Advertisement
ಕೋಡಿ ಕನ್ಯಾಣದಿಂದ ಬೀಜಾಡಿ ತನಕ ಕಡಲ ತೀರದಲ್ಲಿ ಇದು ಕಂಡುಬಂದಿದೆ. ಸೈಂಟ್ ಮೇರಿ ದ್ವೀಪ ಮತ್ತು ಮಲ್ಪೆ ಬೀಚ್‌ನಲ್ಲಿ ಕಪ್ಪು ಬಣ್ಣದ ತೈಲ ಮಿಶ್ರಿತ ಜಿಡ್ಡಿನ ಪ್ರಮಾಣ 2-3 ದಿನಗಳಿಂದ ತೇಲಿ ಬರುತ್ತಿದ್ದು, ಬುಧವಾರವೂ ಮುಂದುವರಿದಿದೆ. ಮಲ್ಪೆಯಲ್ಲಿ ಶೇಖರಗೊಂಡಿರುವ 50 ಕೆ.ಜಿ.ಯಷ್ಟು ಡಾಮರು ಉಂಡೆ ಯಂತಹ ವಸ್ತುವನ್ನು ಮಲ್ಪೆ ಅಭಿವೃದ್ಧಿ ಸಮಿತಿ ತೆರವು ಮಾಡಿ ಸ್ವತ್ಛಗೊಳಿಸಿದೆ.
ಈ ಕಲ್ಮಶದಿಂದ ಮೀನುಗಾರಿಕೆಗೆ ಸಮಸ್ಯೆಯಾಗುತ್ತದೆ ಮತ್ತು ಕಡಲಾಮೆಗಳು ಸಾವನ್ನಪ್ಪುವ ಸಾಧ್ಯತೆ ಇದೆ. ಎಪ್ರಿಲ್, ಮೇ ತಿಂಗಳಲ್ಲಿ ಸಮುದ್ರದ ತೀರಪ್ರದೇಶದಲ್ಲಿ ಮೀನಿನ ಕೊರತೆಯಿಂದಾಗಿ ಮೀನುಗಾರರು ತೀವ್ರ ಸಂಕಷ್ಟವನ್ನು ಅನುಭವಿಸಿದ್ದಾರೆ. .
Related Articles
ಕಳೆದ ವರ್ಷವೂ ಒಂದೆರಡು ಬಾರಿ ಇದೇ ರೀತಿಯ ಜಿಡ್ಡು ಸಮುದ್ರದಲ್ಲಿ ಕಾಣಿಸಿಕೊಂಡಿತ್ತು. ಈ ಸಲ ಹಲವಾರು ಬಾರಿ ಪುನರಾವರ್ತನೆಯಾಗಿದೆ. ಸೈಂಟ್ ಮೇರಿ ದ್ವೀಪದಂತಹ ಕಡೆ ಈ ರೀತಿ ತ್ಯಾಜ್ಯ ಕಂಡುಬರುವುದು ಪ್ರವಾಸೋದ್ಯಮದ ಹಿನ್ನಡೆಗೆ ಕಾರಣವಾಗುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಮಲ್ಪೆ ಬೀಚ್ ನಿರ್ವಾಹಕ ಸುದೇಶ್ ಶೆಟ್ಟಿ ಆಗ್ರಹಿಸಿದ್ದಾರೆ.
Advertisement
ಸ್ಥಳೀಯ ಸಮಸ್ಯೆ ಅಲ್ಲ: ಡಿಸಿಮಂಗಳೂರು: ಸಮುದ್ರದಲ್ಲಿ ತೈಲ ಜಿಡ್ಡು ಮುಂಗಾರು ಮಳೆ ಆರಂಭವಾಗುವ ವೇಳೆ ಪಶ್ಚಿಮ ಕರಾವಳಿ ಉದ್ದಕ್ಕೂ ಕಂಡು ಬರುತ್ತಿದೆ. ಅದು ಕೇವಲ ಮಂಗಳೂರು ಕರಾವಳಿಗೆ ಸೀಮಿತವಾದ ಸಮಸ್ಯೆ ಅಲ್ಲ ಎಂದು ದ. ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.