Advertisement

ತೀರ ಸೇರುತ್ತಿರುವ ತೈಲ ಜಿಡ್ಡು : ಪ್ರಯೋಗಾಲಯಕ್ಕೆ ಮಾದರಿ ರವಾನೆ

02:17 AM May 28, 2019 | sudhir |

ಕಾಪು: ಉಡುಪಿ ಭಾಗದಲ್ಲಿ ಸಮುದ್ರ ತೀರದಲ್ಲಿ ಕಂಡುಬಂದಿರುವ ತೈಲ ಜಿಡ್ಡಿನ ಉಂಡೆಗಳ ಮೂಲ ಪತ್ತೆಗಾಗಿ ಮಾದರಿಯನ್ನು ಮಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಪ್ರಯೋಗಾ ಲಯಕ್ಕೆ ರವಾನಿಸಲಾಗುವುದು ಎಂದು ಸಹಾಯಕ ಪರಿಸರ ಅಧಿಕಾರಿ ಪ್ರಮೀಳಾ ಹೇಳಿದರು.

Advertisement

ಸೋಮವಾರ ಮೂಳೂರು ಬೀಚ್ಗೆಭೇಟಿ ನೀಡಿ ತೀರದಲ್ಲಿ ಶೇಖರಣೆ ಗೊಂಡಿರುವ ತೈಲ ಜಿಡ್ಡನ್ನು ಪರಿಶೀಲಿ ಸಿದ ಬಳಿಕ ಅವರು ಮಾಧ್ಯಮದ ಜತೆ ಮಾತನಾಡಿದರು.

ಕಾಪು ಲೈಟ್ ಹೌಸ್‌ ಸುತ್ತ ಮುತ್ತ ಸಹಿತ ಮೂಳೂರು, ಉಚ್ಚಿಲ, ಎರ್ಮಾಳು, ಪಡುಬಿದ್ರಿ, ಕೈಪುಂಜಾಲು, ಮಟ್ಟು, ಉದ್ಯಾವರ ಬೀಚ್‌ನಲ್ಲಿ ತೈಲದ ಜಿಡ್ಡು ಸಮುದ್ರ ತೀರವನ್ನು ಸೇರುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರು ಸಮದ್ರ ತೀರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಪಣಂಬೂರು ಮತ್ತು ಸುರತ್ಕಲ್ ಬೀಚ್‌ಗಳಲ್ಲಿ ಕಾಣಿಸಿಕೊಂಡಿದ್ದ ಡಾಮರುತೈಲದ ಜಿಡ್ಡು ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲೂ ಕಾಣಿಸಿಕೊಂಡಿದೆ. ಇದನ್ನು ನಿರ್ಲಕ್ಷಿಸುವಂತಿಲ್ಲ. ಇದರಿಂದ ಸಮುದ್ರದಲ್ಲಿರುವ ಜಲಚರಗಳಿಗೆ, ಸಮುದ್ರ ತೀರದ ಜನರಿಗೆ, ಪ್ರವಾಸಿಗರಿಗೆ ಅಥವಾ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಇದೆಯೇ ಎನ್ನುವುದನ್ನು ತಿಳಿಯುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾರಣವೇನಿರಬಹುದು?

Advertisement

ಸಮುದ್ರ ತೀರದಲ್ಲಿ ತೈಲ ಜಿಡ್ಡು ಕಂಡುಬಂದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇದು ಮೇಲ್ನೋಟಕ್ಕೆ ಕ್ರೂಡ್‌ ಆಯಿಲ್ಗೆಸಂಬಂಧಿತ ಜಿಡ್ಡಿನಂತೆ ಕಂಡು ಬರುತ್ತಿದೆ. ಆದರೆ ಇದರ ಮೂಲವನ್ನು ಪತ್ತೆಹಚ್ಚುವ ಅಗತ್ಯವಿದೆ ಎಂದರು.

ತೈಲ ಜಿಡ್ಡಿನಂಶ ತೆರವಿಗೆ ಸೂಕ್ತ ಕ್ರಮ

ಕಾಪು ತಹಶೀಲ್ದಾರ್‌ ರಶ್ಮಿ ಮಾತನಾಡಿ, ಶೇಖರಗೊಂಡಿರುವ ಜಿಡ್ಡಿನಂಶವನ್ನು ತೆಗೆಯಲು ತಾಲೂಕು ಆಡಳಿತ ಕ್ರಮ ತೆಗೆದುಕೊಳ್ಳಲಿದೆ. ಮಲ್ಪೆಯಲ್ಲಿ ತೈಲ ಅಂಶ ಪತ್ತೆ ಯಂತ್ರಕ್ಕೆ ಬೇಡಿಕೆ ಇರಿಸಲಾಗಿದೆ. ಅದು ಆಗದಿದ್ದರೆ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಜಿಡ್ಡಿನಂಶ ತೆರವುಗೊಳಿಸಲಾಗುವುದು ಎಂದರು.

ಕಾಪು ತಾಲೂಕು ಕಂದಾಯ ಪರಿವೀಕ್ಷಕ ಕೆ. ರವಿಶಂಕರ್‌, ಗ್ರಾಮ ಕರಣಿಕ ಗಣೇಶ್‌ ಉಪಸ್ಥಿತರಿದ್ದರು.

ಪರಿಸರ ಅಧಿಕಾರಿ, ತಹಶೀಲ್ದಾರ್‌ ಭೇಟಿ; ಪರಿಶೀಲನೆ

Advertisement

Udayavani is now on Telegram. Click here to join our channel and stay updated with the latest news.

Next