Advertisement

ಓಲಾ ಬೈಕ್‌ 150 ನಗರಗಳಿಗೆ ವಿಸ್ತರಣೆ

09:42 AM Sep 14, 2019 | Team Udayavani |

ಹೊಸದಿಲ್ಲಿ: ಓಲಾ, ಊಬರ್‌ಗಳಿಂದಾಗಿ ಕಾರಿನ ಮಾರಾಟ ಕಡಿಮೆಯಾಗಿದೆ ಎಂಬ ಚರ್ಚೆಗಳ ಬೆನ್ನಲ್ಲೇ ಈಗ ದೇಶಾದ್ಯಂತ 150 ನಗರದಲ್ಲಿ ಬೈಕ್‌ ಬಾಡಿಗೆ ಸೇವೆಗೆ ಓಲಾ ಮುಂದಾಗಿದೆ. ಈ ಮೂಲಕ ಟ್ರಾಫಿಕ್‌ ಕಿರಿಕಿರಿ ಇರುವ ನಗರಗಳಲ್ಲಿ ಬಾಡಿಗೆ ಟ್ಯಾಕ್ಸಿಗಳ ಮಧ್ಯೆ ಇನ್ನೊಂದು ಸುತ್ತಿನ ಸ್ಪರ್ಧೆ ಏರ್ಪಡಿಸಲು ಓಲಾ ವೇದಿಕೆ ಸಿದ್ಧಮಾಡಿದೆ.

Advertisement

ಮುಂದಿನ 1 ವರ್ಷದಲ್ಲಿ ತನ್ನ ಸೇವೆಯನ್ನು ವಿಸ್ತರಿಸಲೂ ಅದು ಯೋಜನೆ ರೂಪಿಸಿದೆ. ಸಣ್ಣ ಸಣ್ಣ ನಗರಗಳಲ್ಲೂ ಅದು ಸೇವೆ ನೀಡಲು ಉದ್ದೇಶಿಸಿದೆ. ಈಗಾಗಲೇ ದಿಲ್ಲಿ ಹೊರವಲಯ ಮತ್ತು ಗುರುಗ್ರಾಮದಂತಹ ಪ್ರದೇಶಗಳಲ್ಲಿ ಓಲಾ ಈ ಬೈಕ್‌ ಸೇವೆ ನೀಡುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಯುವಕರಿಗೆ ಕೆಲಸ ನೀಡುವುದು ಮತ್ತು ಗ್ರಾಹಕರನ್ನು ಮತ್ತಷ್ಟು ಸಂಪರ್ಕಿಸುವ ಉದ್ದೇಶ ಹೊಂದಿದ್ದೇವೆ ಎಂದು ಓಲಾ ಹೇಳಿಕೊಂಡಿದೆ. ಕಿ.ಮೀ.ಗೆ ಸುಮಾರು 5 ಕಿ.ಮೀ. ದರದಲ್ಲಿ ಈ ಬಾಡಿಗೆ ಬೈಕ್‌ ಸೇವೆ ಇರುತ್ತದೆ.

ಮೊಬೈಲ್‌ನಲ್ಲಿ ಬುಕ್‌ ಮಾಡಿದ ಕೂಡಲೇ ಒಂದು ಹೆಲ್ಮೆಟ್‌ ಜತೆಗೆ ಬೈಕ್‌ ಮತ್ತು ಸವಾರ ಗ್ರಾಹಕರ ಮುಂದೆ ಹಾಜರಾಗುತ್ತಾನೆ. ಒಬ್ಬ ಮಾತ್ರ ಇದರಲ್ಲಿ ಸಂಚರಿಸಲು ಅವಕಾಶ. ಹೆಲ್ಮೆಟ್‌ ಧರಿಸಿ ಹಿಂದೆ ಕೂತರೆ, ನಿರ್ದಿಷ್ಟ ಪ್ರದೇಶದಲ್ಲಿ ಬಿಡುವ ವ್ಯವಸ್ಥೆ ಇದೆ. ಇದರೊಂದಿಗೆ ಸವಾರನಿಗೆ ಇನ್ಸೂರೆನ್ಸ್‌ ವ್ಯವಸ್ಥೆ, ನಗದು ರಹಿತ ಹಣ ಪಾವತಿಗೂ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next