Advertisement

ಕೋವಿಡ್-19 ಯೋಧರಿಗೆ ಉಚಿತ ಚಹಾ ನೀರು ವಿತರಿಸುತ್ತಿರುವ ಅಜ್ಜ

06:23 PM Apr 16, 2020 | keerthan |

ಗಂಗಾವತಿ: ಕೋವಿಡ್-19 ಸೋಂಕು ಹರಡದಂತೆ ಕೋವಿಡ್ ಯೋಧರು ದಿನನಿತ್ಯ ಹೋರಾಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಹೋಂಗಾರ್ಡ್ಸ ಮುಂತಾದವರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.

Advertisement

ಈ ಕೋವಿಡ್ ಯೋಧರಿಗೆ ಹಲವೆಡೆ ಸ್ವಯಂಸೇವಾ ಸಂಸ್ಥೆ ಕಾರ್ಯಕರ್ತರು, ದಾನಿಗಳು, ಜನಪ್ರತಿನಿಧಿಗಳು ಮುಂತಾದವರು ಊಟ ಉಪಹಾರ, ಚಹಾ ಕಾಫಿ ನೀರು ಮತ್ತು ಮಜ್ಜಿಗೆ ನೀಡುತ್ತಿದ್ದಾರೆ. ಅದರಂತೆ ಚಹಾ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೋರ್ವರು ಪ್ರತಿನಿತ್ಯ ಕೋವಿಡ್ ಯೋಧರಿಗೆ ಚಹಾ ಮತ್ತು ಶುದ್ಧ ನೀರನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.

ಪ್ರತಿನಿತ್ಯ ಚಹಾ ಮಾರಾಟ ಮಾಡಿ ಬದುಕು ನಡೆಸುವ ವಿದ್ಯಾನಗರದ ವಿ. ಸತ್ಯನಾರಾಯಣ ಕರ್ತವ್ಯ ನಿರತ ಸಿಬ್ಬಂದಿಯವರಿಗೆ ಕಳೆದ 15ದಿನಗಳಿಂದ ಬೆಳ್ಳಿಗ್ಗೆ ಮಧ್ಯಾಹ್ನ ಸಂಜೆ ಹೀಗೆ ಮೂರು  ಹೊತ್ತು  ಉಚಿತವಾಗಿ ಚಹಾ ಮತ್ತು ಶುದ್ದ ನೀರು ಅವರಿದ್ದಲ್ಲಿಗೆ ವಿತರಿಸುತ್ತಿದ್ದಾರೆ.

ತನಗೆ ಬಡತನವಿದ್ದರೂ ಕೋವಿಡ್-19  ಸೋಂಕು ತಡೆ ಹೋರಾಟದಲ್ಲಿ ತಾನು ಪಾಲ್ಗೊಂಡಿರುವುದು ಅಳಿಲು ಸೇವೆಯಂತಾಗಿದೆ ಎಂದು ಚಹಾ ವಿತರಕ ವಿ.ಸತ್ಯನಾರಾಯಣ ಉದಯವಾಣಿ ಜತೆ ಮಾತನಾಡುತ್ತ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next