Advertisement

ಮಿನಿ ವಿಧಾನಸೌಧಕ್ಕೆ ಕಚೇರಿಗಳು ಸ್ಥಳಾಂತರ 

12:10 PM Mar 29, 2018 | Team Udayavani |

ಬೆಳ್ತಂಗಡಿ: ಜನವರಿ 7ರಂದು ಉದ್ಘಾಟನೆಗೊಂಡಿದ್ದ ಮಿನಿ ವಿಧಾನಸೌಧಕ್ಕೆ ಹಳೆ ತಾಲೂಕು ಕಚೇರಿಯಿಂದ ಕಚೇರಿಗಳು ಸ್ಥಳಾಂತರ ಗೊಳ್ಳುತ್ತಿವೆ. ಹೊಸ ಕಟ್ಟಡದಲ್ಲಿ ಈಗಾಗಲೇ ವಿವಿಧ ವಿಭಾಗಗಳು ಕಾರ್ಯಾಚರಣೆ ಆರಂಭಿಸಿವೆ. ತಾಲೂಕು ಕಚೇರಿಯನ್ನು ಸ್ಥಳಾಂತರಿಸುವ ಕಾರ್ಯ ಮೂರು ದಿನಗಳಿಂದ ನಡೆಯುತ್ತಿದೆ. ಜತೆಗೆ ಕಾರ್ಯ ಚಟುವಟಿಕೆಯನ್ನೂ ನಡೆಸಲಾಗುತ್ತಿದೆ.

Advertisement

ಆರಂಭದಲ್ಲಿ ಪರದಾಟ
ಜನರು ಕಚೇರಿಗಳಿಗಾಗಿ ಹಳೆ ಕಟ್ಟಡಕ್ಕೆ ತೆರಳಿ ಬಳಿಕ ಮಿನಿ ವಿಧಾನ ಸೌಧದತ್ತ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಡತಗಳೂ ಎಲ್ಲಿ ಸಿಗುತ್ತವೆ ಎಂಬ ಮಾಹಿತಿ ಸರಿಯಾಗಿ ದೊರಕದ ಕಾರಣ ಪರದಾಡ ಬೇಕಾಯಿತು. ಇನ್ನೂ ಕೆಲವು ವಿಭಾಗಗಳ ಕಚೇರಿಗಳಲ್ಲಿ ವ್ಯವಸ್ಥೆ ಸರಿಯಾಗಿ ಆಗಬೇಕಿದೆ.

ಎಪ್ರಿಲ್‌ನಲ್ಲಿ ಸರ್ವ ವ್ಯವಸ್ಥಿತ
ಕಚೇರಿಗಳಲ್ಲಿ ಗಣಕ ಯಂತ್ರ ಅಳವಡಿಕೆ ಕಾರ್ಯ, ತಾಂತ್ರಿಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡುವ ಕಾರ್ಯ ನಡೆಯುತ್ತಿದೆ. ಕಚೇರಿಗಳಲ್ಲಿ ಕಾರ್ಯ ಚಟುವಟಿಕೆ ನಡೆಯುತ್ತಿದ್ದರೂ ಎಲ್ಲ ಕಚೇರಿಗಳು ಮಿನಿ ವಿಧಾನಸೌಧದಲ್ಲಿ
ಆರಂಭ ಗೊಂಡಿಲ್ಲ. ಎಪ್ರಿಲ್‌ ಬಳಿಕ ಕೊಠಡಿ ಗಳು ವ್ಯವಸ್ಥಿತ ರೀತಿಯಲ್ಲಿ ಸಜ್ಜಾಗಿ ಸಾರ್ವಜನಿಕರಿಗೆ ಸೇವೆ ನೀಡುವ
ಸೂಚನೆಗಳು ಲಭಿಸಿವೆ.

ವಿವಿಧ ಇಲಾಖೆಗಳು ಬಾಕಿ
ಜಾಗದ ಕೊರತೆಯಿಂದ ಇನ್ನೂ ವಿವಿಧ ಇಲಾಖೆಗಳು ಸ್ಥಳಾಂತರ ಗೊಂಡಿಲ್ಲ. ಉಪಖಜಾನೆ ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿಗಳು ಜಾಗದ ಕೊರತೆಯಿಂದ ಈಗ ಇರುವಲ್ಲಿಯೇ ಕಾರ್ಯನಿರ್ವಹಿಸಲಿವೆ.

ಚುನಾವಣಾ ಶಾಖೆ
ಮಿನಿ ವಿಧಾನಸೌಧದಲ್ಲೇ ಚುನಾವಣಾ ಶಾಖೆ ಆರಂಭಿಸಲಾಗಿದೆ. ಚುನಾವಣಾ ಚಟುವಟಿಕೆಗೆ ಕಚೇರಿಯಲ್ಲಿ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ.

Advertisement

ಮೆಟ್ಟಿಲು ಹತ್ತಲು ಸಮಸ್ಯೆ
ಎರಡು ಮಹಡಿಗಳಲ್ಲಿ ಕಚೇರಿಗಳು ಆರಂಭಗೊಂಡಿದ್ದು, ಮೆಟ್ಟಿಲು ಹತ್ತಿ ಕೊಂಡು 2 ಮಹಡಿಗಳನ್ನು ಏರಬೇಕಾಗಿದೆ.
ಹಿರಿಯ ನಾಗರಿಕರು ಆಗಮಿಸಿದರೆ ಕಟ್ಟಡದ ಕೊಠಡಿಗೆ ತಲುಪುವಲ್ಲಿ ಸುಸ್ತಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಿಫ್ಟ್‌ ಅಳವಡಿಕೆ ಕಾರ್ಯ ಶೀಘ್ರ ನಡೆಸಿದಲ್ಲಿ ಸಾರ್ವಜನಿಕರಿಗೆ ಅದರಲ್ಲೂ ವೃದ್ಧರು, ಅಂಗವಿಕಲರಿಗೆ ನೆರವಾಗಲಿದೆ.

ಎಲ್ಲೆಲ್ಲಿ ಏನೇನು ?
ನೆಲಮಹಡಿಯಲ್ಲಿ ತಹಶೀಲ್ದಾರರ ಕೊಠಡಿ, ಉಪಖಜಾನೆ, ಅಟಲ್‌ಜೀ ಕೇಂದ್ರ, ಅರ್ಜಿ ಕಿಯೋಸ್ಕ್, ತಾಲೂಕು ಕಚೇರಿ ಸಿಬಂದಿ ಕೊಠಡಿ, ಪ್ರಥಮ ಮಹಡಿಯಲ್ಲಿ ಭೂಮಿಕೇಂದ್ರ, ಕೇಸ್ವಾನ್‌ ಕೊಠಡಿ, ಕಚೇರಿ ಸಿಬಂದಿ ಹಾಲ್‌, ಸರ್ವೇ ಶಾಖೆ. ದ್ವಿತೀಯ ಮಹಡಿಯಲ್ಲಿ ಉಪನೋಂದಣಾಧಿಕಾರಿ, ಶಿರಸ್ತೇದಾರರು, ತಾಲೂಕು ಕಚೇರಿ ಸಿಬಂದಿ ಕೊಠಡಿ, ಆಹಾರ ಶಾಖೆಗೆ ಕೊಠಡಿ ಕಾಯ್ದಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next