Advertisement
ವಿಶ್ವದಾದ್ಯಂತ ಶಿಷ್ಯರನ್ನು, ಭಕ್ತರನ್ನು ಅಭಿಮಾನಿಗಳನ್ನು ಹೊಂದಿದ್ದ ಪೇಜಾವರ ಯತಿವರೇಣ್ಯರು ಇನ್ನು ನೆನೆಪು ಮಾತ್ರ. ಅವರ ಈ ಸುದೀರ್ಘ ಕೃಷ್ಣ ಸೇವೆಯ ಜೀವನದಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ರಾಮಕುಂಜ ಎಂಬ ಹಳ್ಳಿ ಪೇಜಾವರ ಶ್ರೀಗಳ ಜನ್ಮಸ್ಥಾನ. 1931ರ ಎಪ್ರಿಲ್ 21ರಂದು ಜನಿಸಿದವರು. ಇವರ ಪೂರ್ವಾಶ್ರಮದ ಹೆಸರು ವೆಂಕಟ ರಮಣ. ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಗಳ ಎರಡನೇ ಗಂಡುಮಗುವಾಗಿ ವೆಂಕಟರಮಣ ಜನಿಸಿದರು. ಪ್ರಜಾಪತಿ ಸಂವತ್ಷರದ ವೈಶಾಖ ಶುದ್ಧ ದಶಮಿಯ ಸೋಮವಾರದ ಪುಣ್ಯದಿನದಂದು ವೆಂಕಟರಮಣನ ಜನನ. ಪ್ರಾಥಮಿಕ ಶಾಲೆಯನ್ನು ಸ್ಥಳೀಯ ರಾಮಕುಂಜದ ಸಂಸ್ಕ್ರತ ಎಲೆಮೆಂಟರಿ ಶಾಲೆಯಲ್ಲಿ ಕಲಿತಿದ್ದರು. ಏಳನೇ ವರ್ಷದಲ್ಲಿ ಗಾಯತ್ರಿ ಉಪದೇಶವೂ ಆಗಿತ್ತು.
Related Articles
ಇನ್ನೂ ಆಟವಾಡುವ ವಯಸ್ಸಿನ ಬಾಲಕ ವೆಂಕಟರಮಣ ತನ್ನ ಆರನೇ ವಯಸ್ಸಿನಲ್ಲಿ ತಂದೆ ತಾಯಿಯ ಜೊತೆಗೆ ಉಡುಪಿಗೆ ಬಂದಿದ್ದರು. ಆಗ ಉಡುಪಿಯಲ್ಲಿ ಪೇಜಾವರ ಮಠದ ಪರ್ಯಾಯ ನಡೆಯುತ್ತಿತ್ತು. ಆ ಉಡುಪಿ ಭೇಟಿ ವೆಂಕಟರಮಣನ ಬದುಕನ್ನು ಬದಲಿಸಿದ ಭೇಟಿಯಾಗಿತ್ತು.
Advertisement
ಹೆತ್ತವರೊಂದಿಗೆ ತನ್ನನ್ನು ಭೇಟಿಯಾದ ಆ ಪುಟ್ಟ ಕಣ್ಣುಗಳ ಬಾಲಕನನ್ನು ಕಂಡು ಆಗಿನ ಪೇಜಾವರ ಮಠದ ಸ್ವಾಮಿಗಳಾಗಿದ್ದ ಶ್ರೀ ವಿಶ್ವಮಾನ್ಯ ತೀರ್ಥರಿಗೆ ಏನನ್ನಿಸಿತೋ ಏನೋ. ದೈವ ಪ್ರೇರಣೆಯೆಂಬಂತೆ ವಿಶ್ವಮಾನ್ಯ ತೀರ್ಥರು ಆ ಆರು ವರ್ಷದ ಪುಟ್ಟ ಬಾಲಕನಿಗೆ “ ನೀನು ನನ್ನಂತೆ ಸ್ವಾಮಿಯಾಗುತ್ತೀಯಾ? ಎಂದು ಕೇಳಿ ಬಿಟ್ಟರು. ಪುಟ್ಟ ಹುಡುಗ ವೆಂಕಟರಮಣನೂ ‘’ ಹ್ಞೂಂ’’ ಎಂದು ಎಂದಿದ್ದರು.
ಪರ್ಯಾಯದ ಅವಧಿಯ ನಂತರ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರಕ್ಕೆ ಹೊರಟಿದ್ದರು. ಹೀಗೆ ಸಾಗುತ್ತಾ ವ್ಯಾಸ ತಪೋ ಭೂಮಿ ಹಂಪೆಗೆ ಸೇರಿದ ಅವರು ತನ್ನ ನಿರ್ಧಾರವನ್ನು ಗಟ್ಟಿಗೊಳಿಸಿದ್ದರು. ಅಲ್ಲಿಂದಲೇ ರಾಮಕುಂಜಕ್ಕೆ ಕರೆ ಕಳುಹಿಸಿ ಆಗ ತಾನೇ ಉಪವಿತನಾಗಿದ್ದ ವಟು ವೆಂಕಟರಮಣನ್ನು ಹಂಪೆಗೆ ಕರೆಸಲಾಯಿತು.
ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿ ಅಂದರೆ 1938 ಡಿಸೆಂಬರ್ ಮೂರರಂದು ವಟು ವೆಂಕಟರಮಣನಿಗೆ ಹಂಪಿಯ ಯಂತ್ರೋದ್ಧಾರ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಯತಿ ದೀಕ್ಷೆ ನೀಡಲಾಯಿತು.ಹೀಗೆ ಉಡುಪಿಯಿಂದ ಸುಮಾರರು 120 ಕಿ.ಮೀ ದೂರದ ರಾಮಕುಂಜವೆಂಬ ಹಳ್ಳಿಯ ವೆಂಕಟರಮಣನೆಂಬ ಬಾಲಕ ಪೇಜಾವರ ಅಧೋಕ್ಷಜ ಮಠದ 32ನೇ ಯತಿಯಾಗಿ ‘ವಿಶ್ವೇಶ ತೀರ್ಥ’ನೆಂಬ ನಾಮದಿಂದ ಮಧ್ವ ಪೀಠವನ್ನೇರಿದರು.