ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡುವ ದಿನಾಂಕವನ್ನು ಬಹಿರಂಗಪಡಿಸಿದ್ದು, ದೇಶದ ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆ ಸಂಭ್ರಮದ ಆಗಸ್ಟ್ 15ರಂದು ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ:ಮಹಾರಾಷ್ಟ್ರ ಮಗುವಿನ 16 ಕೋಟಿ ರೂ. ಬೆಲೆಯ ಇಂಜೆಕ್ಷನ್ ಉಚಿತ ನೀಡಿದ ಅಮೆರಿಕ ಕಂಪನಿ
ಎಲೆಕ್ಟ್ರಿಕ್ ಸ್ಕೂಟರ್ ನ ಪೂರ್ಣಪ್ರಮಾಣದ ಸ್ಪೆಸಿಫಿಕೇಶನ್ ಮತ್ತು ವಿವರವನ್ನು ಬಿಡುಗಡೆ ದಿನ ಬಹಿರಂಗಪಡಿಸಲಾಗುವುದು ಎಂದು ಓಲಾ ಅಧ್ಯಕ್ಷ, ಗ್ರೂಪ್ ಸಿಇಒ ಭಾವಿಷ್ ಅಗರ್ವಾಲ್ ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ದಿನಾಂಕವನ್ನು ಅಗರ್ವಾಲ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಓಲಾ ಎಲೆಕ್ಟ್ರಿಕ್ ಸ್ಕೂಟರ್ 100-150 ಕಿಲೋ ಮೀಟರ್ ದೂರದವರೆಗೆ ಪ್ರಯಾಣಿಸಬಹುದಾಗಿದೆ. ಅಲ್ಲದೇ ಸ್ಕೂಟರ್ ನಿಂದ ಪ್ರತ್ಯೇಕಿಸಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಫೀಚರ್ ಅನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನಲ್ಲಿರುವ ಓಲಾ ಉತ್ಪಾದನಾ ಘಟಕದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತಯಾರಿಸಲಾಗುತ್ತಿದೆ. ಇತ್ತೀಚೆಗೆ ಕಂಪನಿಯ ಟ್ರೇಡ್ ಮಾರ್ಕ್ ಸರಣಿ ಎಸ್, ಎಸ್ 1, ಎಸ್ 1 ಪ್ರೊ ಅನ್ನು ನೋಂದಾಯಿಸಿಕೊಂಡಿದ್ದು, ಇದೇ ಹೆಸರಿನಲ್ಲಿ ಸ್ಕೂಟರ್ ಲಭ್ಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.