Advertisement

Ullal: ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಿ

02:21 PM Aug 02, 2024 | Team Udayavani |

ಉಳ್ಳಾಲ: ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಎಲ್ಲ ಗ್ರಾಮಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಬೇಕು. ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಅಧಿಕಾರಿಗಳಿಗೆ ಇರುವ ಸಮನ್ವಯ ಕೊರತೆಗಳನ್ನು ಬಗೆಹರಿಸಬೇಕು. ಮುಂದಿನ ಒಂದು ತಿಂಗಳು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘ – ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಫರೀದ್‌ ತಿಳಿಸಿದರು.

Advertisement

ದೇರಳಕಟ್ಟೆಯ ಬಿಸಿಸಿ ಸಭಾಂಗಣದಲ್ಲಿ ನಡೆದ ಉಳ್ಳಾಲ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅ ಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಪ್ರಾಕೃತಿಕ ವಿಕೋಪಗಳ ಕುರಿತು ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೇ ತಿಂಗಳ ಕೊನೆಯಲ್ಲಿ ಮಳೆಗಾಲ ಆರಂಭವಾಗಿದೆ. ನಿರಂತರ ಪ್ರಾಕೃತಿಕ ವಿಕೋಪಗಳು ನಡೆಯುತ್ತಲೇ ಬಂದಿದ್ದು, ಈ ಕುರಿತು ತುರ್ತು ಸಭೆ ನಡೆಸಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಪ್ರಾಕೃತಿಕ ವಿಕೋಪಗಳು ನಡೆದಾಗ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಅನ್ನುವ ನಿರ್ದೇಶನಗಳನ್ನು ನೀಡಲಾಗಿದೆ. ಎಲ್ಲೆಲ್ಲ ಹಾನಿಯಾಗಿದೆ, ಎಷ್ಟು ನಷ್ಟವುಂಟಾಗಿದೆ. ಸಾವು ನೋವಿನ ವಿಚಾರಗಳ ಕುರಿತು ,ಚರ್ಚಿಸಲಾಗಿದೆ. ಸರಕಾರ ಅವರಿಗೆ ಎಷ್ಟು ಪರಿಹಾರ ನೀಡಬೇಕು, ಅದು ಮುಂದೆ ನಡೆಸಬೇಕಾದ ಕ್ರಮಗಳು. ಗ್ರಾ. ಪಂ. ಸದಸ್ಯರ ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಕೊರತೆಗಳು ಉಂಟಾಗುತ್ತಿದೆ. ಅದನ್ನು ಬಗೆಹರಿಸಲು ಮತ್ತು ಸಮಸ್ಯೆಗಳನ್ನು ಪುನರ್‌ ವಿಮರ್ಶಿಸುವ ಸಲುವಾಗಿಯೂ ಚರ್ಚಿಸಲಾಗಿದೆ ಎಂದರು.

ಸಮನ್ವಯ ಕೊರತೆ ಬಗೆಹರಿಸಿ

ಹೈಟೆನ್ಶನ್‌ ತಂತಿ, ಆರ್‌ಡಿಪಿಆರ್‌ ಪೈಪ್‌, ಪೊಲೀಸ್‌ ವ್ಯವಸ್ಥೆಗಳಲ್ಲಿ ಪ್ರಸ್ತುತ ಸಂದರ್ಭ ತೊಂದರೆಗಳಾಗುತ್ತಿದ್ದು, ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳಾದ ಅರಣ್ಯ, ಮೆಸ್ಕಾಂ, ಆರ್‌ಡಿಪಿಆರ್‌, ಪಿಡಬ್ಲ್ಯುಡಿ, ಅಧಿಕಾರಿಗಳು ಜತೆಯಾಗಿ ಎಲ್ಲ ಗ್ರಾಮಕ್ಕೆ ಭೇಟಿ ಅಲ್ಲಿರುವ ಸಮನ್ವಯ ಕೊರತೆಗಳನ್ನು ಬಗೆಹರಿಸಿಕೊಂಡು ಹೋಗಬೇಕೆಂದು ಖಾದರ್‌ ನಿರ್ದೇಶನ
ನೀಡಿದರು.

Advertisement

ಗ್ರಾಮ ಪಂಚಾಯತ್‌ ತುರ್ತು ನಿಧಿಗೆ ಸೂಚನೆ

ಮನೆಗಳಿಗೆ ಹಾನಿಯುಂಟಾದಾಗ ತತ್‌ ಕ್ಷಣ ರೂ. 6,500 ಕಂದಾಯ ಇಲಾಖೆ ನೀಡಬೇಕಾಗಿದೆ. ಗ್ರಾಮಕರಣಿಕ ಬಂದು ಪರಿಶೀಲನೆ ನಡೆಸಿದ ಅನಂತರ ಎಂಜಿನಿಯರ್‌ ವರದಿ ಸಲ್ಲಿಸಿದ ಒಂದು ವಾರದ ಒಳಗೆ ನಷ್ಟ ಪರಿಹಾರವನ್ನು ನೀಡಬೇಕಾಗಿದೆ. ಜನರಿಗೆ ಸಮಸ್ಯೆಯಾದಲ್ಲಿ ಸ್ಥಳೀಯ ಪಂ.ಸದಸ್ಯರ ಮೂಲಕ ತನ್ನ ಗಮನಕ್ಕೆ ತರಬಹುದು ತತ್‌ ಕ್ಷಣ ಅನಾಹುತಗಳು ಸಂಭವಿಸಿದಾಗ ಗ್ರಾ.ಪಂ.ಗಳಲ್ಲಿ ಅನುದಾನವಿರುವುದಿಲ್ಲ ಅನ್ನುವುದನ್ನು ಸದಸ್ಯರು ಗಮನಕ್ಕೆ ತಂದಾಗ ಸ್ವಂತ ನಿಧಿಯಿಂದ ನೀಡಬೇಕಾಗಿದೆ. ಅದು ಕೂಡ ಕೆಲವು ಗ್ರಾಮಾಡಳಿತಗಳಲ್ಲಿ ಇರುವುದಿಲ್ಲ. ಅದಕ್ಕಾಗಿ ಸರಕಾರ ಜಿಲ್ಲಾಧಿಕಾರಿ ಮುಖಾಂತರ ತುರ್ತು ನಿಧಿ ಬಿಡುಗಡೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದ ಅವರುಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಂದು ತಿಂಗಳಅವಧಿಗೆ ಸಕ್ರಿಯವಾಗಿರಬೇಕು. ಜನರಿಗೆ ತೊಂದರೆಯಾಗುವ ಸಂದರ್ಭ ಸ್ಪಂದಿಸಬೇಕಿದೆ ಎಂದು ತಿಳಿಸಿದರು.

ಅದ್ದೂರಿ ಸ್ವಾತಂತ್ರ್ಯ ದಿನ ಆಚರಣೆಗೆ ಸಿದ್ಧತೆ

ತೊಕ್ಕೊಟ್ಟು ಬೃಹತ್‌ ಧ್ವಜಸ್ತಂಭದ ಅಡಿಯಲ್ಲಿ ತಾಲೂಕು ರಚನೆಯಾದ ಎರಡನೇ ವರ್ಷದ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಎಲ್ಲ ಇಲಾಖೆಗಳು ಸೇರಿಕೊಂಡು ಪ್ರಮುಖವಾಗಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ತಹಶೀಲ್ದಾರ್‌ ನೇತೃತ್ವದಲ್ಲಿ ಉತ್ಸವ ಸಮಿತಿಯನ್ನು ರಚಿಸಲಾಗಿದೆ ಎಂದು ಖಾದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next