Advertisement
ತಾಲೂಕಿನಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಮುತುವರ್ಜಿ ತೋರುವಂತೆಯೇ ನೂರಾರು ವರ್ಷಗಳ ಇತಿಹಾಸ ಹೊಂದಿರುವದೇವಾಲಯ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು, ತಹಶೀಲ್ದಾರ್, ಜನಪ್ರತಿನಿಧಿಗಳು ಮುಂದಾಗಬೇಕಿದೆ. ದೇವಾಲಯಲ್ಲಿ ಮೂರಕ್ಕೂ ಹೆಚ್ಚು ಶಿಲಾ ಶಾಸನಗಳಿದ್ದು ಗ್ರಾಮದ ಹಾಗೂ ಸ್ಥಳದ ಮಾಹಿತಿ ಇದರಲ್ಲಿದ್ದು ಪುರಾತತ್ವ ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ.
Related Articles
ಉತ್ತಮ ರೀತಿಯಲ್ಲಿ ಇದ್ದಿದ್ದರೆ ನೂರಾರು ಮಂದಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ನೆಮ್ಮದಿ ಪಡೆದು ಕೊಳ್ಳುತ್ತಿದ್ದರು. ಆದರೆ, ಗ್ರಾಮಸ್ಥರ ನಿರ್ಲಕ್ಷ್ಯ ದಿಂದ ದೇವಾಲಯ ಶಿಥಿಲವಾಗಿದೆ. ಮರಗಿಡಗಳು ಬೆಳೆದು ನಿಂತಿವೆ, ದೇವಾಲಯದ ಒಳಗೆ ಇರುವ ವಿಗ್ರಹಗಳಿಗೆ ಹಾನಿಯಾಗಿದೆ.
Advertisement
ಪೂಜೆ ಕೈಬಿಟ್ಟ ಭಕ್ತರು: ದೇವಾಲಯದ ಸ್ಥಿತಿ ನೋಡಿದರೆ 2-3 ದಶಕದಿಂದ ಪೂಜೆ ಕೈಂಕರ್ಯ ನಡೆಯುತ್ತಿಲ್ಲ ಎನ್ನುವುದು ತಿಳಿಯುತ್ತದೆ.ಗ್ರಾಮದ ಹಿರಿಯರು, ಜನಪ್ರತಿನಿಧಿಗಳ ಗಮನಕ್ಕೆ ತಂದು ಪಾಳು ಬಿದ್ದಿರುವ ದೇವಾಲಯ ಜೀರ್ಣೋದ್ಧಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯುವ ಸಮುದಾಯ ಮನಸ್ಸು ಮಾಡಿದರೆ ಈಗಲೂ ದೇವಾಲಯನ್ನು ಜೀರ್ಣೋದ್ಧಾರ ಮಾಡಬಹುದು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
475 ಹೆಕ್ಟೇರ್ ಪ್ರದೇಶವಿದೆ: ತಾವರೆಕೆರೆ ಗ್ರಾಮದಲ್ಲಿ 160ಮನೆಗಳಿದ್ದು1,200ಕ್ಕೂಹೆಚ್ಚುಜನಸಂಖ್ಯೆಯಿದೆ. ಅಂಗನವಾಡಿ ಕೇಂದ್ರ, ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವಿದೆ. ಚಾಕಗವುಡನ ಆಳ್ವಿಕೆ ಕಾಲಘಟ್ಟದಲ್ಲಿ ಕೆರೆ ನಿರ್ಮಾಣ ವಾಗಿದ್ದು 230 ಹೆಕ್ಟೇರ್ ವಿಸ್ತೀರ್ಣ ವಿದ್ದು ಸುಮಾರು 475 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ
ವೀರಶಾಸನದಲ್ಲಿ ಗ್ರಾಮದ ಮಾಹಿತಿಕ್ರಿ.ಶ.1226ರ ಕಾಲಘಟ್ಟದ ಮಾಹಿತಿ ಇರುವ ವೀರಶಾಸನವಿದ್ದು ಇದರಲ್ಲಿ ದೇವಾಲಯ ನಿರ್ಮಾಣ, ಇತರೆ ಅಭಿವೃದ್ಧಿ ನಡೆದಿರುವ ಬಗ್ಗೆ ವಿವರ ವಿದೆ. ಗ್ರಾಮಕ್ಕಾಗಿ ಹೋರಾಡಿದ ಹಲವು ವೀರರ ಬಗ್ಗೆಯೂ ಶಾಸನದಲ್ಲಿ ಉಲ್ಲೇಖವಿದೆ. ಇದನ್ನು ಉಳಿಸಿ ಮುಂದಿನ ತಲೆಮಾರಿಗೆ ಮಾಹಿತಿ ನೀಡುವಕೆಲಸವಾದರೂ ಆಗಬೇಕಿದೆ. ಹಾಗೆಯೇ ಹತ್ತಕ್ಕೂ ಹೆಚ್ಚು ಮಾಸ್ತಿಕಲ್ಲುಗಳಿವೆ. ಇನ್ನು ಈಶ್ವರಲಿಂಗ, ಬಸವಣ್ಣ, ಚನ್ನಕೇಶವ, ಭೈರವೇಶ್ವರ ದೊಡ್ಡಮ್ಮದೇವಿ, ಮರಿಯಮ್ಮ ದೇವಿ, ಉಡುಸಲಮ್ಮ, ಯಲ್ಲಮ್ಮದೇವಿ ವಿಗ್ರಹಗಳುಕೆರ ಏರಿ ಹಿಂಭಾಗದಲ್ಲಿ ಇವೆ. ಇವುಗಳನ್ನೂ ಸಮಗ್ರವಾಗಿ ಬಳಕೆ ಮಾಡಿಕೊಂಡು ಸಾವಿರಾರು ಭಕ್ತರನ್ನು ಆಕರ್ಷಣೆ ಮಾಡುವ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಬಹುದಾಗಿದೆ ತಾವರೆಕೆರೆ ಗ್ರಾಮದಲ್ಲಿ 860 ವರ್ಷದ ಪುರಾತನ ಈಶ್ವರ ದೇವಾಲಯವಿದ್ದು 2 ದಶಕದಿಂದ ಪೂಜೆ ನಡೆಯುತ್ತಿಲ್ಲ. ಈ ಬಗ್ಗೆ ಮುಜರಾಯಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ.ಯುವಕರು ಮನಸ್ಸು ಮಾಡಬೇಕಷ್ಟೇ.
-ಪಾಪಣ್ಣ, ತಾವರೆಕೆರೆ ಗ್ರಾಮಸ್ಥ -ಶಾಮಸುಂದರ್ ಕೆ.ಅಣ್ಣೇನಹಳ್ಳಿ