Advertisement

ಎಲೆಯುದುರೋ ಕಾಲದಲ್ಲಿ ಹಳೆಯ ಹಾಡು ಕೇಳಿತು!

03:45 AM Apr 19, 2017 | Harsha Rao |

ಇಷ್ಟು ವರ್ಷದ ದಾಂಪತ್ಯದಲ್ಲಿ ಮನಸ್ಸಿಗೆ ತಂಪೆನಿಸುವ ಯಾವ ಘಟನೆಗಳೂ ನೆನಪಾಗಲಿಲ್ಲ. ನೆನಪು ಮಾಡಿ ಕಚಗುಳಿ ಇಡುತ್ತಿದ್ದುದು ಆ ಪ್ರೇಮಪತ್ರಗಳು ಮಾತ್ರ. ಅದನ್ನು ಬರೆದವರೆಲ್ಲಾ ಈಗ ಎಲ್ಲೆಲ್ಲಿ ಇದ್ದಾರೋ? ಅವರಿಗೆ ನನ್ನ ನೆನಪು ಇನ್ನೂವರೆಗೂ ಇರುತ್ತಾ? ಅವರಿಗೂ ಮದುವೆಗಳಾಗಿ ಇಷ್ಟು ಹೊತ್ತಿಗೆ ನನ್ನ ಹಾಗೆ ತಲೆ ನೆರೆತಿರುತ್ತದೆ ಎನ್ನಿಸಿತು…

Advertisement

ನೀ ಬರೆದ ಒಲವಿನ ಓಲೆ 
ನೀಡುತಿದೆ ಪುಳಕದ ಮಾಲೆ 
ಇಂದೆನಗೆ ನಲಿವಿನ ವೇಳೆ 
ತೂಗಿದೆ ಪ್ರೇಮದ ಉಯ್ನಾಲೆ 
ಹಾಡು ಕೇಳುತ್ತಾ ಅವಳು ಪುಳಕಗೊಳ್ಳುತ್ತಿದ್ದಳು. ಮನಸ್ಸು ಹಳೆಯ ನೆನಪಿನೆಡೆಗೆ ಜಾರಿತ್ತು. ಕಾಲೇಜಿನ ಸುಂದರಿ ಅವಳು. ಅವಳಿಗೆ ಮನಸೋತು ಹುಡುಗರು ಬರೆಯುತ್ತಿದ್ದ ಪತ್ರಗಳಿಗೆ ಲೆಕ್ಕವಿಲ್ಲ. ಒಬ್ಬನಂತೂ ಕೆಂಪುಶಾಯಿಯಲ್ಲಿ ಪತ್ರ ಬರೆದು ಅದು ತನ್ನ ರಕ್ತದಲ್ಲಿ ಬರೆದದ್ದು ಎಂಬಂತೆ ಹೇಳಿಕೊಂಡಿದ್ದ. ಅವಳೂ ಅವಳ ಗೆಳತಿಯೂ ಅದನ್ನೋದುತ್ತಾ ಬಿದ್ದು ಬಿದ್ದು ನಕ್ಕಿದ್ದರು. ಸೀರಿಯಸ್‌ನೆಸ್‌ ಇಲ್ಲದ, ಎಲ್ಲವನ್ನೂ ಹಾಸ್ಯವಾಗಿಯೇ ನೋಡುವ ಹದಿಹರೆಯದ ರಮ್ಯಚೈತ್ರ ಕಾಲ ಅದು. 

ಮೊದಲ ಪಿಯುಸಿಯಿಂದಲೇ ಅವಳಿಗೆ ಪ್ರೇಮಪತ್ರಗಳು ಬರಲು ಶುರುವಾಗಿತ್ತು. ಅವಳು ಕುಳಿತಿದ್ದಲ್ಲಿಗೆ ನೇರವಾಗಿಯೇ ಹುಡುಗರು ಯಾವ ಅಳುಕಿಲ್ಲದೆ ತಂದುಕೊಡುತ್ತಿದ್ದರು. ಅವಳಿಗೆ ಮೊದಮೊದಲು ಗಾಬರಿಯಾಗುತ್ತಿತ್ತು. ಸಂಕೋಚವಾಗುತ್ತಿತ್ತು. ಯಾರಾದರೂ ನೋಡಿದರೆ? ಏನಾದರೂ ತಿಳಿದುಕೊಂಡರೆ, ಏನು ಗತಿ? ಅನಿಸುತ್ತಿತ್ತು. ಅಪ್ಪನ ರೌದ್ರಾವತಾರದ ಮುಖ, ಅಮ್ಮನ ಕಿಡಿಕಾರುವ ಕಂಗಳು ನೆನಪಾದರೆ ಜಿಲ್ಲೆಂದು ಬೆವರುತ್ತಿದ್ದಳು. ಇದೆಲ್ಲಾ ಶುರುವಿನ ದಿನಗಳಲ್ಲಿ ಮಾತ್ರ. ನಂತರ, ಆ ಪತ್ರಗಳಿಗೆ ಅವಳೇ ಹೊಂದಿಕೊಂಡು ಬಿಟ್ಟಳು. 

ಯಾರಾದರೂ ಪತ್ರ ತಂದುಕೊಟ್ಟರೆ ನಿರ್ವಿಕಾರವಾಗಿ ತೆಗೆದುಕೊಳ್ಳುತ್ತಿದ್ದಳು. ಅವಳು ಸ್ವೀಕರಿಸುವುದನ್ನು ಕಂಡರೆ ಹುಡುಗರಿಗೆ ಧನ್ಯತಾ ಭಾವ. ಮಾತಿನಲ್ಲಿ ವಿವರಿಸಲಾಗದಂಥ ಪುಳಕ. ಅವಳಿಗೋ ಒಳಗೊಳಗೇ ನಗು. ಪತ್ರ ತೆಗದುಕೊಂಡು ಲೇಡೀಸ್‌ ರೂಮಿಗೆ ಹೋಗಿ ಗೆಳತಿಯರೊಡನೆ ಓದಿ ಬಿದ್ದು ಬಿದ್ದೂ ನಗುವುದು. ಆಮೇಲೆ ಅದನ್ನು ಅಲ್ಲಿಯೇ ಹರಿದು ಎಸೆದು ಬರುತ್ತಿದ್ದಳು. ಆ ಪತ್ರಗಳಲ್ಲಿದ್ದ ಉಪಮಾನ ಉಪಮೇಯಗಳು ಕವಿತೆಗಳೊ ರಾಮ ರಾಮಾ! ಎಲ್ಲಿಂದ ಹುಡುಕುತ್ತಾರಪ್ಪಾ ಇಂಥ ಪದಗಳನ್ನು ಎನಿಸುತ್ತಿತ್ತು. 

ಒಬ್ಬನು ಬರೆದಿದ್ದ; “ಚೆಲುವೆ, ನೀನು ನಡೆವ ಹಾದಿಯನ್ನು ಹೂವುಗಳಿಂದ ಅಲಂಕರಿಸುತ್ತೇನೆ. ನೀನು ನನ್ನ ಪ್ರೇಮವನ್ನು ಒಪ್ಪಿಕೊಂಡರೆ ನಿನಗೆ ಸಿಗುವ ಮೊದಲ ಕಾಣಿಕೆಯೇನು ಗೊತ್ತೇ? ನಿನ್ನ ಮುದ್ದಾದ ಪಾದಗಳನ್ನು ಗೆಜ್ಜೆಗಳಿಂದ ಅಲಂಕರಿಸುತ್ತೇನೆ. ನೀನು ಘಲ್ಲು ಘಲ್ಲೆಂದು ಗೆಜ್ಜೆ ಶಬ್ದ ಮಾಡುತ್ತಾ ನಡೆದು ಬರುತ್ತಿದ್ದರೆ ನನ್ನೆದೆ ವೀಣೆ ಮೀಟಿದಂತಾಗುತ್ತದೆ’. ಅವಳಿಗೆ ಅದನ್ನು ಓದುವಾಗ ನಗೆಯುಕ್ಕಿದರೂ ಒಳಗಡೆಯೇ ಪುಳಕವಾಗದೇ ಇರಲಿಲ್ಲ. 

Advertisement

ಇನ್ನೊಬ್ಬ ಬರೆದಿದ್ದ “ನನಗೆ ನಿನ್ನೊಡನೆ ಮಳೆಯಲ್ಲಿ ನೆನೆಯುತ್ತಾ ಕುಣಿಯುವಾಸೆ. ಮಳೆಬಿಲ್ಲಿನ ಮೇಲೆ ಕುಳಿತು ನಿನ್ನೊಡನೆ ಸವಾರಿ ಮಾಡುವಾಸೆ’. ಅವಳಿಗೆ ಅದನ್ನು ಓದುತ್ತಾ ಹುಬ್ಬು ಮೇಲೇರಿತ್ತು. ಅಬ್ಟಾ, ಹೀಗೂ ಬರೀತಾರಾ? ಮಳೆಯಲ್ಲಿ ನೆಂದರೆ ಶೀತ ಆಗಲ್ವಾ? ಇಶಿÂà, ಇವನೊಬ್ಬ ಗೂಬೆ ಎಂದುಕೊಂಡಿದ್ದಳು.

ಈಗೆಲ್ಲಾ ಇದು ಗತಕಾಲದ ನೆನಪು. ಅಪ್ಪಧಿ- ಅಮ್ಮನ ¸‌ಯಕ್ಕೆ ಅವಳು ಒಂದು ಪತ್ರವನ್ನೂ ಇಟ್ಟುಕೊಂಡಿರಲಿಲ್ಲ. ಎಲ್ಲವನ್ನೂ ಹರಿದು ಹಾಕಿದ್ದಳು. ಆದರೆ ಅದನ್ನು ಓದಿದ್ದ ಅವೆಲ್ಲವೂ ಅವಳ ತಲೆಯಲ್ಲಿ ಎಲ್ಲವೂ ¸‌ದ್ರವಾಗಿ ಕುಳಿತಿತ್ತು. ಈಗವಳು ಕಾಲನ ಓಟದೊಂದಿಗೆ ಓಡುತ್ತಾ ಜೀವನ ಸಂಧ್ಯೆಗೆ ಕಾಲಿಟ್ಟಿದ್ದಾಳೆ. ಈಗೆಲ್ಲವೂ ಬರೀ ನೆನಪುಗಳೊಂದಿಗೆ ಒಡನಾಟ. ಮದುವೆಯಾದವ ಒಮ್ಮೆಯೂ ಅವಳಿಗೆ ಅಂಥ ಪತ್ರಗಳನ್ನು ಬರೆದವನಲ್ಲ. ಇವಳೇ ಕೇಳಿದಾಗಲೊಮ್ಮೆ “ಶಿÂà, ಅದೇನು ಹೆಂಡತಿಗೆ ಪತ್ರ ಬರೆಯೋದು? ನೀನೇನು ಲವರ್ರಾ ಈಗಲೂ ಲವ್‌ ಲೆಟರ್‌ ಬರೆಯಕ್ಕೇ’ ಎಂದಿದ್ದ. ಅವಳಿಗೆ ಹಳೆಂ‌ು ನೆನಪುಗಳು ಮರುಕಳಿಸಿದಂತಾಗಿ ಒಮ್ಮೆ ಬೆಚ್ಚಿಬಿದ್ದಿದ್ದಳು. ಅಷ್ಟೆ: ಮತ್ತೂಮ್ಮೆ ಅವನನ್ನು ಎಂದೂ ಆ ಬಗ್ಗೆ ಕೇಳಿರಲಿಲ್ಲ. ಮಕ್ಕಳು, ಅವರ ಓದು, ಸಂಸಾರ, ತಾಪತ್ರಯ, ಗಂಡನ ಕೋಪ- ತಾಪ ಕಾಮ ಇವುಗಳಲ್ಲಿ ಜೀವನವೆಲ್ಲಾ ಕಳೆದೇ ಹೋಗಿತ್ತು. ಈಗ ಹಿಂತಿರುಗಿ ನೋಡಿದರೆ ಬರೀ ಎಲೆಯುದುರಿ ನಿಂದ ಬೋಳುಮರಗಳಿಂದ ತುಂಬಿದ ಹಾದಿ. ಸ್ವಲ್ಪ$ವೂ ತಂಪು ಕೊಡದ ಜೀವನದ ಪಯಣ. ಬರೀ ತಾಪತ್ರಯಗಳಲ್ಲೇ ಮುಳುಗಿ ತೇಲಿದ್ದಾಗಿತ್ತು. 

ಇಷ್ಟು ವರ್ಷದ ದಾಂಪತ್ಯದಲ್ಲಿ ಮನಸ್ಸಿಗೆ ತಂಪೆನಿಸುವ ಯಾವ ಘಟನೆಗಳೂ ನೆನಪಾಗಲಿಲ್ಲ. ನೆನಪು ಮಾಡಿ ಕಚಗುಳಿ ಇಡುತ್ತಿದ್ದುದು ಆ ಪ್ರೇಮಪತ್ರಗಳು ಮಾತ್ರ. ಅದನ್ನು ಬರೆದವರೆಲ್ಲಾ ಈಗ ಎಲ್ಲೆಲ್ಲಿ ಇದ್ದಾರೋ? ಅವರಿಗೆ ನನ್ನ ನೆನಪು ಇನ್ನೂವರೆಗೂ ಇರುತ್ತಾ? ಅವರಿಗೂ ಮದುವೆಗಳಾಗಿ ಇಷ್ಟು ಹೊತ್ತಿಗೆ ನನ್ನ ಹಾಗೆ ತಲೆ ನೆರೆತಿರುತ್ತದೆ ಎನ್ನಿಸಿತು. ಯಾರ ಮುಖವನ್ನಾದರೂ ನೆನಪಿಸಿಕೊಳ್ಳೋಣವೆಂದರೆ “ಉಹುಂ’ ಯಾವ ಮುಖವೂ ನೆನಪಾಗಲಿಲ್ಲ. ಅವರಿಗೆಲ್ಲಾ ರೂಪಸಿಯರಾದ ಹೆಂಡತಿಯರು ಸಿಕ್ಕಿರುತ್ತಾರಾ? ಅಥವಾ ತನ್ನಂತೆ ಇಜೊjàಡಿನ ಸಂಗಾತಿ ಸಿಕ್ಕಿದ್ದರೆ? ಕಾಲೇಜಿನ ದಿನಗಳಲ್ಲಿ ಕಾಣುತ್ತಿದ್ದ ಹುಡುಗರು, ತನಗೆ ಬರೆಯುತ್ತಿದ್ದ ಪತ್ರಗಳಲ್ಲಿದ್ದ ರಸಿಕತೆಯನ್ನೇ ತಮ್ಮ ತಮ್ಮ ಹೆಂಡತಿಯರ ಮುಂದೆಯೂ ಪ್ರದರ್ಶಿಸುತ್ತಿದ್ದರಾ? ಎಂದು ಕೊಂಡಾಗ ಅವಳಿಗೆ ನಗೆಯುಕ್ಕಿತು. ತಡೆಯಲು ಬಾಯಿಗೆ ಕೈ ಅಡ್ಡ ಹಿಡಿದರೂ ನಗೆಯ ಸದ್ದು ಅಲ್ಲಿಯೇ ಮ್ಯಾಗಜೀನ್‌ ತಿರುವಿ ಹಾಕುತ್ತ ಕುಳಿತಿದ್ದ ಮೊಮ್ಮಗಳಿಗೆ ಕೇಳಿಸಿಬಿಟ್ಟಿತು. ಅಜ್ಜಿಯ ಮುದ್ದಿನ ಮೊಮ್ಮಗಳು ಓಡಿ ಬಂದಳು ಅಜ್ಜಿಯ ನಗುವಿನ ಕಾರಣ ಕೇಳಲು. “ಏನಮ್ಮಿà ಅಷ್ಟು ನಗು? ಏನ್‌ ಸಮಾಚಾರ? ನಿನ್ನ ಬಾಯ್‌ಫ್ರೆಂಡ್‌ ನೆನಪಾಯ್ತಾ?’ ಎಂದಿದ್ದಳು ಕಣ್ಣು ಮಿಟುಕಿಸಿ. ಇವಳ ಮೋರೆ ಕೆಂಗುಲಾಬಿ! “ಶ್‌! ಪುಟ್ಟಿà ಸುಮ್ಮನಿರು’ ಎನ್ನುತ್ತಾ ಹತ್ತಿರ ಕರೆದು ಪಿಸುದನಿಯಲ್ಲಿ ಕೇಳಿದಳು: “ಪುಟ್ಟಿà ನಿಂಗೆ ಯಾರೂ ಬಾಯ್‌ಫ್ರೆಂಡ್‌ ಇಲ್ವಾ? ಲವ್‌ ಲೆಟರ್‌ ಬರೆಯೋಲ್ವಾ?’ ಮೊಮ್ಮಗಳು ಅಜ್ಜಿಯ ಕೆನ್ನೆ ಹಿಂಡುತ್ತಾ “ಓಹೋ ಹೀಗೋ ವಿಚಾರ, ಅಂದ್ರೆ ನಿಂಗೆ ಬರೀತಿದ್ರಾ?’ ಎಂದಳು ಚೇಷ್ಟೆಯ ದನಿಯಲ್ಲಿ. ¿îೌವ್ವನದ ಆ ಆಕರ್ಷಕ ರೂಪವಿನ್ನೂ ಮಾಸದ ಅಜ್ಜಿಯ ಕಣ್ಣಲ್ಲಿ ತುಂಟತನ ಕುಣಿದಿತ್ತು. “ಹುಂ ಬರೀತಿದ್ರು, ಆದರೆ ನಾನು ಅಪ್ಪ- ಅಮ್ಮನ ¸‌ಯಕ್ಕೆ ಒಂದೂ  ಇಟ್ಟುಕೊಳ್ಳಲಿಲ್ಲ ಕಣೆ, ಹರಿದು ಬಿಡುತ್ತಿದ್ದೆ. ನಿಂಗೆ ಯಾರಾದ್ರು ಬರೀತಾರಾ?’ ಎಂದು ಕುತೂಹಲದಿಂದಲೇ ಕೇಳಿದಳು. 

ಅಯ್ಯೋ ಅಜ್ಜಿ, ಈಗ ಯಾರು ಬರೀತಾರೆ ಅಷ್ಟುದ್ದದ ಪ್ರೇಮಪತ್ರಗಳನ್ನ? ಬೇಕಾದ್ರೆ ಮೆಸೇಜ್‌ ಮಾಡ್ಕೊàತೀವಿ. ಇದೆಯಲ್ಲಾ ಮೊಬೈಲು? ಚಾಟ್‌ ಮಾಡ್ತೀವಿ ಎಂದಳು ಮೊಮ್ಮಗಳು.  ಅಜ್ಜಿ ಹೌದೆಂಬಂತೆ ತಲೆದೂಗುತ್ತಾ ತಮ್ಮ ಕಾಲದಲ್ಲಿ ಆ ಸೌಲ¸‌Â ಇಲ್ಲದ, ಈಗಿನ ಹುಡುಗರಿಗೆ ಸರ್ವಸ್ವವೂ ಆಗಿರುವ ಆ ಮೊಬೈಲನ್ನೇ ಒಂದು ಕ್ಷಣ ನೋಡಿದಳು. ಅದೊಂದು ಮ್ಯಾಜಿಕ್‌ ಪೆಟ್ಟಿಗೆಯಂತೆ ಕಾಣಿಸಿತು ಅವಳಿಗೆ.

– ವೀಣಾ ಚಿಂತಾಮಣಿ

Advertisement

Udayavani is now on Telegram. Click here to join our channel and stay updated with the latest news.

Next