Advertisement

ಗದ್ದೆಗಿಳಿದ ಅಧಿಕಾರಿಗಳು, ವಿಜ್ಞಾನಿಗಳು

12:30 AM Mar 18, 2019 | Team Udayavani |

ಕುಂದಾಪುರ: ಗದ್ದೆಯಲ್ಲಿ ಸುಗ್ಗಿ ಭತ್ತದ ಬೆಳೆಯ ಮಧ್ಯೆ ರಾಗಿ ಗಿಡದ ಮಾದರಿಯ ಕಳೆ ಬೆಳೆದ ಕುರಿತಂತೆ ಹಾಲಾಡಿ ಭಾಗದ ಕೃಷಿ ಪ್ರದೇಶಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ರೈತರು ಹಾಗೂ ಭೇಟಿ ನೀಡಿದ ತಂಡದ ಮಧ್ಯೆ ವಾಗ್ವಾದ ನಡೆಯಿತು.  ಈ ಬಗ್ಗೆ ಪತ್ರಿಕೆ ಮಾ. 15ರಂದು “ಭತ್ತದ ಕಳೆಗೆ ಕಳೆ ಬಾಧೆ’ ಎನ್ನುವ ವಿಶೇಷ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನಸೆಳೆದಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳ ತಂಡ ಶನಿವಾರ ಹಾಲಾಡಿಯ ಕಳೆ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿದೆ. 

Advertisement

ವಲಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಎಸ್‌.ಯು. ಪಟೇಲ್‌, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಧನಂಜಯ, ವಿಜ್ಞಾನಿಗಳಾದ ಡಾ| ಸುಧೀರ್‌ ಕಾಮತ್‌, ಡಾ| ಜಯಪ್ರಕಾಶ್‌, ಕುಂದಾಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪಾ, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ವೃಂದಾ ಭಟ್‌,  ರೈತರು ಮತ್ತಿತರರು ಉಪಸ್ಥಿತರಿದ್ದರು. 

ಕಳೆ ಗಿಡ ನಾಶ ಮಾಡಿ
ಕಳೆ ಗಿಡಗಳನ್ನು ಕಿತ್ತು ಅಲ್ಲಿಯೇ ಒಂದು ಕಡೆ ರಾಶಿ ಹಾಕಿದ್ದು, ಅದನ್ನು ಸುಡಬೇಕು. ರಾಶಿ ಹಾಕಿದ್ದರಿಂದ ಎಲ್ಲೆಡೆ ಹರಡಿದೆ. ಈಗಾಗಲೇ ಕೃಷಿ ವಿಜ್ಞಾನಿಗಳು ಅಧ್ಯಯನಕ್ಕೆಂದು ಸ್ಯಾಂಪಲ್‌ಗ‌ಳನ್ನು ತೆಗೆದುಕೊಂಡು ಹೋಗಿದ್ದಾರೆ. ಅದರ ವರದಿ ಬಂದ ಬಳಿಕ ಪರಿಹಾರ ಕಂಡು ಹುಡುಕಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪಾ ಹೇಳಿದ್ದಾರೆ. 

ಪರಿಹಾರಕ್ಕೆ ಆಗ್ರಹ
ಕಳೆ ಗಿಡ ಬೆಳೆದಿರುವುದು ಬಿತ್ತನೆ ಬೀಜದಿಂದ ಎನ್ನುವ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ವಾದವನ್ನು ತಿರಸ್ಕರಿಸಿದ ರೈತರು, ಈ ಭಾಗದಲ್ಲಿ ಸುಮಾರು 20 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಳೆ ಗಿಡ ಬೆಳೆದಿದೆ. ಇದು ಬಿತ್ತನೆ ಬೀಜದಿಂದಾಗಿರುವುದು ಅಲ್ಲ. ಸೂಕ್ತ ಪರಿಹಾರ ನೀಡಬೇಕು ಎಂದು ಅಲ್ಲಿ ಸೇರಿದ್ದ ರೈತರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next