Advertisement

ಹಳೇ ಬ್ಯಾಟು ಹಳೇ ಚೆಂಡು

09:29 PM Feb 21, 2020 | Lakshmi GovindaRaj |

ಟೀಕೆಗಳಿಗೆ ಶತಕದ ಉತ್ತರ ಕೊಟ್ಟರು!
ಕರ್ನಾಟಕದ ಶ್ರೇಷ್ಠ ಕ್ರಿಕೆಟ್‌ ಆಟಗಾರರು ಎಂದು ಪಟ್ಟಿ ಮಾಡಲು ಹೊರಟರೆ ಮರೆಯದೇ ಸೇರಿಸಬೇಕಾದ ಹೆಸರು ಕಿರ್ಮಾನಿ ಅವರದ್ದು. ಸೈಯದ್‌ ಸ್ತಫಾ ಹುಸೇನ್‌ ಕಿರ್ಮಾನಿ ಎಂಬುದು ಅವರ ಪೂರ್ಣ ಹೆಸರು. ಭಾರತ ಕಂಡ ಅತ್ಯುತ್ತಮ ವಿಕೆಟ್‌ ಕೀಪರ್‌ ಎಂಬುದು ಕಿರ್ಮಾನಿಯ ಹೆಗ್ಗಳಿಕೆ. ಈ ಹಿಂದೆ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ. ಆಗೇನಿದ್ದರೂ ಐದು ದಿನಗಳ ಟೆಸ್ಟ್‌ ಪಂದ್ಯದ ರಾಜದರ್ಬಾರು.

Advertisement

ಒಂದು ದಿನದ ಆಟ ಎಂದುಕೊಂಡರೆ, ಪೂರ್ತಿ 85-90 ಓವರ್‌ಗಳನ್ನೂ ಆಡಲೇಬೇಕಿತ್ತು. ಒಂದು ವೇಳೆ, ಕಡೆಯ 10-20 ಓವರ್‌ ಬಾಕಿಯಿದ್ದಾಗ, ಯಾರಾದರೂ ಪ್ರಮುಖ ಆಟಗಾರ ಔಟ್‌ ಆದರೆ, ಉಳಿದ ಓವರ್‌ಗಳನ್ನು ಆಡುವಂಥ ಸಾಮಾನ್ಯ ಆಟಗಾರನನ್ನು “ರಾತ್ರಿ ಕಾವಲುಗಾರ’ ಅಥವಾ “ನೈಟ್‌ವಾಚ್‌ಮನ್‌’ ಆಗಿ ಆಡುವ ಅಂತಹದೊಂದು ಅವಕಾಶ ಸಿಗುತ್ತಿತ್ತು. ಕಿರ್ಮಾನಿಗೂ 1979ರಲ್ಲಿ ಸಿಕ್ಕಿತ್ತು. ಎದುರಾಳಿಗಳಾಗಿದ್ದ ಆಸ್ಟ್ರೇಲಿಯನ್ನರು, ಕಿರ್ಮಾನಿಯನ್ನು ವೆರಿ ಪುವರ್‌ ಬ್ಯಾಟ್ಸ್‌ಮನ್‌ ಎಂದೇ ಆಗ ಭಾವಿಸಿದ್ದರು. ಆದರೆ ಈಗ ಅದ್ಭುತ ಒಪ್ಪಲು ಕ್ರೀಡಾ ಲೋಕ ಸಿದ್ಧವಿರಲಿಲ್ಲ.

ಹಾಗೆಂದೇ ಕೆಲವರು ಇದೊಂದು ಅಷ್ಟೇ ಎಂದು ಕೊಂಕು ನುಡಿದರು. ಈ ಟೀಕೆಗೆ ಉತ್ತರ ಕೊಡುವಂಥ ಅವಕಾಶವೊಂದು 5 ವರ್ಷಗಳ ನಂತರ ಕಿರ್ಮಾನಿಗೆ ಸಿಕ್ಕಿತು. ಆಗ ಇಂಗ್ಲೆಂಡ್‌ ವಿರುದ್ಧ ಮುಂಬೈಯಲ್ಲಿ ನಡೆದ ಟೆಸ್ಟ್‌ನಲ್ಲಿ ಕಿರ್ಮಾನಿಯನ್ನು ಮತ್ತೂಮ್ಮೆ ನೈಟ್‌ವಾಚ್‌ಮನ್‌ ಆಗಿ ಆಡಲು ಕಳಿಸಲಾಯಿತು. ಟೀಕಿಸಿದವರಿಗೆಲ್ಲ ಉತ್ತರ ಕೊಡಲೇಬೇಕು ಎಂಬಂತೆ ನೆಲಕಚ್ಚಿ ನಿಂತು ಆಡಿ ಮತ್ತೂಮ್ಮೆ ಸೆಂಚುರಿ ಹೊಡೆದರು. ವಿಕೆಟ್‌ ಕೀಪರ್‌ಗಳು ಒಬ್ಬ, ನೈಟ್‌ವಾಚ್‌ಮನ್‌ ಎಂದು ಆಡಲು ಬಂದು, ಎರಡು ಬಾರಿಯೂ ಶತಕ ಹೊಡೆದಿದ್ದು ಈಗಲೂ ದಾಖಲೆಯಾಗಿಯೇ ಉಳಿದಿದೆ.

ಸಿಕ್ಸರ್‌ ಹೊಡೆಸಿಕೊಂಡದ್ದು ಮರೆಯಲಾಗದ ಕ್ಷಣ
ಭಾರತ ಕ್ರಿಕೆಟ್‌ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಲಕ್ಷ್ಮೀಪತಿ ಬಾಲಾಜಿ ಕೂಡ ಒಬ್ಬರು. ಜಾವಗಲ್‌ ಶ್ರೀನಾಥ್‌ ಅವರಷ್ಟೇ ವೇಗದಲ್ಲಿ ಅವರಷ್ಟೇ ನಿಖರವಾಗಿ ಚೆಂಡು ಎಸೆಯಬಲ್ಲ ಬೌಲರ್‌ ಎಂಬ ಹೆಗ್ಗಳಿಕೆ ಬಾಲಾಜಿ ಅವರಿಗಿತ್ತು. ಸಾಮಾನ್ಯವಾಗಿ ಎಂಟು ಅಥವಾ ಒಂಭತ್ತನೇ ವಿಕೆಟ್‌ಗೆ ಆಡಲು ಬರುತ್ತಿದ್ದ ಬಾಲಾಜಿ ಒಂದರ ಹಿಂದೊಂದು ಬೌಂಡರಿ, ಸಿಕ್ಸರ್‌ ಹೊಡೆದು ಕ್ರೀಡಾ ಪ್ರೇಮಿಗಳನ್ನು ರಂಜಿಸುತ್ತಿದ್ದರು.

ಪಾಕಿಸ್ತಾನದಲ್ಲಿ ಇವರ ಆಟವನ್ನು ನೋಡಬೇಕೆಂಬ ಒಂದೇ ಆಸೆ ಯಿಂದ ಕ್ರೀಡಾಂಗಣಕ್ಕೆ ಬರುವ ಜನರಿದ್ದರು. ಅಂದರೆ ಬಾಲಾಜಿಯ ಆಟ ಸೃಷ್ಟಿಸದ ಹವಾ ಎಂಥದಿರಬೇಕೋ ಲೆಕ್ಕ ಹಾಕಿ. ಇಂಥ ಹಿನ್ನೆಲೆಯ ಬಾಲಾಜಿಯನ್ನು ಅದೊಮ್ಮೆ ಸಂದರ್ಶನದಲ್ಲಿ – ನಿಮ್ಮ ಕ್ರೀಡಾ ಜೀವನದ ಮರೆಯಲಾಗದ ಕ್ಷಣ ಯಾವುದು ಎಂದು ಕೇಳಲಾಯಿತು. ಆಗ ಬಾಲಾಜಿ ಹೇಳಿದ ಮಾತಿದು: “ಸಾಮಾನ್ಯವಾಗಿ ಒಂದು ದಿನದ ಪಂದ್ಯಗಳಲ್ಲಿ 8 ಅಥವಾ 9ನೇ ವಿಕೆಟ್‌ಗೆ ಆಡಲು ಬರುವವರು ಬೇಗ ಔಟ್‌ ಆಗುತ್ತಾರೆ. ಅಂಥವರ ವಿಕೆಟ್‌ ಪಡೆಯುವ ಸುಲಭ ಅವಕಾಶ ಬೌಲರ್‌ಗೆ ಇರುತ್ತದೆ.

Advertisement

ಕಡೆಯ ವಿಕೆಟ್‌ಗಳನ್ನು ಬೇಗ ಉರುಳಿಸಿ, ನನ್ನ ತಂಡದ ಗೆಲುವಿಗೆ ಕಾರಣನಾಗಬೇಕು ಎಂಬ ಆಸೆ ಎಲ್ಲ ಬೌಲರ್‌ಗೂ ಇರುತ್ತದೆ. ಅದೊಮ್ಮೆ 8ನೇ ವಿಕೆಟ್‌ಗೆ ಆಸ್ಟ್ರೇಲಿಯಾದ ಬ್ರೇಟ್‌ ಲೀ ಆಡಲು ಬಂದಾಗ ಅವರನ್ನು ಔಟ್‌ ಮಾಡುವ ಹುಮ್ಮಸ್ಸು ನನಗೂ ಇತ್ತು. ಅದು ಪಂದ್ಯದ ಕಡೆಯ ಓವರ್‌, ಬ್ರೇಟ್‌ ಲೀ ವಿಕೆಟ್‌ ಬಿದ್ದರೆ ಭಾರತ ಗೆಲ್ಲುತ್ತಿತ್ತು. ಅಂಥ ಲೆಕ್ಕಾಚಾರದಲ್ಲೇ ನಾನೂ ಚೆಂಡೆಸೆದೆ. ಆದರೆ ಬ್ರೇಟ್‌ ಲೀ ಅವನ್ನೂ ಸಿಕ್ಸರ್‌ಗೆ ಅಟ್ಟಿದರು. ಆ ಮೂಲಕ ಆಸ್ಟ್ರೇಲಿಯವನ್ನು ಗೆಲ್ಲಿಸಿಬಿಟ್ಟರು. ನಾನು ಎಂದೂ ಮರೆಯಲಾಗದ ನೋವಿನ ಕ್ಷಣವೆಂದರೆ ಅದೇ’.

Advertisement

Udayavani is now on Telegram. Click here to join our channel and stay updated with the latest news.

Next