Advertisement

Sandalwood: ಸುಂದರ ರಾಕ್ಷಸಿ ಇವಳು!

10:07 AM Oct 23, 2024 | Team Udayavani |

ಪ್ಯಾನ್‌ ಇಂಡಿಯಾ ಕಾನ್ಸೆಪ್ಟ್ ಕ್ರೇಜ್‌ ಹೆಚ್ಚಾದ ಮೇಲೆ ಕನ್ನಡ ಸಿನಿಮಾಗಳು ಬೇರೆ ಭಾಷೆಗೆ ಹೋಗುವುದು, ಬೇರೆ ಭಾಷೆಯ ಸಿನಿಮಾಗಳು ಡಬ್‌ ಆಗಿ ಕನ್ನಡಕ್ಕೆ ಬರುವುದು ನಿರಂತರವಾಗಿ ನಡೆಯುತ್ತಿದೆ.  ಈ ಸಾಲಿಗೆ ಹೊಸ ಸೇರ್ಪಡೆ ಓ ಅಂದಾಲಾ ರಾಕ್ಷಸಿ. ತೆಲುಗಿನಲ್ಲಿ ತಯಾರಾಗಿರುವ ಈ ಚಿತ್ರ ಈಗ ಕನ್ನಡದಲ್ಲೂ ತೆರೆಕಾಣಲು ಸಿದ್ಧತೆ ನಡೆಸಿದೆ.

Advertisement

ಈ ಚಿತ್ರಕ್ಕೆ ಕನ್ನಡದಲ್ಲಿ “ಓ ಸುಂದರ ರಾಕ್ಷಸಿ’ ಎಂದು ಟೈಟಲ್‌ ಇಡಲಾಗಿದೆ. ಈ ಹಿಂದೆ ಶಾಲಿನಿ ಎ ಕ್ಯೂಟ್‌ ಡೆವಿಲ್ ಮತ್ತು ಕೆಎಸ್‌ 100 ಸಿನಿಮಾ ನಿರ್ದೇಶನ ಮಾಡಿದ್ದ ಶೆರಝ್ ಮೆಹಿª ಇದೀಗ ಓ ಅಂದಾಲಾ ರಾಕ್ಷಸಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಜತೆಗೆ ಸಸ್ಪೆನ್ಸ್‌ ಥ್ರಿಲ್ಲರ್‌ ಮತ್ತು ಅಡ್ವೆಂಚರ್‌ ಶೈಲಿಯ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿಯೂ ಶೆರಝ್ ಮೆಹ್ತಿ ನಟಿಸಿದ್ದಾರೆ. ವಿಹಾಂಶಿ ಹೆಗೆಡೆ, ಶೆರಝ್ ಮೆಹ್ತಿ, ಕೃತಿ ವರ್ಮಾ, ನೇಹಾ ದೇಶಪಾಂಡೆ ಸುಮನ್‌ ತಲ್ವಾರ್‌, ತಮ್ಮಾ ರೆಡ್ಡಿ ಪಾತ್ರವರ್ಗದಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next