ಕೊರಟಗೆರೆ: ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲಾ ಅಧಿಕಾರಿಗಳು ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ತಾಪಂ ಕೆಡಿಪಿ ಸಭೆಯಲ್ಲಿ ಮಾತನಾಡಿ, ಇಲಾಖಾ ಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು. ಇಲಾಖಾಧಿಕಾರಿಗಳು ಪ್ರತಿನಿತ್ಯ ದೂರದ ಊರು ಗಳಿಂದ ಬರುತ್ತಿದ್ದು ಕಚೇರಿಯಲ್ಲಿ ಕೆಲಸಗಳು ಕುಂಠಿತವಾಗಿದ್ದು, ಕ್ಷೇತ್ರದಲ್ಲೇ ಇದ್ದು ಜನರಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಸಕ್ಕರೆ ಇಲ್ಲದ ಹಾಲು: ತಾಲೂಕು ಕಚೇರಿ ಮತ್ತು ತಾಪಂ ಕಚೇರಿ ಶುಚಿತ್ವವಿಲ್ಲದೆ ನೂತನ ಕಟ್ಟಡ ಶಿಥಿಲ ವಾಗಿರುವಂತೆ ಕಾಣುತ್ತಿದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದ ಅವರು, ಕಂದಾಯ ಇಲಾಖೆಯಲ್ಲಿ ಅನೇಕ ದೂರುಗಳು ಬರುತ್ತಿದ್ದು, ಈ ಕುರಿತು ಡೀಸಿಯೊಂದಿಗೆ ಸಭೆ ನಡೆಸುತ್ತೇನೆ. ತಾಲೂಕಿನಲ್ಲಿ ಅಕ್ಷರ ದಾಸೋಹದೊಂದಿಗೆ ಮಕ್ಕಳಿಗೆ ಕ್ಷೀರಭಾಗ್ಯ ನೀಡುತ್ತಿದ್ದು, ಕೋಳಾಲ ಹೋಬಳಿಯ ಶಾಲೆಯೊಂದ ರಲ್ಲಿ ಸಕ್ಕರೆ ಇಲ್ಲದೆ ಮಕ್ಕಳಿಗೆ ಹಾಲು ನೀಡುತ್ತಿದ್ದಾರೆ. ಈ ಬಗ್ಗೆ ಅಕ್ಷರ ದಾಸೋಹ ಅಧಿಕಾರಿಗಳು ಪರಿ ಶೀಲಿಸಬೇಕು. ಶಿಕ್ಷಣಾಧಿಕಾರಿಗಳು ತಾಲೂಕಿ ಎಲ್ಲಾ ಶಾಲೆಗಳಿಗೂ ಭೇಟಿ ನೀಡಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ ಇರಬೇಕು. ಶೌಚಗೃಹ ಇಲ್ಲದ ಶಾಲೆ ಗುರುತಿಸಿ ವರದಿ ಸಲ್ಲಿಸಬೇಕು. ಶಾಲೆ ಆವರಣದಲ್ಲಿ ಸಸಿ ನೆಟ್ಟು ಪೋಷಿಸುವಂತೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.
ತಾಲೂಕಿನಲ್ಲಿ ಯಾವ ಹೋಬಳಿ, ಗ್ರಾಮದಲ್ಲಿ ಮಳೆಯಾಗಿದೆ ಎಂಬುದು ತಿಳಿಯುತ್ತಿಲ್ಲ. ಮುಂದಿನ ಸಭೆಗೆ ಪ್ರತಿ ಹೋಬಳಿ ಸೇರಿದಂತೆ ಗ್ರಾಪಂ ವ್ಯಾಪ್ತಿ ಯಲ್ಲಿ ಮಳೆ ವಿವರ ನೀಡುವಂತೆ ಹಾಗೂ ಪ್ರಸ್ತುತ ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ವಿತರಿಸುವಂತೆ ಕೃಷಿ ಅಧಿಕಾರಿ ನಾಗರಾಜುಗೆ ಡಿಸಿಎಂ ತಿಳಿಸಿದರು.
ಸರ್ಕಾರದ ಸವಲತ್ತು ನೀಡಿ: ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಳೆದ 5 ವರ್ಷಗಳಿಂದ ಒಂದೇ ವರದಿ ನೀಡುತ್ತಿದ್ದೀರಿ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರಿಗೆ ಆರ್ಥಿಕವಾಗಿ ಲಾಭದಾಯಕ ತರಕಾರಿ ಹಾಗೂ ಹಣ್ಣುಗಳು ಬೆಳೆಯಲು ಸರ್ಕಾರದ ಸವಲತ್ತು ನೀಡಬೇಕು ಎಂದರು. ರಾಜ್ಯದಲ್ಲಿ ಆಹಾರ ಇಲಾಖೆಯಿಂದ ಶೇ.90 ಬಿಪಿಎಲ್ ಕಾರ್ಡ್ ವಿತರಿ ಸಿರುವ ಮಾಹಿತಿ ಇದ್ದು, ಈ ಬಗ್ಗೆ ಸರಿಯಾದ ಮಾಹಿತಿ ದೊರೆಯದಂತಾಗಿದ್ದು, ಇಲಾಖಾಧಿಕಾರಿ ಗಳು ತನಿಖೆ ಮೂಲಕ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಮಾಡಿ ವರದಿ ನೀಡುವಂತೆ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಜಗದೀಶ್ ಮಾಹಿತಿ ನೀಡಿ, ಪ್ರಸಕ್ತ ವರ್ಷದಲ್ಲಿ ತಾಲೂಕಿನಲ್ಲಿ ವಿವಿಧ ರಸ್ತೆ ಕಾಮಗಾರಿಗೆ 107 ಕೋಟಿ ರೂ. ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರಮೇಶ್ ಮಾಹಿತಿ ನೀಡಿ, ತಾಲೂಕಿನಲ್ಲಿ ಗೋಬಲ ಗುಟ್ಟೆ ಕೆರೆ ಹಾಗೂ ಗೌಡನಕೆರೆ ಅಭಿವೃದ್ಧಿಗೆ ವಿಶೇಷ ಅನುದಾನವಾಗಿ 1.5 ಕೋಟಿ ರೂ.ಬಿಡುಗಡೆ ಯಾಗಿದ್ದು, ಇದರೊಂದಿಗೆ ಚೆಕ್ ಡ್ಯಾಂ ಮತ್ತು ರಕ್ಷಣಾ ಗೋಡೆಗಳ ನಿರ್ಮಾಣಕ್ಕೂ ಹಣ ಬಿಡುಗಡೆಯಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.
ಇಂಜಿನಿಯರ್ ರಂಗಪ್ಪ ಮಾತನಾಡಿ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು 139 ಕಾರ್ಯನಿರ್ವಹಿಸುತ್ತಿದ್ದು, ಇದೊಂದಿಗೆ 32 ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 132 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಬೇಡಿಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಪ್ರಕಾಶ್ ಮತ್ತು ತಾಲೂಕು ವೈದ್ಯಾಧಿಕಾರಿ ಡಾ.ವಿಜಯ ಕುಮಾರ್, ಸಮಾಜ ಕಲಾಣ್ಯಾಧಿಕಾರಿ, ಸಿಡಿಪಿಒ ಶಮಂತಕ ಮಾಹಿತಿ ನೀಡಿದರು. ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ತಾಪಂ ಅಧ್ಯಕ್ಷ ನಾಜೀಮಾಬೀ, ಉಪಾಧ್ಯಕ್ಷ ವೆಂಕಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಜಿಪಂ ಸದಸ್ಯ ಪ್ರೇಮಾ ಮಹಾಲಿಂಗಪ್ಪ, ನಾರಾಯಣ ಮೂರ್ತಿ, ಶಿವರಾಮಯ್ಯ, ಅಕ್ಕಮಹಾದೇವಿ, ಮಧುಗಿರಿ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ಶಿವರಾಜು, ಇಒ ಶಿವಪ್ರಕಾಶ್ ಇತರರಿದ್ದರು.