Advertisement
ಪಂಚಾಯತ್ ಅಧ್ಯಕ್ಷೆ ಜಲಜಾ ಅವರು ಜಿ.ಪಂ. ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಹಳೆಯಂಗಡಿ ಗ್ರಾ.ಪಂ.ನ ಅಭಿವೃದ್ಧಿ ಕಾರ್ಯಗಳು ಕುಂಠಿತ ಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 268(2)ರಂತೆ ಗ್ರಾ.ಪಂ.ನ್ನು ವಿಸರ್ಜಿಸಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಉಲ್ಲೇಖೀಸಿರುವ ನ್ಯಾಯಾಧೀಶರಾದ ಎಸ್. ಸುನಿಲ್ ದತ್ ಯಾದವ್ ಅವರು 6 ವಾರಗಳ ತಡೆಯಾಜ್ಞೆ ನೀಡಿದ್ದಾರೆ. ಈ ಆದೇಶವನ್ನು ಅವರು ನ. 8ರಂದು ನೀಡಿದ್ದಾರೆ. ನ್ಯಾಯವಾದಿ ಚಂದ್ರಕಾಂತ ಅರಿಗ ಅವರು ಅರ್ಜಿದಾರರ ಪರವಾಗಿ ವಾದಿಸಿದ್ದರು.
ಈ ನಡುವೆ ಗ್ರಾಮ ಪಂಚಾಯತನ್ನು ವಿಸರ್ಜಿಸಿದ ಬಳಿಕ ನಡೆದ ಬೆಳವಣಿಗೆಯಲ್ಲಿ ಮುಂದಿನ ಪಂಚಾ
ಯತ್‌ನ ಆಡಳಿತ ರಚನೆಯಾಗುವವರೆಗೆ ಮೂಲ್ಕಿ ತಹಶೀಲ್ದಾರ್ ಮಾಣಿಕ್ಯ ಅವರನ್ನು ಆಡಳಿತಾಧಿಕಾರಿ ಯಾಗಿ ನೇಮಕ ಮಾಡಲಾಗಿದೆ.