Advertisement

ಅಬ್ಬಾ! ಹಾರ್ಮೋನಿಯಂ ಹಬ್ಬ! 

04:55 PM Jun 16, 2018 | Team Udayavani |

ಸಂಗೀತ ಹಬ್ಬಗಳು, ಫ‌ುಡ್‌ ಫೆಸ್ಟಿವಲ್‌ಗ‌ಳಿಗೆ ಈ ರಾಜಧಾನಿಯಲ್ಲಿ ನಡೆಯುತ್ತಲೇ ಇರುತ್ತವೆ. ಸಂಗೀತಪ್ರಿಯರು, ಆಹಾರಪ್ರಿಯರು ಅಲ್ಲಿ ಸೇರಿ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ಹಾಗೆಯೇ ಹಾರ್ಮೋನಿಯಂ ಪ್ರಿಯರಿಗಾಗಿ “ಹಾರ್ಮೋನಿಯಂ ಹಬ್ಬ’ ನಡೆಯುತ್ತಿದೆ. ಬಿಜಾಪುರೆ ಹಾರ್ಮೋನಿಯಂ ಫೌಂಡೇಶನ್‌ನವರು ಕಳೆದ 12 ವರ್ಷಗಳಿಂದ ಹಬ್ಬ ನಡೆಸುತ್ತಿದ್ದು, ಪ್ರಸಿದ್ಧ ಹಾರ್ಮೋನಿಯಂ ವಾದಕರಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಹಾರ್ಮೋನಿಯಂನ ವಿವಿಧ ಆಯಾಮಗಳನ್ನು ತೆರೆದಿಡುವುದು, ಶ್ರೋತೃಗಳಲ್ಲಿ ಹೊಸ ಅಭಿರುಚಿ ಬೆಳೆಸುವುದು ಇದರ ಉದ್ದೇಶ.

Advertisement

   ಈ ಬಾರಿಯ ಹಬ್ಬದಲ್ಲಿ, ವಿನಾಯಕ್‌ ಹೆಗ್ಡೆ ಹಾಗೂ ತೇಜಸ್‌ ಕಾಟೋಕಿ ಅವರಿಂದ ಹಾರ್ಮೋನಿಯಂ ಜುಗಲ್‌ಬಂದಿ, ಮಿಲಿಂದ್‌ ವಾಸುದೇವ್‌ ಕುಲಕರ್ಣಿ ಅವರಿಂದ ಸೋಲೊ ಪ್ರದರ್ಶನ ನಡೆಯುತ್ತಿದೆ. ದತ್ತಾತ್ರೇಯ ವೇಲಂಕರ್‌ರಿಂದ ಶಾಸ್ತ್ರೀಯ ಹಾಡುಗಾರಿಕೆ, ಸಾತ್ವಿಕ್‌ ಚಕ್ರವರ್ತಿ, ಸಮೀರ್‌ ಹವಾಲ್ದಾರ್‌, ಪ್ರಶಾಂತ್‌ ರಾವ್‌ ಮತ್ತು ವಿನ್ಯಾಸ್‌ ಶ್ರೀಧರ್‌ರಿಂದ ಪ್ರದರ್ಶನ ನಡೆಯಲಿದೆ. ಶಾಸ್ತ್ರೀಯ ಹಾಗೂ ರಂಗಸಂಗೀತವನ್ನು ಮುಂಬೈನ ನಿರಂಜನ್‌ ಲೆಲೆ ಹಾರ್ಮೋನಿಯಂನಲ್ಲಿ ಪ್ರಸ್ತುತಪಡಿಸಲಿದ್ದಾರೆ. ರವೀಂದ್ರ ಮಾನೆ ಹಾಗೂ ಡಾ. ರವೀಂದ್ರ ಕಾಟೋಕಿ ಅವರಿಂದ ಜುಗಲ್‌ಬಂದಿ ನಡೆಯಲಿದೆ. ಡಾ. ಉದಯ್‌ರಾಜ್‌ ಕರ್ಪೂರ್‌ (ತಬಲ), ಸುಮಿತ್‌ ನಾಯಕ್‌ (ತಬಲ), ಮಧುಸೂಧನ್‌ ಭಟ್‌ (ಹಾರ್ಮೋನಿಯಂ) ವಾದ್ಯವೃಂದಲ್ಲಿದ್ದಾರೆ. 

ಎಲ್ಲಿ?: ಸೇವಾಸದನ,  ಮಲ್ಲೇಶ್ವರ
ಯಾವಾಗ?: ಜೂ. 24, ಭಾನುವಾರ, ಮ.3

Advertisement

Udayavani is now on Telegram. Click here to join our channel and stay updated with the latest news.

Next