ಮಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಈ ವಿಷಯದಲ್ಲಿ ಬೇಜವಬ್ದಾರಿಯನ್ನು ತೋರಬಾರದು ಎಂದು ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ.
ಇಂದು ಮಂಗಳೂರಿಗೆ ಆಗಮಿಸಿದ ಪ್ರಭು ಚವ್ಹಾಣ್ , ಕಾರವಾರ ಮಂಗಳೂರು ಹಾಗೂ ಉಡುಪಿಯಲ್ಲಿ ದಿನದಿಂದ ದಿನಕ್ಕೆ ಗೋಹತ್ಯೆ ಗೋ ಕಳ್ಳತನ ನಡೆಯುತ್ತಿದೆ. ಇನ್ನು ಈ ರೀತಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಎಸ್.ಪಿ ಮತ್ತು ಡಿ.ಸಿ.ಪಿ ಗೆ ಖಡಕ್ ಆದೇಶ ನೀಡಿದರು.
ಜಿಲ್ಲೆಯಲ್ಲಿ ಅತೀ ಹೆಚ್ಚು ಗೋ ಶಾಲೆ ನಿರ್ಮಾಣ ಆಗಬೇಕು. ಕೆಲವೊಂದು ಪ್ರದೇಶಗಳಿಗೆ ಗೋ ವೈದ್ಯರುಗಳು ಹೋಗುವುದಿಲ್ಲ ಎಂದು ದೂರುಗಳು ಬಂದಿದೆ. ಇಂತಹ ದೂರುಗಳು ಇನ್ನು ಮುಂದೆ ಬರಬಾರದು.
ಗೋಕಳ್ಳತನ ಆಗುತ್ತಿದೆ ಎಂದು ಯಾರು ಮಾಹಿತಿ ಕೊಡುತ್ತರೋ ಅವರನ್ನೇ ಬಂಧಿಸುತ್ತಿದ್ದೀರಿ. ಈ ರೀತಿ ನಡೆಯಬಾರದು ಸರಿಯಾಗಿ ಕಾರ್ಯನಿರ್ವಹಿಸಬೇಕು. ಹಕ್ಕಿಜ್ವರ ಏನಾದರೂ ಮತ್ತೆ ಕಾಣಿಸಿಕೊಂಡರೆ ಸರಿಯಾಗಿ ಅಲರ್ಟ್ ಆಗುವಹಾಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧ ಮಾಡುತ್ತಿದೆ. ಹೇಗೆ ಬೇಕಾದರೂ ಠೀಕೆ ಮಾಡಿ ಪರವಾಗಿಲ್ಲ. ಗೋ ಮಾತೆಗೆ ಮಹತ್ವವಾದ ಸ್ಥಾನವಿದೆ. ಈ ಹಿಂದೆ ಗೋರಕ್ಷಣೆಯಲ್ಲಿ ಕೇಸು ದಾಖಲಿಸಿಕೊಂಡವರ ಕೇಸನ್ನು ಹಿಂದೆಗೆಯಲು ಇದರ ಬಗ್ಗೆ ಗೃಹಮಂತ್ರಿವರ ಜೊತೆ ಚರ್ಚೆ ಮಾಡುತ್ತೇನೆ. ತಾಲೂಕಿಗೆ ಒಂದು ಸರ್ಕಾರಿ ಗೋ ಶಾಲೆಯನ್ನು ನಿರ್ಮಿಸಲು ಯೋಚನೆಯಾಗಿದೆ ಎಂದು ಈ ವೇಳೆ ತಿಳಿಸಿದರು.