Advertisement

ಮೂತ್ರ ವಿಸರ್ಜನೆ ತಾಣವಾದ ಹಳೇ ಹೇಮಾವತಿ ಸೇತುವೆ

04:42 PM Nov 19, 2021 | Team Udayavani |

ಸಕಲೇಶಪುರ: ಪಾದಚಾರಿಗಳು ಸಂಚರಿಸಲು ಅನುಕೂಲವಾಗಲು ಪುನರ್ನಿರ್ಮಾಣ ಮಾಡಿರುವ ಪಟ್ಟಣದ ಹೇಮಾವತಿ ಹಳೇ ಸೇತುವೆಯು ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡಲು ಬಳಕೆಯಾಗುತ್ತಿರುವುದು ಪ್ರಜ್ಞಾವಂತರ ಬೇಸರಕ್ಕೆ ಕಾರಣವಾಗಿದೆ. ಪಟ್ಟಣದ ಹೇಮಾವತಿ ನದಿ ತೀರದಲ್ಲಿ ಬ್ರಿಟಿಷರ ಕಾಲದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣ ಮಾಡಲಾಗಿತ್ತು.

Advertisement

ಕಾಲ ಕ್ರಮೇಣ ಸೇತುವೆ ಶಿಥಿಲಗೊಂಡಂತೆ ಹೊಸ ಸೇತುವೆ ನಿರ್ಮಾಣ ಮಾಡಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊಸ ಸೇತುವೆ ಮೇಲೆ ವಾಹನಗಳ ಸಂಚಾರ ಹೆಚ್ಚಾಗಿ ಪಾದಚಾರಿಗಳ ಸಂಚಾರ ಅಸಾಧ್ಯವಾದ ಹಿನ್ನೆಲೆ ಹಳೇ ಸೇತುವೆಯ ಒಂದು ಬದಿಯನ್ನು ತುಸು ಅಭಿವೃದ್ಧಿಪಡಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಇದನ್ನೂ ಓದಿ;- ಬಿಜೆಪಿಯಿಂದ ರೈತಪರ ಯೋಜನೆ ಜಾರಿ: ಕೆರೆಕೈ

ಆದರೆ, ಇತ್ತೀಚಿನಲ್ಲಿ ಕೆಲವರು ಮೂತ್ರ ವಿಸರ್ಜನೆ ಮಾಡಲು ಸೇತುವೆಯನ್ನು ಬಳಸಿಕೊಳ್ಳುತಿರುವುದರಿಂದ ಸೇತುವೆ ಗಬ್ಬು ನಾರುತ್ತಿದ್ದು ಪಾದಾಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ. ಸೇತುವೆ ತುಂಬಾ ಹುಲ್ಲು ಗಿಡಗಂಟಿ ಬೆಳೆದಿದ್ದು ಅಲ್ಲದೇ, ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಸೇತುವೆ ಮೇಲೆ ಬಿಸಾಡಲಾಗಿದೆ.

ಸ್ವತ್ಛತೆ ಸಂಪೂರ್ಣವಾಗಿ ಇಲ್ಲಿ ಮಾಯವಾಗಿದ್ದು ಪುರಸಭೆಯವರು ಕನಿಷ್ಠ ಒಂದು ಪಾದಚಾರಿ ಸೇತುವೆ ಸ್ವತ್ಛವಾಗಿಡಲು ಮುಂದಾಗುತ್ತಿಲ್ಲ. ಇದೇ ವೇಳೆ ಪಟ್ಟಣ ವ್ಯಾಪ್ತಿಯ ಹಳೇ ಬಸ್‌ ನಿಲ್ದಾಣದಲ್ಲಿ ಮಾತ್ರ ಸಾರ್ವಜನಿಕ ಶೌಚಾಲಯವಿದ್ದು ಬೇರೆಡೆ ಸಾರ್ವಜನಿಕ ಶೌಚಾಲಯವಿಲ್ಲದಿರುವುದರಿಂದ ಮೂತ್ರ ವಿಸರ್ಜನೆ ಮಾಡಲು ತೊಡಕಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

ಪುರಸಭೆ ಇತ್ತ ಗಮನಹರಿಸಿ ಸೇತುವೆ ಮೇಲೆ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಹಾಗೂ ಹಳೇ ಹೆದ್ದಾರಿಯಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಉದ್ಯಾನವನ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.

ಹಳೇ ಸೇತುವೆ ಮೇಲೆ ಸಂಚರಿಸುವಾಗ ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ. ಇಲ್ಲಿ ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.” ರಕ್ಷಿತ್‌, ಪಟ್ಟಣ ನಿವಾಸಿ.

Advertisement

Udayavani is now on Telegram. Click here to join our channel and stay updated with the latest news.

Next