ಹೊಸದಿಲ್ಲಿ : ನಿಷೇಧಕ್ಕೆ ಗುರಿಯಾಗಿರುವ ಇರಾನ್‌ನಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ನಿಷೇಧ ಹೇರುವ ಅಮೆರಿಕದ ಬೆದರಿಕೆ ಮತ್ತು ನಿರಂತರವಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಜಾಗತಿಕ ಹಾಗೂ ಭಾರತೀಯ ತೈಲ ಕಂಪೆನಿಗಳ ಸಿಇಓ ಗಳ ಜತೆಗೆ ಮಾತುಕತೆ ನಡೆಸಿ ಈ ವಿಷಮ ಸ್ಥಿತಿಯಲ್ಲಿ ಮುನ್ನಡೆಯುವ ಮಾರ್ಗೋಪಾಯಗಳನ್ನು ಅನ್ವೇಷಿಸುವ ಯತ್ನ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಎಎನ್‌ಐ ವರದಿ ಪ್ರಕಾರ ಇಂದು ಬೆಳಗ್ಗೆ 10 ಗಂಟೆಗೆ ಈ ಸಭೆ ಆರಂಭವಾಗಿದ್ದು ಇದರಲ್ಲಿ ಜಾಗತಿಕ ತೈಲ ಸ್ಥಿತಿಗತಿಯನ್ನು ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.
ಇದೇ ವೇಳೆ ಈ ಸಭೆಯಲ್ಲಿ ಭಾರತದಲ್ಲಿ ವಿದೇಶಿ ಹೂಡಿಕೆ ಮತ್ತು ಸುಲಲಿತ ಉದ್ಯಮ ಕೈಗೊಳ್ಳುವ ಉಪಾಯಗಳನ್ನು ಕೂಡ ಚರ್ಚಿಸಲಾಗುವದು ಎಂದು ವರದಿಗಳು ಹೇಳಿವೆ.
ನೀತಿ ಆಯೋಗ ಈ ಸಭೆಯನ್ನು ಆಯೋಜಿಸಿದ್ದು ಇರಾನ್ ಮೇಲಿನ ಅಮೆರಿಕ ನಿಷೇಧ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿನ ಅಸಾಮಾನ್ಯ ಏರಿಳಿತಗಳ ಬಗ್ಗೆಯೂ ಚರ್ಚಿಸಲಾಗುವುದು ಎನ್ನಲಾಗಿದೆ.
ಕಳೆದ ಶುಕ್ರವಾರ ಪ್ರಧಾನಿ ಮೋದಿ ಅವರು ಹಣಕಾಸು ಸಚಿವ ಅರುಣ್ ಜೇತ್ಲಿ ಮತ್ತು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜತೆಗೆ ಪರಾಮರ್ಶೆ ಸಭೆಯನ್ನು ನಡೆಸಿದ್ದಾರೆ.