆಗನ್ನಡದಲ್ಲಿರುವುದರಿಂದ ಇತಿಹಾಸ ತಜ್ಞರಿಂದ ಸಂಪೂರ್ಣ ಮಾಹಿತಿ ಬೆಳಕಿಗೆ ಬರಬೇಕಿದೆ.
ಪುರಾತನ ಬಾವಿಯ ಮುಕ್ಕಾಲು ಭಾಗ ಈಗ ಸ್ವಚ್ಛಗೊಂಡಿದ್ದು, ಇನ್ನುಳಿದ ಕಾಲುಭಾಗ ಸ್ವಚ್ಛವಾಗಬೇಕಿದೆ. ಇದು ಮಣ್ಣು, ತಾಜ್ಯ ವಸ್ತುಗಳಿಂದ ತುಂಬಿದ್ದು, ಹಣಕಾಸಿನ ನೆರವಿನ ಅವಶ್ಯಕತೆಯಿದೆ. ಪುರಸಭೆಯವರು ಲಕ್ಷಾಂತರ ರೂ. ಖರ್ಚು ಮಾಡಿ ನೀರಿನಟ್ಯಾಂಕ್ ನಿರ್ಮಿಸುವ ಬದಲು ಇಂತಹಪುರಾತನ ಬಾವಿಗಳ ಅಭಿವೃದ್ಧಿ ಹಾಗೂಸಂರಕ್ಷಣೆಗೆ ಮುಂದಾಗಬೇಕಿದೆ. ಆ ಮೂಲಕನೀರು ಸಂಗ್ರಹಿಸಿ ಪಟ್ಟಣದ ಜನತೆಯ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ಪುರಾತನ ಬಾವಿಗಳ ಅಭಿವೃದ್ಧಿಗೆ 2ಲಕ್ಷ ರೂ. ಮೀಸಲಿರಿಸಲಾಗಿತ್ತು.ಆದರೆ ಅದನ್ನು ದಿಢೀರ್‌ನೆ ಬದಲಾಯಿಸಿರುವುದು ವಿಷಾದದಸಂಗತಿ. ಪುರಾತನ ಬಾವಿಗಳನ್ನುಅಭಿವೃದ್ಧಿಪಡಿಸಿ ಸಂಪುಗಳನ್ನಾಗಿಮಾಡಿ ಪಟ್ಟಣದ ನೀರಿನ ಸಮಸ್ಯೆ ನಿವಾರಿಸಬಹುದು. –
ಸೋಮಶೇಖರ ಗೌರಿಮಠ, ಪುರಸಭೆ ಮಾಜಿ ಸದಸ್ಯ.
ಜಮಾರಸಿ ಬಾವಿ ಪುರಸಭೆ ವ್ಯಾಪ್ತಿಗೆ ಬಾರದ ಕಾರಣ ಅದರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲುಮೇಲಧಿಕಾರಿಗಳಿಂದ ಅನುಮತಿಪಡೆದು ಮುಂದಿನ ನಿರ್ಣಯಕೈಗೊಳ್ಳಲಾಗುವುದು.
-ರೇಣುಕಾ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ.
15ನೇ ಶತಮಾನ ಪುರಾತನ ಬಾವಿಯನ್ನು ಪ್ರಾಚ್ಯವಸ್ತು ಇಲಾಖೆ ಅನುಮತಿ ಮೇರೆಗೆಪುರಸಭೆ ವ್ಯಾಪ್ತಿಗೊಳಪಡಿಸಿ ಅಭಿವೃದ್ಧಿ ಪಡಿಸಬೇಕು.
– ಗಂಗಾಧರ ಮಾ.ಪ. ಶೆಟ್ಟರ, ಆರ್‌ಎಸ್‌ಎಸ್ ಮುಖಂಡ
-ಸದಾಶಿವ ಹಿರೇಮಠ