Advertisement

ಕಾರೈಕುಡಿ : 1.20 ಕೋಟಿ ರೂ. ರದ್ದಾದ ನೋಟು ವಶ; ನಾಲ್ವರು ಅರೆಸ್ಟ್‌

03:39 PM Jan 27, 2017 | Team Udayavani |

ಶಿವಗಂಗಾ, ತಮಿಳು ನಾಡು : ಕಾರೈಕುಡಿ ಸಮೀಪದ ವಸತಿ ಗೃಹ ಒಂದರಲ್ಲಿ ಪೊಲೀಸರು 1.2 ಕೋಟಿ ರೂ. ಮೌಲ್ಯದ ರದ್ದಾದ ಹಳೇ ನೋಟುಗಳನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

Advertisement

ಖಚಿತ ಸುಳಿವಿನ ಮೇಲೆ ವಸತಿ ಗೃಹಕ್ಕೆ ತೆರಳಿದ ಪೊಲೀಸರು ಅಲ್ಲಿ ಚೆನ್ನೈನ ನಾಲ್ವರನ್ನು ಬಂಧಿಸಿ ಅವರ ಬಳಿ ಇದ್ದ 1.2 ಕೋಟಿ ರೂ. ಮೌಲ್ಯದ ರದ್ದಾದ ನೋಟುಗಳನ್ನು ವಶಪಡಿಸಿಕೊಂಡರು. 

ಪ್ರಾಥಮಿಕ ಮಾಹಿತಿಗಳ  ಪ್ರಕಾರ ಚೆನ್ನೈನ ನಾಲ್ವರು ನಿನ್ನೆ ಗುರುವಾರ ಕಾರೈಕುಡಿಗೆ ಬಂದು ವಸತಿಗೃಹದಲ್ಲಿ ತಂಗಿದ್ದರು. ತಮ್ಮಲ್ಲಿನ ರದ್ದಾದ ಹಳೇ ನೋಟನ್ನು ವಿನಿಮಯಿಸಿಕೊಳ್ಳಲು ಗಣೇಶ್‌ ಉದಯರ್‌ ಎಂಬಾತನನ್ನು ಸಂಪರ್ಕಿಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ  ಎಂದು ಪೊಲೀಸರು ತಿಳಿಸಿದ್ದಾರೆ. 

ಚೆನ್ನೈನಲ್ಲಿನ ವ್ಯಕ್ತಿಯೋರ್ವ ಈ ನಾಲ್ವರ ತಂಡಕ್ಕೆ ಕಾರೈಕುಡಿಯಲ್ಲಿನ ಖಾಸಗಿ ಇಂಜಿನಿಯರಿಂಗ್‌ ಕಾಲೇಜಿನ ಕರೆಸ್ಪಾಂಡೆಂಟ್‌ ರನ್ನು ಭಭೇಟಿಯಾಗಿ ಅವರಿಗೆ ಈ ರದ್ದಾದ ಹಳೇ ನೋಟುಗಳನ್ನು ಒಪ್ಪಿಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೇಂದ್ರ ಸರಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next