Advertisement

ಕೊಹ್ಲಿ ಆಟ ನೋಡಲು 8600 ಮೈಲಿ ಪ್ರಯಾಣಿಸಿದ ವೃದ್ಧ ದಂಪತಿ!

12:09 PM Jan 10, 2018 | |

ಕೇಪ್‌ಟೌನ್‌: ಭಾರತ ದಕ್ಷಿಣ ಆಫ್ರಿಕಾ ನಡುವಿನ ಮೊದಲನೆ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಮುಗಿದಿದೆ. ಪ್ರವಾಸಿ ಭಾರತ ಹೀನಾಯವಾಗಿ ಸೋತು ಹೋಗಿ ತನ್ನ ಯೋಗ್ಯತೆಯನ್ನು ಬಹಿರಂಗಗೊಳಿಸಿದ್ದು ಆಗಿದೆ.

Advertisement

ಇಂತಹ ಟೆಸ್ಟ್‌ ನೋಡಲು ವೃದ್ಧ ದಂಪತಿಯೊಬ್ಬರು 8600 ಮೈಲಿ ಪ್ರಯಾಣ ಮಾಡಿ ಇಂಗ್ಲೆಂಡ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ಯಾಕೆ ಅಂತ ಗೊತ್ತಾ? ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ನೋಡಲು! ಆಜೂಬಾಜು 70 ವರ್ಷ ಮುಟ್ಟಿದಂತೆ ಕಾಣುವ ಜಾನ್‌ ಹಾಗೂ ಕ್ರಿಸ್ಸಿಯಾ ಕೊಹ್ಲಿಯ ಅಭಿಮಾನಿಗಳು. ಅದಕ್ಕೆಂದೆ ಸುರಿಯುವ ಮಳೆಯಲ್ಲಿ ನ್ಯೂಲ್ಯಾಂಡ್ಸ್‌ ಮೈದಾನದ ಹತ್ತಿರ ನಿಂತಿದ್ದರು. ದುರದೃಷ್ಟವಶಾತ್‌ ಆ ದಿನ ವಿಪರೀತ ಮಳೆ ಬಂದು ದಿನದಾಟ ನಡೆಯಲಿಲ್ಲ. ಆ ದಂಪತಿಗೆ ನ್ಯೂಲ್ಯಾಂಡ್ಸ್‌ ಎಂದರೆ ಇಷ್ಟವಂತೆ. ಹಿಂದೆ ಆಫ್ರಿಕಾ ಇಂಗ್ಲೆಂಡ್‌ ಪಂದ್ಯವಾಗಿದ್ದಾಗಲೂ ಇಲ್ಲಿಗೆ ಬಂದಿದ್ದರಂತೆ. ಅದೇ ವೇಳೆ ಇಲ್ಲಿ ಭಾರತವೂ ಆಡಲಿದೆ ಎಂದು ಗೊತ್ತಾಯಿತು. ಆಗಲೇ ಅವರಿಬ್ಬರೂ ಇಲ್ಲಿಗೆ ಬರಬೇಕೆಂದು ನಿರ್ಧರಿಸಿ ದರು. ಅದಕ್ಕೆ ಕಾರಣ ಕೊಹ್ಲಿ. “ಆತ ಕ್ರಿಕೆಟ್‌ನ ಅದ್ಭುತ ಆಟಗಾರರಲ್ಲೊಬ್ಬ. ನಮಗಿಬ್ಬರಿಗೂ ಕೊಹ್ಲಿ ಅಚ್ಚುಮೆಚ್ಚು. ಬೇಸರವೆಂದರೆ ಅವರು ಬರೀ 5 ರನ್‌ಗೆ ಔಟಾಗಿಬಿಟ್ಟರು’ ಆ ದಂಪತಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next