Advertisement

ಶೀತ ಪೀಡಿತ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

11:28 AM Dec 01, 2019 | Team Udayavani |

ಹೊಳೆನರಸೀಪುರ: ರಾಜ್ಯ ಹೈಕೋರ್ಟ್‌ ಸೂಚನೆ ಮೇರೆಗೆ ವಿಭಾಗೀಯ ಆಯುಕ್ತರಾದ ಯಶವಂತ್‌, ಜಿಲ್ಲಾಧಿಕಾರಿ ಗಿರೀಶ್‌, ಉಪವಿಭಾಗಾಧಿಕಾರಿ ನವೀನ್‌ ಭಟ್‌ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ತಾಲೂಕಿನ ಶೀತ ಪೀಡಿತ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ತಾಲೂಕಿನ ತೆವಡಳ್ಳಿ, ಬಿಲ್ಲೇನಹಳ್ಳಿ,ಚನ್ನರಾಯಪಟ್ಟಣದ ತಾಲೂಕಿನಸಿಂಗೇಮಹಳ್ಳಿ ಗ್ರಾಮಸ್ಥರು ರಾಜ್ಯ ಹೋಕೋರ್ಟ್‌ಗೆ ಮನವಿ ಸಲ್ಲಿಸಿ ಹೇಮಾವತಿ ಅಣೆಕಟ್ಟೆ ಮತ್ತು ಅದರನಾಲೆಗಳು ನಮ್ಮ ಗ್ರಾಮದ ಸುತ್ತ ಹೋಗಿರುವುದರಿಂದ ನಮ್ಮ ಗ್ರಾಮಗಳು ಶೀತಪೀಡಿತವಾಗಿ ಮನೆಗಳು ಕುಸಿಯುತ್ತಿವೆ. ಆದ್ದರಿಂದ ನಮ್ಮ ಗ್ರಾಮಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕು ಹಾಗೂಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದರು.

ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿಯನ್ನುಪುರಸ್ಕರಿಸಿದ ನ್ಯಾಯಾಲಯ ಶೀತ ಪೀಡಿತ ಗ್ರಾಮಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ನ್ಯಾಯಾಯಲದ ಆದೇಶದ ಮೇರೆಗೆ ಶನಿವಾರ ತಾಲೂಕಿನ ತೆವಡಳ್ಳಿ, ಬಿಲ್ಲೇನಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಪುನರ್ವಸತಿ ಕಲ್ಪಿಸಲು ಒತ್ತಾಯಿಸಿದರು. ತಹಶೀಲ್ದಾರ್‌ ಕೆ.ಆರ್‌. ಶ್ರೀನಿವಾಸ್‌, ಕಾವೇರಿ ನೀರಾವರಿ ನಿಗಮದ ಇಇ ಪುಟ್ಟರಾಜು, ತಾ ಪಂ ಇಒ ಕೆ.ಯೋಗೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next