ಗಂಗಾವತಿ: ರಾಜ್ಯೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳು ತಾಲ್ಲೂಕಾಮಟ್ಟದ ಅಧಿಕಾರಿಗಳು ಪಾಲ್ಗೊಂಡು ಕನ್ನಡ ನಾಡನ್ನು ಹೊಗಳುವ ಹಾಡುಗಳು ಮತ್ತು ನೃತ್ಯಕ್ಕೆ ಹೆಜ್ಜೆ ಹಾಕಿದ ಸಂಭ್ರಮ ಗುರುವಾರ ಜೂನಿಯರ್ ಕಾಲೇಜ್ ಮೈದಾನದಲ್ಲಿ ಜರುಗಿತು .
ರಾಜ್ಯ ಸರ್ಕಾರ ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡುವ ದೃಷ್ಟಿಯಿಂದ ಗುರುವಾರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ 3 ಸಾವಿರ ವಿದ್ಯಾರ್ಥಿಗಳು ಮತ್ತು ಶಿಕ್ಷ ಣ ಇಲಾಖೆ ತಾಲೂಕಾ ಆಡಳಿತದ ಅಧಿಕಾರಿಗಳು ಪಾಲ್ಗೊಂಡಿದ್ದರು .
ಕುವೆಂಪು ಅವರ ಜಯಭಾರತ ಜನನಿಯ ತನುಜಾತೆ ,ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ರವರ ಜೋಗದ ಸಿರಿ ಬೆಳಕಿನಲ್ಲಿ ,ಕನ್ನಡದ ಮೇರುನಟಡಾಕ್ಟರ್ ರಾಜ್ ನಟಿಸಿರುವ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಗಳಿಗೆ ವಿದ್ಯಾರ್ಥಿಗಳು ಧ್ವನಿಯಾದರು ಕೊನೆಯಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು ವಿದ್ಯಾರ್ಥಿಗಳ ಜತೆಗೆ ಕೆಲ ಹೆಜ್ಜೆ ಹಾಕಿದರು.
ತಹಸೀಲ್ದಾರ್ ಯು ನಾಗರಾಜ, ಪೌರಾಯುಕ್ತ ಅರವಿಂದ ಜಮಖಂಡಿ, ಸಂಚಾರಿ ಪೋಲಿಸ್ ಇನ್ಸ್ಪೆಕ್ಟರ್ ಪುಂಡಲೀಕಪ್ಪ ಸೇರಿ ತಾಲ್ಲೂಕಾ ಮಟ್ಟದ ಇಲಾಖೆಗಳ ಅಧಿಕಾರಿಗಳು ಮಕ್ಕಳ ಜತೆ ಹೆಜ್ಜೆ ಹಾಕಿ ಕನ್ನಡ ಪ್ರೇಮವನ್ನು ಮೆರೆದರು .
ಇದನ್ನೂ ಓದಿ:- ಡಿ.ಕೆ.ಶಿವಕುಮಾರ್ ಆಪ್ತ ಯು.ಬಿ.ಶೆಟ್ಟಿ ಮನೆ ಮೇಲೆ ಐಟಿ ದಾಳಿ
ಕಾರ್ಯಕ್ರಮದಲ್ಲಿ ಬಿಇಒ ಸೋಮಶೇಖರ್ ಗೌಡ ,ಸಿಪಿಐ ವೆಂಕಟಸ್ವಾಮಿ,ಪಶುವೈದ್ಯಾಧಿಕಾರಿ ಡಾ.ಮಲಯ್ಯ, ಜೆಸ್ಕಾಂ ಇಲಾಖೆಯ ಸಲೀಂ ಅಹ್ಮದ್ ,ಬಿಸಿಎಂ ಅಧಿಕಾರಿ ಸುರೇಶ್ ಸೇರಿ ಅನೇಕ ಅಧಿಕಾರಿಗಳು ಇದ್ದರು.