Advertisement
ಹಲವಾರು ವರ್ಷಗಳಿಂದ ಸಮಾಜ ಬಾಂಧವರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಸಂಘವು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಇನ್ನಿತರ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸಾಧನೆ ಅಪಾರ. ಅದರಲ್ಲೂ ಆರೇಳು ತಿಂಗಳ ಹಿಂದೆ ಬಂದೆರಗಿದ ಕೋವಿಡ್ ಸೋಂಕು ಮತ್ತು ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿದ್ದ ಸಮಾಜ ಬಾಂಧವರು ಮಾತ್ರವಲ್ಲದೆ ಮಹಾನಗರದಲ್ಲಿ ನೆಲೆಸಿರುವ ಅನೇಕ ಕನ್ನಡಿಗರು, ಅನ್ಯಭಾಷಿಗರಿಗೂ ನೆರವಿನ ಹಸ್ತವನ್ನು ಚಾಚಿದ ಒಕ್ಕಲಿಗರ ಸಂಘವು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
Related Articles
Advertisement
ಊರಿಗೆ ತೆರಳುವವರಿಗೆ ನೆರವು : ಈ ಮಧ್ಯೆ ಕೆಲವರು ಅತೀ ಅಗತ್ಯವಾಗಿ ಊರಿಗೆ ತೆರಳಲು ಬಯಸಿದ್ದನ್ನು ಗಮನಿಸಿದ ಸಂಘದ ಪದಾಧಿಕಾರಿಗಳು, ಸ್ಥಳೀಯ ಎಂಎಸ್‌ಆರ್‌ಟಿಸಿ ಅಧಿ ಕಾರಿಗಳನ್ನು ಸಂಪರ್ಕಿಸಿ ಸಹಕರಿಸಿದರು. ಅಲ್ಲದೆ ಹುಬ್ಬಳ್ಳಿಯಿಂದ ಮುಂಬಯಿಗೆ ಬಸ್‌ಗಳನ್ನು ತರಿಸಿ ಅಗತ್ಯವಿದ್ದವರಿಗೆ ಊರಿಗೆ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿದರು. ಸರಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಪಾಡುವಲ್ಲಿ ಮರೆಯಲಿಲ್ಲ.
ಕೊಲ್ಲಾಪುರದಲ್ಲಿ ಸಿಕ್ಕಿಬಿದ್ದ 34 ಮಂದಿಗೆ ಸಹಾಯ : ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳು ಸಹಿತ ಸುಮಾರು 34 ಮಂದಿ ಕನ್ನಡಿಗರು ಕೊಲ್ಲಾಪುರದಲ್ಲಿ ಸಿಕ್ಕಿಕೊಂಡಿದ್ದು, ಅತ್ತ ಊರಿಗೂ ಹೋಗಲಾ ರದೆ, ಇತ್ತ ಮುಂಬಯಿಗೂ ಆಗಮಿಸಲಾರದೆ ಇಕ್ಕಟ್ಟಿಗೆ ಸಿಲುಕ್ಕಿದ್ದರು. ಈ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸಿದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅಲ್ಲಿನ ಕೆಲವು ಗಣ್ಯರನ್ನು ಸಂಪರ್ಕಿಸಿ ಅವರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು.
ಶಾಸಕ-ಸಚಿವರೊಂದಿಗೆ ನಿರಂತರ ಸಂಪರ್ಕ :
ಈ ಎಲ್ಲ ಕಾರ್ಯಗಳಿಗಾಗಿ ಮಂಡ್ಯ, ಹಾಸನ ಹಾಗೂ ಮೈಸೂರು ಜಿಲ್ಲೆಯ ನಾಲ್ವರು ಶಾಸಕರು ಹಾಗೂ ಸಚಿವರಾದ ಡಾ| ಕೆ. ಸಿ. ನಾರಾಯಣ ಗೌಡ, ಶಾಸಕರಾದ ಬಾಲಕೃಷ್ಣ ಗೌಡ, ಸಿ. ಎಸ್. ಪುಟ್ಟರಾಜು ಇವರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸಂಘವು ಕಾರ್ಯನಿರ್ವಹಿಸಿದೆ. ಅಗತ್ಯ ಸಂದರ್ಭದಲ್ಲಿ ಸಚಿವ ಡಾ| ಕೆ. ಸಿ. ನಾರಾಯಣ ಗೌಡ ಅವರು ಸಮಾಜ ಬಾಂಧವರಿಗೆ ನೆರವನ್ನು ನೀಡಿದ್ದಾರೆ.
ಕಾರ್ಯಕಾರಿ ಸಮಿತಿಯ ಸಮಯೋಚಿತ ಸೇವೆ :
ಸಂಘದ ಕೋಶಾಧಿ ಕಾರಿ ದೀಪಕ್ ಆರ್. ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕುಮಾರ್ ಆರ್. ಗೌಡ, ಚೌಡಪ್ಪ ಗೌಡ, ಸುನಿಲ್ ಬಿ. ಗೌಡ, ಯೋಗೇಶ್ವರ್ ಗೌಡ, ಮಂಜ ಗೌಡ, ರಮೇಶ್ ಗೌಡ, ನಟೇಶ್ ಗೌಡ, ಮುತ್ತಣ್ಣ ಗೌಡ ಅಲ್ಲದೆ ಆಹಾರ ಸಾಮಗ್ರಿಗಳ ವಿತರಣೆಯಲ್ಲಿ ಸಂದೀಪ್ ಗೌಡ, ಸಂದೀಪ್ ಪಸಿ, ರಮೇಶ್ ಗೌಡ, ಚೇತು ಗೌಡ, ಸತೀಶ್ ಗೌಡ, ಮಂಜು ಗೌಡ, ಭಾರತಿ ಗೌಡ, ಮಂಜಣ್ಣ ಗೌಡ, ಕೃಷ್ಣ ಗೌಡ ಮತ್ತು ಇತರ ಅನೇಕ ಸದಸ್ಯರು ಸಹಕರಿಸಿದ್ದಾರೆ.
ತಡರಾತ್ರಿಯವರೆಗೂ ಜನಸೇವೆಗೈದ ಕಾರ್ಯಕರ್ತರು :
ಸಂಘದ ಕಾರ್ಯಕರ್ತರು ಸಮಾಜ ಬಾಂಧವರು, ತುಳು – ಕನ್ನಡಿಗರು ಯಾವ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಕಲೆ ಹಾಕಿ, ನೆರವು ಒದಗಿಸಲಾಯಿತು. ಸಮಿತಿಯ ಎಲ್ಲ ಸದಸ್ಯರು ಕೊರೊನಾ ಭಯದ ಮಧ್ಯೆ ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಬಿಡುವಿಲ್ಲದೆ ತಡರಾತ್ರಿ ತನಕ ಈ ಸೇವೆಯಲ್ಲಿ ನಿರತರಾಗಿದ್ದರು.
ನಮ್ಮ ಸಮಾಜದಲ್ಲಿ ಅನೇಕರು ಹೊಟೇಲ್ ಕಾರ್ಮಿಕರು, ಸಣ್ಣ ವ್ಯಾಪಾರಿಗಳಿದ್ದು, ದೈನಂದಿನ ಖರ್ಚಿಗೆ ಬೇಕಾದಷ್ಟು ಮಾತ್ರ ಸಂಪಾದಿಸುತ್ತಿದ್ದು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದರಲ್ಲೂ ಹೆಚ್ಚಿನವರು ಮುಂಬಯಿ, ನವಿಮುಂಬಯಿ, ಥಾಣೆ ಹಾಗೂ ಪಾಲ^ರ್ ಜಿಲ್ಲೆಯಲ್ಲಿದ್ದು, ಅವರವರ ಪರಿಸರದಲ್ಲಿರುವ ನಮ್ಮ ಸಂಘದ ಪ್ರಮುಖರು ಇವರನ್ನು ಸಂಪರ್ಕಿಸಿ ಕಿಟ್ ಅನ್ನು ವಿತರಿಸಿದರು. ಈಗಾಗಲೇ ಸಂಘದ ವತಿಯಿಂದ ಇದಕ್ಕೆ ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಲಾಗಿದ್ದು, ಈ ತನಕ ಯಾರಿಂದಲೂ ದೇಣಿಗೆ ಪಡೆಯಲಿಲ್ಲ. ಸಂಘದ ವತಿಯಿಂದ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಇದರಲ್ಲಿ ಅನೇಕರು ಕನ್ನಡಿಗರಾಗಿದ್ದು, ಸಣ್ಣ ಪುಟ್ಟ ವ್ಯಾಪಾರಗಳಾದ ದೋಸೆ, ಇಡ್ಲಿ ಮುಂತಾದವುಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದಾರೆ. ಈ ಎಲ್ಲ ಕೆಲಸಗಳನ್ನು ಯಶಸ್ವಿಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞನಾಗಿದ್ದೇನೆ. -ಜಿತೇಂದ್ರ ಗೌಡ ಅಧ್ಯಕ್ಷರು, ಒಕ್ಕಲಿಗರ ಸಂಘ ಮಹಾರಾಷ್ಟ್ರ