ಹೊಸದಿಲ್ಲಿ: ತೈಲ ಕಂಪೆನಿಗಳು ಈಗ ಪೆಟ್ರೋಲ್ ಅನ್ನು ಲೀಟರ್‌ಗೆ 10 ರೂ.ನಂತೆ ಲಾಭದಲ್ಲಿ ಮಾರಾಟ ಮಾಡು ತ್ತಿದ್ದರೆ, ಡೀಸೆಲ್ ಅನ್ನು ಲೀಟರ್‌ಗೆ 6.5 ರೂ.ಗಳಷ್ಟು ನಷ್ಟದಲ್ಲಿ ಮಾರುತ್ತಿವೆ!
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಮತ್ತು ಹಿಂದು ಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಕಂಪೆ ನಿಗಳು ಕಳೆದ 15 ತಿಂಗಳಿಂದ ತಮ್ಮ ವೆಚ್ಚಕ್ಕೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಿಲ್ಲ.
2022ರ ಜೂನ್ 24ಕ್ಕೆ ಅಂತ್ಯಗೊಂಡ ವಾರದಲ್ಲಿ ಪೆಟ್ರೋಲ್ ಮಾರಾಟದಿಂದ ಲೀಟರ್‌ಗೆ 17.4 ರೂ. ಹಾಗೂ ಡೀಸೆಲ್ ಮಾರಾಟದಿಂದ ಲೀ.ಗೆ 27.7 ರೂ. ನಷ್ಟ ಆಗುತ್ತಿತ್ತು. ಅನಂತರದಲ್ಲಿ ಅಂದರೆ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಕಂಪೆನಿಗಳಿಗೆ ಪೆಟ್ರೋಲ್ ಮಾರಾಟದಿಂದ ಲೀ.ಗೆ 10 ರೂ.ಗಳಷ್ಟು ಲಾಭ ಉಂಟಾಗುತ್ತಿದೆ. ಆದರೆ ಡೀಸೆಲ್ ಮಾರಾಟದಿಂದ 6.5 ರೂ.ನಷ್ಟು ನಷ್ಟವಾಗುತ್ತಿದೆ ಎಂದು ಐಸಿಐಸಿಐ ಸೆಕ್ಯೂರಿಟಿಸ್ ವರದಿ ಹೇಳಿದೆ.
ಪೆಟ್ರೋಲ್ ಮಾರಾಟ ದಿಂದ ಲಾಭ ಆಗುತ್ತಿದ್ದರೂ ಡೀಸೆಲ್‌ನಿಂದಾಗುವ ನಷ್ಟವನ್ನು ಭರಿಸಿಕೊಳ್ಳುವ ಸಲುವಾಗಿ ಕಂಪೆನಿಗಳು ತೈಲ ಮಾರಾಟ ದರದಲ್ಲಿ ಪರಿಷ್ಕರಣೆ ಮಾಡಿಲ್ಲ ಎಂದೂ ವರದಿ ಹೇಳಿದೆ.