Advertisement
ಮನೆಯ ಅಚ್ಚುಕಟ್ಟು ನಿರ್ವಹಣೆಗೆ ಬಹುಮುಖ್ಯ ತಾಳ್ಮೆ. ಮನೆಯ ಶ್ರೀಮಂತಿಕೆಯನ್ನು ಹೆಚ್ಚಿಸುವುದಕ್ಕಿಂತ ಮುಖ್ಯವಾಗಿ ಸಾಂಪ್ರಾದಾಯಿಕ ಲುಕ್ ನೀಡುವುದಕ್ಕೆ ತುಂಬಾ ಗಮನ ಹರಿಸುತ್ತೇವೆ. ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ, ಅನೇಕ ಶ್ರೀಮಂತಿಕೆ ವಸ್ತುಗಳು ತಂದಿಟ್ಟು ಮನೆಯ ಕಳೆಯನ್ನು ಹೆಚ್ಚಿಸುತ್ತೇವೆ. ಆದರೆ ಇದೊಂದು ದುಂದು ವೆಚ್ಚವಷ್ಟೇ, ನಮ್ಮಲ್ಲಿ ಸೃಜನಾಶೀಲ ಕಲೆಯೊಂದಿದ್ದರೆ ಸಾಕು, ಮನೆಯಲ್ಲಿ ಬಿದ್ದಿರುವ ಕಸ, ಕಡ್ಡಿ, ಗಾಜಿನ ಬಾಟಲಿಗಳಿಂದ ಕಲಾಕೃತಿಗಳನ್ನು ತಯಾರಿಸಬಹುದು. ಅಂತಹ ಹಲವಾರು ಮುಖ್ಯ ಸಂಗತಿಗಳು ಇಲ್ಲಿವೆ.
ಮನೆಯಲ್ಲಿ ಉಪಯೋಗಿಸಿದ ಗಾಜಿನ ಬಾಟಲಿಗಳನ್ನು ಎಸೆಯದೇ ಅದರಿಂದ ನಮ್ಮ ಮನೆ ಶೃಂಗಾರಕ್ಕೆ ಬಳಕೆ ಮಾಡಬಹುದು. ಗಾಜಿನ ಬಾಟಲಿಗಳಿಂದ ಅವುಗಳ ಮೇಲೆ ಬಣ್ಣ ಬಣ್ಣದ ದಾರಗಳು, ಇಲ್ಲವೇ ಬಣ್ಣ ಬಣ್ಣದ ದಾರಗಳನ್ನು ಸುತ್ತಿ ಅದನ್ನು ನಾವು ಹೂ ಕುಂಡಲಿಗಳನ್ನಾಗಿ ಮಾಡಿ, ಮನೆಯ ಅವರಣದಲ್ಲಿ ಇಡಬಹುದು. ಇನ್ನು ಪ್ಲಾಸ್ಟಿಕ್ ಬಾಟಲಿಗಳಿಂದ ಅನೇಕ ರೀತಿಯ ಪ್ರಯೋಜನಗಳಿದ್ದು, ಅವುಗಳನ್ನು ವಿವಿಧ ಕಲಾಕೃತಿಯಾಗಿ ಕತ್ತರಿಸಿ, ಅದನ್ನೇ ನಾವು ಹೂ ಕುಂಡಲಿಯನ್ನಾಗಿ ಮಾಡಿ, ಅದಕ್ಕೆ ವೈವಿಧ್ಯಮಯವಾದ ಬಣ್ಣವನ್ನು ಲೇಪಿಸಿ ಮನೆಯ ಷೋ ಕೇಸ್‌ಗಳಲ್ಲಿ ಇಟ್ಟರೇ ಮನೆಯ ಶೃಂಗಾರ ಹೆಚ್ಚಬಹುದು. ಗಾಜಿನ ಬಾಟಲಿಯ ದೀಪ
ಮನೆಯ ಗಾಜಿನ ಬಾಟಲಿಗಳಿಂದ ದೀಪದ ಹಣತೆಗಳನ್ನಾಗಿ ಮಾಡಿ, ಮನೆಯ ಶೃಂಗಾರ ಹೆಚ್ಚಿಸುವುದು ಕೂಡ ಸೃಜನಾತ್ಮಕ ಕಲೆ. ಗಾಜಿನ ಬಾಟಲಿಗಳ ಮೇಲೆ ಫೆವಿಕ್ವಿಕ್‌ನಿಂದ ಬಣ್ಣದ ಮಿಂಚು ಅಥವಾ ಬಣ್ಣದ ಕಾಗದವನ್ನು ಅಂಟಿಸಿ, ಅನಂತರ ಮೇಣದ ಬತ್ತಿ (ಕ್ಯಾಂಡಲ್ ಗಳನ್ನು) ಇಟ್ಟು, ದೀಪ ಹಚ್ಚಬಹುದು. ಗಾಜಿನ ಬಾಟಲಿಗಳನ್ನು ಹೀಗೂ ಬಳಸಬಹುದು. ಗಾಜಿನ ಬಾಟಲಿಯಲ್ಲಿ ಗೋಲಿಗಳನ್ನು ಹಾಕಿ, ಅದಕ್ಕೆ ಮೇಲೆ ಪ್ಲಾಸ್ಟಿಕ್ ಹೂ ಇಟ್ಟು ಮನೆಯ ಟಿವಿ, ಷೋ ಕೇಸ್‌ಗಳಲ್ಲಿ ಇಡಬಹುದು. ಹಾಗೆಯೇ, ಗಾಜಿನ ಬಾಟಲಿಗಳಲ್ಲಿ ನೀರು ಹಾಕಿ, ಮೀನು ಬಿಟ್ಟರೆ, ಮಿನಿ ಫಿಶ್ ಟ್ಯಾಂಕ್ ಆಗಿ ಮಾಡಬಹುದು.
Related Articles
ಮನೆಯಲ್ಲಿರುವ ಅಡುಗೆ ಆಯಿಲ್ ಡಬ್ಬಗಳನ್ನು ಎಸೆಯದೇ, ಅದನ್ನು ಕೂಡ ಮನೆಯ ಸೌಂದರ್ಯಕ್ಕೆ ಬಳಕೆ ಮಾಡಬಹುದು. ಡಬ್ಬಗಳಿಗೆ ಚಿತ್ರಾಕೃತಿ ಇರುವ ಬಣ್ಣದ ಬಟ್ಟೆಯನ್ನು ಸುತ್ತಿ ಅದನ್ನು ಸುಂದರ ಟೇಬಲ್ ಥರ ಪರಿವರ್ತಿಸಿ ಪುಸ್ತಕ, ಅಗತ್ಯ ವಸ್ತುಗಳನ್ನು ಇಡಲು ಬಳಸಬಹುದು. ಇಂತಹ ಸಾಮಗ್ರಿಗಳಿಂದ ಮನೆಯೂ ಸುಂದರವಾಗಿ ಕಾಣುತ್ತದೆ.
Advertisement
ಶಿವ ಸ್ಥಾವರಮಠ