Advertisement

ಓ ಬಂದಾ.. ಕನ್ನಡದ ಕಂದಾ.!

06:28 PM Jul 15, 2019 | Team Udayavani |

ಪಿಯುಸಿಯ ಹುಡುಗರನ್ನೆಲ್ಲಾ ಒಟ್ಟುಗೂಡಿಸಿದ ಗ್ರೂಪ್‌ ಅದು. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮದೇ ಒಂದು ಸಣ್ಣ ಆನ್ಲ„ನ್‌ ಸಂಘವನ್ನು ಕಟ್ಟಬೇಕೆಂದು ನಿರ್ಧರಿಸಿದ ಗೆಳೆಯ ಅಶೋಕ “ಕನ್ನಡ ರಕ್ಷಣಾ ವಿದ್ಯಾರ್ಥಿಗಳ ಸಂಘ’ ಎನ್ನುವ ವ್ಯಾಟ್ಸಾಪ್‌ ಗ್ರೂಪ್‌ ಮಾಡಿದ್ದ. ಕನ್ನಡದಲ್ಲಿ ಮೆಸೇಜ್‌ಗಳನ್ನು ಕಳಿಸಬೇಕೆನ್ನುವುದು ಗ್ರೂಪಿನ ನಿಯಮವಾಗಿತ್ತು. ಆದರೆ, ಒಂದೆರಡು ಮಂದಿಗಷ್ಟೇ ಕನ್ನಡವನ್ನು ಟೈಪ್‌ ಮಾಡಲು ಬರುತ್ತಿದ್ದದ್ದು, ಉಳಿದವರ್ಯಾರು ಕನ್ನಡವನ್ನು ಬಳಸುತ್ತಿರಲಿಲ್ಲ ಅನ್ನುವುದು ವಿಷಾದನೀಯ. ಇದೆಲ್ಲವೂ ಗ್ರೂಪ್‌ನಲ್ಲಿ ಸೇರಿಸಿಕೊಂಡ ಮೇಲೆ ತಿಳಿದ ಸತ್ಯ.

Advertisement

ಹೀಗಾಗಿ, ಆರಂಭದಲ್ಲಿ ಗ್ರೂಪಿನಿ ನಿಯಮವನ್ನು ಉಲ್ಲಂಘಿಸುವಂತೆಯೇ ಊಟ, ತಿಂಡಿ, ಕಾಫಿ ಮುಂತಾದ ಕ್ಷೇಮ ಸಮಾಚಾರಗಳೆಲ್ಲಾ ಇಂಗ್ಲೀಷ್‌ನಲ್ಲಿಯೇ ಶುರುವಾದವು. ಕನ್ನಡದ ಒಂದು ಮೆಸೇಜ್‌ ಕೂಡ ಕಾಣುತ್ತಿರಲಿಲ್ಲ. ಅಡ್ಮಿನ್‌ ಅಶೋಕ ಗುಂಪಿನ ನಿಯಮವನ್ನು ಉಲ್ಲಂಘಿಸುತ್ತಿದ್ದೀರಿ ಎಂದು ಆಗಾಗ ರೊಚ್ಚಿಗೇಳುತ್ತಿದ್ದ. ಅವನಿಗೂ, ಕೆಲ ಗೆಳೆಯರಿಗೂ ಮೆಸೇಜುಗಳ ಚಕಮಕಿಗಳು ನಡೆದಿದ್ದವು. ಇವರ ಗಲಾಟೆಗಳು ಮುಗಿದ ಒಂದು ವಾರ ಗ್ರೂಪ್‌ ಮೌನವಾಗಿತ್ತು. ಕೊನೆಗೂ ಕೆಲವರು ಮೌನ ಮುರಿದು ಮತ್ತೆ ಇಂಗ್ಲೀಷ್‌ನಲ್ಲಿ ಮೆಸೇಜುಗಳನ್ನು ಹಾಕಲು ಶುರು ಮಾಡಿಕೊಂಡರು. ಪುನಃ ಅಶೋಕ ಕನ್ನಡದಲ್ಲಿ ಕಳಿಸಿ ಎಂದು ಕೇಳಿಕೊಂಡ, ಅಲ್ಲಿ ಅವನ ಮಾತನ್ನು ಯಾರೂ ಲೆಕ್ಕಿಸುತ್ತಿರಲಿಲ್ಲ. ಅವನು ಕನ್ನಡದಲ್ಲಿ ಮೆಸೇಜ್‌ ಮಾಡಿದಾಗಲೆಲ್ಲಾ ” ಓ ಬಂದಾ.. ಕನ್ನಡದ ಕಂದಾ.!” ಎಂದು ಗೇಲಿ ಮಾಡುತ್ತಿದ್ದರು. ಇದರಿಂದ ರೋಸಿ ಹೋದ ಅಶೋಕ, “ನೀವೆಲ್ಲಾ ಕನ್ನಡಗರೇ ಅಲ್ಲ, ಥೂ ..ಹೋಗ್ರೋಲೋ…’ ಎಂದು ತಾನೇ ಮಾಡಿದ ಗ್ರೂಪಿನಿಂದ ಹೊರಗೆ ಹೋಗಿಬಿಟ್ಟ. ಈಗ ಆ ಕಂದ ಹೊರಗೆ, ಮಿಕ್ಕವರೆಲ್ಲಾ ಒಳಗೆ. ನಿರಾತಂಕವಾಗಿ ಇಂಗ್ಲೀಷಿನಲ್ಲಿ ಎಲ್ಲ ಮಾತುಕತೆ ನಡೆಯುತ್ತಿದೆ.

-ಯೋಗೇಶ್‌ ಮಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next