Advertisement
ಕುರುವಳ್ಳಿ ಬಂಡೆಗೆ ಹೋಗುವ ಮಾರ್ಗದಲ್ಲಿ ಮಂಗಳವಾರ ರಾತ್ರಿ ಟ್ರೆಂಚ್ ಹೊಡೆದ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಮೇಲಿನಕುರುವಳ್ಳಿಯ ಕಲ್ಲುಕುಟಿಕರ ಸಂಘದ ಕಾರ್ಯಾಲಯದಲ್ಲಿ ಬುಧವಾರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಗ್ರಾಪಂ ಮತ್ತು ಪಪಂ ಜನಪ್ರತಿನಿಧಿಗಳು, ಬಂಡೆ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು.
Related Articles
ಪಡಿಸಿ ಅಮಾನವೀಯವಾಗಿ ನಡೆದುಕೊಂಡಿದ್ದೀರಿ. ತಾಲೂಕಿನಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಆ ಬಗ್ಗೆ ಗಮನ ಹರಿಸದ ನಿಮ್ಮ ಇಲಾಖೆ ಬಂಡೆ ಕಾರ್ಮಿಕರ ಮೇಲೆ ಮಾತ್ರ ದಬ್ಬಾಳಿಕೆ ನಡೆಸುತ್ತಿದ್ದೀರಿ ಎಂದೂ ದೂರಿದರು.
Advertisement
ಈ ಬಗ್ಗೆ ಪ್ರತಿಕ್ರಯಿಸಿದ ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ವಿಂಧ್ಯಾ ಮತ್ತು ಅವಿನಾಶ್, ಇದರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕಾರಣ ಇಲಾಖೆಯ ನಿಯಮದಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಸ್ಥಳೀಯರೇ ದೂರು ನೀಡಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದಷ್ಟೇ ಈ ಸಮಸ್ಯೆ ಉದ್ಘವವಾಗಿದೆ. ಮತ್ತು ಸಿದ್ದಪಡಿಸಿದ ಕಲ್ಲುಗಳನ್ನು ನಾಶ ಪಡಿಸುವ ಹಕ್ಕು ನಮಗಿದೆ. ಮುಖ್ಯವಾಗಿ ನಾಳೆಯಿಂದ ಇಲ್ಲಿ ಕೆಲಸ ನಡೀಬಾರದು ಅಷ್ಟೇ ಎಂದು ಹೇಳಿದರು.
ಗ್ರಾಪಂ ಸದಸ್ಯರೊಬ್ಬರ ಆರೋಪದ ಬಗ್ಗೆ ಉತ್ತರಿಸಿದ ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ವಿಂಧ್ಯಾ ಈ ತಾಲೂಕಿನಲ್ಲಿ ಮರಳು ಅಕ್ರಮ ನಡೆಯುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿಯೂ ಇಲ್ಲಾ. ಮಾಹಿತಿ ಇದ್ದಲ್ಲಿ ಖಂಡಿತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದಕ್ಕೆ ಮೊದಲು ನಡೆದ ಸಭೆಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ನಾನು ಕಾನೂನಿಗೆ ವಿರುದ್ದವಗಿಲ್ಲ. ಆದರೆ ಇಲ್ಲಿ ಮಾನವೀಯತೆಯೇ ಮುಖ್ಯವಾಗಿದೆ. ನನ್ನ ಅಧಿಕಾರವಧಿಯಲ್ಲಿ ಈ ಸಮಸ್ಯೆಯನ್ನು ನಿರ್ವಹಣೆ ಮಾಡಿದ್ದೇನೆ. ಈಗ ಗೃಹ ಸಚಿವರು ತಮ್ಮ ಹಿಂಬಾಲಕರಿಗೆ ಬಂಡೆಯನ್ನು ಗುತ್ತಿಗೆ ಕೊಡಿಸುವ ಸಲುವಾಗಿ ಅಧಿಕಾರಿಗಳನ್ನು ಬಳಸಿ ಕಿರುಕುಳ ನೀಡುತ್ತಿದ್ದಾರೆ. ಅಧಿಕಾರಿಗಳು ಮಾನವೀಯತೆಯನ್ನು ಮೀರಿ ಕಾರ್ಯನಿರ್ವಹಿಸುತ್ತಿರುವುದು ಖಂಡನೀಯ ಎಂದರು. ಕಾರ್ಮಿಕರಿಗೆ ಕೆಲಸವಿಲ್ಲದ ಕಾರಣ ಹೆಂಗಸರ ತಾಳಿಸರ ಅಡವಿಟ್ಟು ಜೀವನ ನಿರ್ವಹಣೆ ಮಾಡುವ ಸಂಕಷ್ಠ ಎದುರಾಗಿದೆ. ಸುಮಾರು 75% ಕಾರ್ಮಿಕರು ಈಗಾಗಲೇ ವಲಸೆ ಹೋಗಿದ್ದಾರೆ. ಈ ಬಗ್ಗೆ ಗುರುವಾರ ಬೆಳಿಗ್ಗೆ ತಾಲೂಕು ಕಚೇರಿ ಎದುರು ಧರಣಿ ನಡೆಸುವುದಾಗಿಯೂ ತಿಳಿಸಿದರಲ್ಲದೇ ಈ ವಿಚಾರದಲ್ಲಿ ಜೈಲಿಗೆ ಹೋಗುವುದಕ್ಕೂ ಸಿದ್ದನಿದ್ದೇನೆ ಎಂದರು.
ಮೇಲಿನಕುರುವಳ್ಳಿ ಗ್ರಾಪಂ ಸದಸ್ಯ ನಿಶ್ಚಲ್ ಮಾತನಾಡಿ, ಮಹಿಳೆಯರು ಮಕ್ಕಳು ವಾಸವಿರುವ ಜನವಸತಿ ಪ್ರದೇಶದಲ್ಲಿ ಅಧಿಕಾರಿಗಳು ರಾತ್ರಿ ಹೊತ್ತಿನಲ್ಲಿ ಏಕಾಏಕಿ ಜೆಸಿಬಿ ಬಳಸಿ ಟ್ರೆಂಚ್ ಹೊಡೆದ ಕಾರಣ ಜನರು ಭಯಭೀತರನ್ನಾಗಿಸಿದೆ. ಇದು ಸರ್ವಾಧಿಕಾರಿ ಧೋರಣೆಯಾಗಿದೆ. 300 ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿಂದ ಕಾರ್ಕಳ, ತುಮಕೂರು, ಶಿರಾ ಮತ್ತು ಕೋಲಾರ ಭಾಗಕ್ಕೆ ವಲಸೆ ಹೋಗಿದ್ದಾರೆ ಎಂದು ಹೇಳಿದರು.
ಮಾಜಿ ಅದ್ಯಕ್ಷ ರವಿ, ಬಂಡೆ ಕಾರ್ಮಿಕ ಆನಂದ್ ಮಾತನಾಡಿ, ಬಂಡೆ ಗುತ್ತಿಗೆಯನ್ನು ಪ್ರಬಾವಿಗಳಿಗೆ ಕೊಡುವ ಹುನ್ನಾರವಾಗಿದ್ದು 50 ಲಕ್ಷ ವ್ಯವಹಾರ ನಡೆಸಿದವರಿಗೆ 4 ಬ್ಲಾಕ್‌ಗಳನ್ನು ವಿಭಾಗ ಮಾಡಿ ಇ ಟೆಂಡರ್ ಮೂಲಕ ಕರೆಯುವ ಪ್ರಕ್ರಿಯೆ ನಡೆದಿದೆ. ಬಡವರಾದ ನಾವು ಅಷ್ಟು ದೊಡ್ಡ ಮಟ್ಟದ ವ್ಯವಹಾರ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಲ್ಲು ಕುಟಿಕರ ಸಂಘದ ಅಧ್ಯಕ್ಷ ನಾಗೇಂದ್ರ, ಗ್ರಾಪಂ ಅದ್ಯಕ್ಷೆ ಭವ್ಯಾ ರಾಘವೇಂದ್ರ, ಸದಸ್ಯರಾದ ನಾಗರಾಜ ಪೂಜಾರಿ, ಬಂಡೆ ವೆಂಕಟೇಶ್, ಪಪಂ ಅದ್ಯಕ್ಷೆ ಸುಶೀಲಾಶೆಟ್ಟಿ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರಾದ ಮಂಜುಳಾ ನಾಗೇಂದ್ರ ಹಾಗೂ ಬಂಡೆ ಮಾಲೀಕರು ಕಾರ್ಮಿಕರುಇದ್ದರು.