Advertisement

ಓದಿದ ಶಾಲೆ ವಿದ್ಯುತ್‌ ಬಿಲ್‌ ಪಾವತಿಸಿದ ಹಳೇ ವಿದ್ಯಾರ್ಥಿ

04:01 PM Jun 21, 2023 | Team Udayavani |

ನಂಜನಗೂಡು: ನಗರದ ಬಾಲಕರ ಸರ್ಕಾರಿ ಪ್ರೌಢಶಾಲೆಯ 19 ಸಾವಿರ ರೂ. ವಿದ್ಯುತ್‌ ಬಿಲ್‌ಅನ್ನು ಹಳೇ ವಿದ್ಯಾರ್ಥಿ ಪಾವತಿಸುವ ಮೂಲಕ ತಾನು ಓದಿದ ಶಾಲೆಗೆ ನೆರವಾಗಿದ್ದಾನೆ.

Advertisement

ಪ್ರಸ್ತುತ ಥೈಲ್ಯಾಂಡ್‌ ನಲ್ಲಿರುವ ಯಶವಂತ ಉದಯವಾಣಿಯಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಗಮನಿಸಿ, ತಮ್ಮೊಂದಿಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಗೆಳೆಯರನ್ನು ಸಂಪರ್ಕಿಸಿ, ವಿದ್ಯುತ್‌ ಬಿಲ್‌ ಬಾಕಿ ಎಷ್ಟು ಇದೆ ಎಂಬ ಮಾಹಿತಿ ಪಡೆದು, 19,000 ರೂ. ಅನ್ನು ಪಾವತಿಸಿದ್ದಾರೆ.

ಸದ್ಯ ಬಾಲಕರ ಶಾಲೆಯ ವಿದ್ಯುತ್‌ ಸಮಸ್ಯೆ ಬಗೆಹರಿದಿದೆ. ಇನ್ನೂ ಬಾಲಕಿಯರ ಸರ್ಕಾರಿ ಸೇರಿ 15 ಸರ್ಕಾರಿ ಶಾಲೆಗಳು ವಿದ್ಯುತ್‌ ಬಿಲ್‌ ಬಾಕಿ ಯಾರು ಪಾವತಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next