Advertisement

Cyber Fraud: 1 ತಿಂಗಳು ವೃದ್ದೆ ಡಿಜಿಟಲ್‌ ಅರೆಸ್ಟ್‌: 3.8 ಕೋಟಿ ಲೂಟಿ ಹೊಡೆದ ಕಳ್ಳರು!

08:32 PM Nov 26, 2024 | Team Udayavani |

ಮುಂಬೈ: ಸುದೀರ್ಘ‌ 1 ತಿಂಗಳ ಕಾಲ ಮುಂಬೈನ ವೃದ್ಧ ಮಹಿಳೆಯೊಬ್ಬರನ್ನು  ಡಿಜಿಟಲ್‌ ಅರೆಸ್ಟ್‌ ಮಾಡಿ, ಅವರಿಂದ 3.8 ಕೋಟಿ ರೂ.ಗಳನ್ನು ಖದೀಮರು ಕೊಳ್ಳೆ ಹೊಡೆದಿರುವ ಪ್ರಕರಣ ಮುಂಬೈನಲ್ಲಿ ನಡೆದಿದೆ.

Advertisement

ದಕ್ಷಿಣ ಮುಂಬೈನಲ್ಲಿ  ಪತಿಯೊಂದಿಗೆ ವಾಸವಿರುವ 77 ವರ್ಷದ ವೃದ್ಧೆಗೆ ತಿಂಗಳ ಹಿಂದಷ್ಟೇ ವಾಟ್ಸಪ್‌ನಲ್ಲಿ ಕರೆ ಬಂದಿತ್ತು. ಅದರಲ್ಲಿ “ನೀವು ತೈವಾನ್‌ಗೆ ಕಳುಹಿಸಿದ್ದ ಪಾರ್ಸಲ್‌ ವಶಪಡಿಸಿಕೊಂಡಿದ್ದೇವೆ’  ಎಂದು ಹೇಳಲಾಗಿದೆ. ಮಹಿಳೆ ತಾನು ಯಾವುದೇ ಪಾರ್ಸೆಲ್‌ ಕಳುಹಿಸಿಲ್ಲ ಎಂದಿದ್ದಕ್ಕೆ  “ನಿಮ್ಮ ಆಧಾರ್‌ಕಾರ್ಡ್‌ ಬಳಸಿ ಅಕ್ರಮ ನಡೆಸಲಾಗಿದೆ’  ಎಂದು ವಂಚಕರು ಬೆದರಿಸಿದ್ದಾರೆ.

ಬಳಿಕ ಆನಂದ್‌ ರಾಣಾ, ಜಾರ್ಜ್‌ ಮ್ಯಾಥ್ಯೂ ಹೆಸರಿನ ಇಬ್ಬರು ವ್ಯಕ್ತಿಗಳು ತಾವು ಐಪಿಎಸ್‌ ಅಧಿಕಾರಿಗಳು ಎಂದು ಹೇಳಿಕೊಂಡು ವೃದ್ದೆಯೊಂದಿಗೆ ಮಾತನಾಡಿ, 1 ತಿಂಗಳ ಕಾಲ ನಿತ್ಯವೂ ಮಹಿಳೆಯೊಂದಿಗೆ ವಾಟ್ಸ್‌ ಆ್ಯಪ್‌ನಲ್ಲಿ ಸಂಪರ್ಕ ಸಾಧಿಸಿದ್ದಾರೆ. ನಂತರ ಆರಂಭಿಕ ತನಿಖೆಗಾಗಿ 15 ಲಕ್ಷ ರೂ. ನೀಡಬೇಕೆಂದು ಖಾತೆಯೊಂದಕ್ಕೆ ಹಣ ವರ್ಗಾಯಿಸಿಕೊಂಡಿದ್ದಾರೆ. ನೀವು ನಿರಾಪರಾಧಿ ಎಂದು ಸಾಬೀತಾದ ಬಳಿಕ ಮರು ವರ್ಗಾಯಿಸುತ್ತೇವೆಂದು ಹೇಳಿ ಒಟ್ಟು 3.08 ಕೋಟಿ ರೂ. ದೋಚಿದ್ದಾರೆ. ಹಣ ವಾಪಸಾಗದ ವೃದ್ದೆ ತಮ್ಮ  ಪುತ್ರಿಗೆ ವಿಚಾರ ತಿಳಿಸಿ, ಬಳಿಕ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next