Advertisement

Oh My God 2: ಪ್ರಮಾಣಪತ್ರ ನೀಡಲು CBFC ಹಿಂದೇಟು

11:47 PM Jul 13, 2023 | Team Udayavani |

ಮುಂಬಯಿ: ಅಕ್ಷಯ್‌ ಕುಮಾರ್‌ ನಟನೆಯ “ಓ ಮೈ ಗಾಡ್‌ 2” ಸಿನೆಮಾಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ಸಿ) ಪ್ರಮಾಣಪತ್ರ ನೀಡಲು ಹಿಂದೇಟು ಹಾಕಿದೆ.

Advertisement

ಈ ಚಿತ್ರವನ್ನು ಸಂಪೂರ್ಣ ವಿಮರ್ಶೆಗಾಗಿ ಪರಿಷ್ಕರಣೆ ಸಮಿತಿಗೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಸಂಭಾಷಣೆಯ ಕಾರಣದಿಂದಾಗಿ “ಆದಿಪುರುಷ್‌’ ಸಿನೆಮಾ ವಿವಾದಕ್ಕೀಡಾಗಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಇನ್ನೊಂದೆಡೆ, ಖ್ಯಾತ ಪೋಷಕ ನಟ ಪರೇಶ್‌ ರಾವಲ್‌ ಅವರು “ಓ ಮೈ ಗಾಡ್‌ 2′ ಸಿನೆಮಾದಲ್ಲಿ ನಟಿಸಬೇಕಿತ್ತು.

ಆದರೆ ಸಂಭಾವನೆ ವಿಷಯದಲ್ಲಿ ಚಿತ್ರ ತಂಡ ಮತ್ತು ನಟನ ನಡುವೆ ಒಪ್ಪಂದ ಕುದುರದ ಹಿನ್ನೆಲೆಯಲ್ಲಿ ಅವರು ಸಿನೆಮಾದಿಂದ ಹಿಂದೆ ಸರಿದರು ಎಂದು ಮೂಲಗಳು ತಿಳಿಸಿವೆ. ಆ.11ರಂದು ಸಿನೆಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next