Advertisement
ಮನೆ ಬಿದ್ದಿರುವುದು, ವಿದ್ಯುತ್ ಅಭಾವ, ಟಿಸಿ ಬದಲಾವಣೆ, ಹಕ್ಕು ಪತ್ರ ಬದಲಾವಣೆ, ಗ್ರಾಮದ ಅಸ್ವತ್ಛತೆ ಮೊದಲಾದ ಸಮಸ್ಯೆ ಕುರಿತು ಜನರು ತಹಶೀಲ್ದಾರ್ ಗಮನಸೆಳೆದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ 40 ಜನರಿಗೆ ಮಾಶಾಸನ ನೀಡಲಾಯಿತು.
Related Articles
Advertisement
ತಹಶೀಲ್ದಾರ್ ಬಸವರಾಜ ನಾಗರಾಳ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಕಷ್ಟಗಳಾದವು. ಗ್ರಾಮದಲ್ಲಿ ಆಗಬೇಕಾದ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಬಗೆಹರಿಸಲಾಗುವುದು. ಸರಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡಬೇಕೆಂದರು.
ಗ್ರಾಪಂ ಅಧ್ಯಕ್ಷೆ ಅನಸೂಯಾ ತಳವಾರ, ಉಪಾಧ್ಯಕ್ಷೆ ರೂಪಾ ಹೊಸಮನಿ, ಆರ್ .ಎ. ಪಾಟೀಲ, ಸದಸ್ಯರಾದ ಶಿವಾನಂದ ಪಾಟೀಲ, ನಾಗಮ್ಮ ಪಾಟೀಲ, ಅಡಿವೆಪ್ಪ ಮೋದಗಿ, ಯಲ್ಲನಗೌಡ ದೊಡ್ಡಗೌಡರ, ಗಂಗಪ್ಪ ಸಂಗಮ್ಮನವರ, ತಾ.ಪಂ ಇಒ ಸುಭಾಸ ಸಂಪಗಾವಿ, ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ, ಬಿಇಒ ಎ.ಎನ್. ಪ್ಯಾಟಿ, ಕೃಷಿ ಇಲಾಖೆ ಅಧಿಕಾರಿಗಳಾದ ರುದ್ರಪ್ಪ ಕುಂಬಾರ, ಬಿ.ಎಸ್. ಚಿಕ್ಕಮಠ, ಎಇಇ ಎಸ್. ಕೆ. ಮೂಗಸಜ್ಜಿ, ಕೆಇಬಿ ಎ.ಇ. ಅಣ್ಣಪ್ಪ ಲಮಾಣಿ, ಉಪ ತಹಶೀಲ್ದಾರ್ ಬಸವರಾಜ ಹುಬ್ಬಳ್ಳಿ, ವೃತ್ತ ನಿರೀಕ್ಷಕ ಬಸವರಾಜ ಬೊರಗಲ್ಲ, ಪಿಡಿಒ ರಮೇಶ ನಂದಿಹಳ್ಳಿ, ಗ್ರಾಮ ಲೆಕ್ಕಾಧಿಕಾರಿಗಳಾದ ರಾಮಚಂದ್ರ ನಾಯಕ, ಶಿವಾನಂದ ಕರಿಗಾರ, ಮಹಾಂತೇಶ ಕೊಣೀನವರ, ಜಗದೀಶ ಗೌಡರ, ಡಾ| ಬಸವಣೆಪ್ಪ ಕುರಗುಂದ, ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ಎ.ಎಸ್. ಉಳವಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಕಾಂತ ಉಡಕೇರಿ ಸ್ವಾಗತಿಸಿದರು. ಬಸವರಾಜ ಕೆರಕನ್ನವರ ನಿರೂಪಿಸಿದರು. ಅರ್ಜುನ ಕೋಣಿನವರ ವಂದಿಸಿದರು.