Advertisement

ಬಾಲ್ಯವಿವಾಹ ತಡೆದ ಅಧಿಕಾರಿಗಳು

06:53 PM Dec 13, 2020 | Suhan S |

ನೆಲಮಂಗಲ: ತಾಲೂಕಿನ ಸ್ವರ್ಣಾಂಬ ಪ್ರಾರ್ಥನಾ ಮಂದಿರದಲ್ಲಿ ನಡೆಯುತಿದ್ದ ಬಾಲ್ಯವಿವಾಹವನ್ನು ನಿಲ್ಲಿಸಿದ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ತುಮಕೂರಿನ ಕುಪ್ಪೂರು ಗ್ರಾಮದ17 ವರ್ಷ 4ತಿಂಗಳ

Advertisement

ವಧು ಹಾಗೂ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದ 28 ವರ್ಷದ ವರನಿಗೆ ಶನಿವಾರ ಹಾಗೂ ಭಾನುವಾರ ಮದುವೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಮಕ್ಕಳ ಸಹಾಯವಾಣಿಗೆ ದೂರು ಬಂದ ತಕ್ಷಣ ದಾಳಿ ಮಾಡಿದ ಅಧಿಕಾರಿಗಳು ಮದುವೆ ಮಂಟಪದಲ್ಲಿದ್ದಹುಡುಗಿಯಿಂದ ಮಾಹಿತಿ ಪಡೆದು ದಾಖಲಾತಿ ಪರಿಶೀ ಲನೆ ಮಾಡಿ ರಕ್ಷಣೆ ‌ ಮಾಡಿದ್ದಾರೆ. ಮದುವೆ ಮಂಟಪಕ್ಕೆ ಅಧಿಕಾರಿಗಳ ದಾಳಿ ಮಾಡುತಿದ್ದಂತೆ ಹುಡುಗಿಯ ತಾಯಿನಾಪತ್ತೆಯಾಗಿದ್ದು, ಹುಡುಗಿಯನ್ನು ತುಮಕೂರು ಬಾಲಕಿಯರ ವಸತಿನಿಲಯದಲ್ಲಿ ಆಶ್ರಯ ನೀಡಲಾಗಿದ್ದು, ಪ್ರಕರಣ ದಾಬಸ್‌ಪೇಟೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಕ್ಷಮಿಸಿ ಸರ್‌: ಬಾಲ್ಯವಿವಾಹದ ಮದುವೆಯನ್ನು ನಿಲ್ಲಿಸಿದ ಅಧಿಕಾರಿಗಳಿಗೆ ಕೈಮುಗಿದು ವರನ ಕುಟುಂಬದವರು ನಮಗೆ ಗೊತ್ತಿಲ್ಲ ಸರ್‌ ಗೊತ್ತಿದ್ದರೆ ಮದುವೆಗೆ ಒಪ್ಪುತಿರಲಿಲ್ಲ ಕ್ಷಮಿಸಿ ಎಂದು ಅಧಿಕಾರಿಗಳಿಗೆಕ್ಷಮೆ ಕೇಳಿದ್ದಾನೆ.

ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವೆ :

ದೇವನಹಳ್ಳಿ: ಗ್ರಾಮಗಳ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ,ದೊಡ್ಡಪ್ಪನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದುಎಂದು ಗ್ರಾಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಸೋಮಶೇಖರ್‌ ತಿಳಿಸಿದರು.

Advertisement

ತಾಲೂಕಿನ ಕನ್ನಮಂಗಲ ಗ್ರಾಪಂನಲ್ಲಿ ದೊಡ್ಡಪ್ಪನಹಳ್ಳಿ ಮತಕ್ಷೇತ್ರದಿಂದ ಚುನಾವಣಾಧಿಕಾರಿ ಮುನಿರಾಜ್‌ ಅವರಿಗೆ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, ಕಳೆದ 5 ವರ್ಷದ ಅವಧಿಯಲ್ಲಿ ಗ್ರಾಪಂ ಸದಸ್ಯನಾಗಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಗ್ರಾಮಕ್ಕೆ ಮಾಡಿದ್ದೇನೆ.ಮತ್ತೂಂದು ಅವಧಿಗೆ ಆಯ್ಕೆ ಮಾಡಿದರೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕನ್ನಮಂಗಲ ಗ್ರಾಪಂನಲ್ಲಿ ಕನ್ನಮಂಗಲ ಪಾಳ್ಯದ ಮತ ಕ್ಷೇತ್ರದಿಂದ ಅಭ್ಯರ್ಥಿ ಪಿ.ನಾಗೇಶ್‌ ಚುನಾವಣಾಧಿಕಾರಿ ಮುನಿ ರಾಜ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಕಳೆದ 5 ವರ್ಷದ ಅವಧಿಯಲ್ಲಿ ಉತ್ತಮ ವಾಗಿ ಕಾರ್ಯನಿರ್ವಹಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದರೆ ಗ್ರಾಮದಲ್ಲಿ ಮತ್ತಷ್ಟು ಅಭಿವೃದ್ಧಿಗೆ ಕಾರ್ಯಗಳಿಗೆಒತ್ತುನೀಡಲಾಗುವುದು ಎಂದರು. ಸಾಮಾನ್ಯ ಮಹಿಳಾ ಸ್ಥಾನಕ್ಕೆ ಅಭ್ಯರ್ಥಿ ಮೋಸಿನ್‌ತಾಜ್‌ ನಾಮಪತ್ರ ಸಲ್ಲಿಸಿದರು. ಮನು,ಆಸೀಫ್ ಹೆಕ್ಬಾಲ್‌, ಟ್ರ್ಯಾಕರ್‌ ‌r ನಾರಾಯಣಪ್ಪ, ನಾಸೀರ್‌ ಅಹಮದ್‌, ಗೋಪಾಲ್‌, ಲಕ್ಷ್ಮೀಕಾಂತ್‌, ನರಸಿಂಹ ಮೂರ್ತಿ, ವಕೀಲ ಚಂದ್ರಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next