ಮುಳಬಾಗಿಲು: ನಕಲಿ ಬಯೋ ಔಷಧಿ ಮಾರಾಟ ಮಾಡಿ, ರೈತರನ್ನು ವಂಚನೆ ಮಾಡುತ್ತಿದ್ದು, ರಘು ಆಗ್ರೋ ಟ್ರೇಡರ್ ಅಂಗಡಿ ಮೇಲೆ ಕೃಷಿ ಜಂಟಿ ನಿರ್ದೇಶಕಿ ರೂಪಾದೇವಿ ಹಾಗೂತಾಲೂಕು ಸಹಾಯಕ ಕೃಷಿ ನಿರ್ದೇಶಕ ರವಿಕುಮಾರ್‌ಒಳಗೊಂಡ ಕೃಷಿ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ,ಲಕ್ಷಾಂತರ ರೂ. ಔಷಧಿಯನ್ನು ವಶಪಡಿಸಿಕೊಂಡು ಅಂಗಡಿಮಾಲಿಕ ರಘುನಾಥ ರೆಡ್ಡಿ ವಿರುದ್ಧ ನಂಗಲಿ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ತಾಲೂಕಿನ ಬೈರಕೂರು ಹೋಬಳಿ ಎಚ್.ಬಯ್ಯಪ್ಪನಹಳ್ಳಿ ಗಡಿ ಭಾಗದಲ್ಲಿ ರಘು ಆಗ್ರೋ ಟೇಡರ್ ಮಾಲಿಕ ರಘುನಾಥ ರೆಡ್ಡಿ ಎಂಬಾತ ನಕಲಿ ಬಯೋ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ, ರೈತರಿಗೆ ವಂಚನೆ ಮಾಡುತ್ತಾ ಸರ್ಕಾರ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ದಿಕ್ಕು ತಪ್ಪಿಸಿ, ಔಷಧಿಗಳ ಮಾರಾಟದ ಹೆಸರಿನಲ್ಲಿ ನಕಲಿ ರಸಗೊಬ್ಬರವನ್ನು ಅಕ್ರಮವಾಗಿ ಮಾರಾಟಮಾಡುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದರು.
ಅಧಿಕಾರಿಗಳು ರಘು ಟ್ರೇಡರ್ ಮೇಲೆ ದಾಳಿ ಮಾಡಿದಾಗ, ಅಂಗಡಿ ಮಾಲಿಕರು ಆಂಧ್ರ ಮೂಲಕದ ಬಯೋ ಔಷಧಿಗಳನ್ನು ರಾತ್ರಿ ವೇಳೆ ಅಕ್ರಮವಾಗಿ ದಾಸ್ತಾನು ಮಾಡಿ,ಔಷಧಿ ಖರೀದಿ ಮಾಡುವ ರೈತರಿಗೆ ಯಾವುದೇ ಬಿಲ್ ನೀಡದೆ, ವಂಚಿಸುತ್ತಾ ರಸಗೊಬ್ಬರ ಹಾಗೂ ಡ್ರಿಪ್ ಗೊಬ್ಬರಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, 5 ವರ್ಷದಿಂದ ಜಿಲ್ಲೆಯ ವಿವಿಧ ಬೆಳೆಗಳಿಗೆ ಬಾಧಿಸುತ್ತಿರುವ ನುಸಿ ಊಜಿ, ಬೊಬ್ಬೆ ರೋಜ್ ಮುಂತಾದರೋಗಗಳಿಗೆ ಲಕ್ಷಾಂತರ ರೂ., ನೀಡಿ ಖರೀದಿ ಮಾಡುವ ಔಷಧಿಯಿಂದ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಕೃಷಿ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದರಿಂದ ನಕಲಿ ಔಷಧಿಗಳ ಮಾರಾಟಗಾರರ ವಿರುದ್ಧ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರು.
ತಾಲೂಕು ಕೃಷಿ ಅಧಿಕಾರಿ ರವಿಕುಮಾರ್ ಮಾತನಾಡಿ, ಅಂಗಡಿ ಮಾಲಿಕರು ಯಾವುದೇ ಸ್ಟಾಕ್ ಪುಸ್ತಕ, ರೈತರಿಗೆ ನೀಡಿರುವ ರಸೀದಿ ಪುಸ್ತಕವಿಲ್ಲ. ಜೊತೆಗೆ ನಕಲಿ ಜಿ.2 ಫಾರಂ ಹೆಸರಿನಲ್ಲಿ ರೈತರನ್ನು ವಂಚನೆ ಮಾಡುತ್ತಿದ್ದಾರೆ. ಪ್ರಕರಣವನ್ನು ಪರಿಗಣಿಸಿ, ತಾಲೂಕಿನಲ್ಲಿ ನಕಲಿ ಔಷಧಿ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ಈ ಪ್ರಕರಣ ಎಚ್ಚೆತ್ತುಕೊಳ್ಳಲು ಅವಕಾಶ ಎಂದು ಹೇಳಿದರು. ಕೃ
ಷಿ ಅಧಿಕಾರಿ ಭವ್ಯ, ರೈತ ಸಂಘದ ಮುಖಂಡರಾದ ಮಂಜುನಾಥ, ಶ್ರೀನಿವಾಸ, ಆಂಜಿನಪ್ಪ,ಆನಂದರೆಡ್ಡಿ ಯಲವಳ್ಳಿ ಪ್ರಭಾಕರ್ ಮತ್ತು ರೈತರು ಹಾಜರಿದ್ದರು.