Advertisement
ಕೇಂದ್ರದ ತನಿಖಾ ದಳದಿಂದ ತನಿಖೆಮಲೇಶ್ಯಾದಿಂದ ಲೆಬನಾನ್‌ಗೆ ಉಕ್ಕಿನ ಕಾಯಿಲ್‌ಗಳನ್ನು ಸಾಗಿಸುತ್ತಿದ್ದ ನೌಕೆ ಸಮುದ್ರ ಮಧ್ಯದಿಂದ ತೀರದ ಬಳಿ ಸಾಗುತ್ತಾ ಉಳ್ಳಾಲದ ಬಟ್ಟಪಾಡಿಗೆ ಬಂದಿರುವುದು ಯಾಕೆ ಎಂಬ ಪ್ರಶ್ನೆ ಇನ್ನೂ ಉಳಿದುಕೊಂಡಿದೆ. ತಾಂತ್ರಿಕ ದೋಷ ಮತ್ತು ರಂಧ್ರ ಕಂಡು ಬಂದ ಕೂಡಲೇ ದುರಸ್ತಿಗಾಗಿ ನೌಕೆಯನ್ನು ಕ್ಯಾಪ್ಟನ್ ನವಮಂಗಳೂರು ಬಂದರಿನ ಆ್ಯಂಕರೇಜ್ ಮತ್ತು ಮಂಗಳೂರು ಹಳೇಬಂದರಿಗೆ ತರಲು ಪ್ರಯತ್ನಿಸಿದ್ದರೂ ಅನುಮತಿ ಸಿಕ್ಕಿರಲಿಲ್ಲ. ಆ ಕಾರಣ ಉಳ್ಳಾಲದತ್ತ ಹಡಗನ್ನು ಕೊಂಡೊಯ್ಯಲಾಗಿದೆ ಎನ್ನಲಾಗುತ್ತಿದೆ. ಆದರೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಈ ಬಗ್ಗೆ ಇಂಡಿಯನ್ ಕೋಸ್ಟ್‌ಗಾರ್ಡ್ ಜತೆ ಕೇಂದ್ರದ ತನಿಖಾ ದಳದಿಂದ ತನಿಖೆಯಾಗಲಿದೆ.