Advertisement

‘ಸಮಸ್ಯೆ ನೀಗಿಸಲು ಅಧಿಕಾರಿಗಳಲ್ಲಿ ಹೊಂದಾಣಿಕೆ ಅಗತ್ಯ’

11:52 PM Jun 22, 2019 | mahesh |

ಬೆಳ್ತಂಗಡಿ: ಮಳೆಗಾಲದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯ ಸಿಬಂದಿ ಹೊಂದಾಣಿಕೆ ಯಿಂದ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಹರೀಶ್‌ ಪೂಂಜ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅವರು ಶನಿವಾರ ಬೆಳ್ತಂಗಡಿ ಮೆಸ್ಕಾಂ ಕಚೇರಿಯಲ್ಲಿ ಮಳೆಗಾಲದಲ್ಲಿ ವಿದ್ಯುತ್‌ ಸಮಸ್ಯೆ ದೂರ ಮಾಡುವ ನಿಟ್ಟಿನಲ್ಲಿ ತಾಲೂಕಿ ನಲ್ಲಿ ಮೊದಲ ಬಾರಿಗೆ ಮೆಸ್ಕಾಂನ ಎಂಜಿನಿ ಯರ್‌ಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸಿದರು.

ತಾಲೂಕಿನ ಬಹುತೇಕ ವಿದ್ಯುತ್‌ ತಂತಿಗಳು ಅರಣ್ಯ ಇಲಾಖೆಯ ಸಂಬಂಧಿಸಿದ ಜಾಗದ ಮೂಲಕ ಹಾದು ಹೋಗಿರುವುದರಿಂದ ಇಲಾಖೆಯ ಸಿಬಂದಿಯ ಹೊಂದಾಣಿಕೆಯ ಕೊರತೆಯಿಂದ ಮರದ ರೆಂಬೆಗಳು ತಂತಿ ಗಳಿಗೆ ತಾಗುತ್ತಿವೆ. ಹೀಗಾಗಿ ಅದರ ತೆರವು ಕಾರ್ಯ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಪರಸ್ಪರ ಮಾತುಕತೆ ನಡೆಸಬೇಕಿದೆ.

ನಾಲ್ಕು ಇಲಾಖೆ ಸಭೆ
ವಿದ್ಯುತ್‌ ಸಮಸ್ಯೆ, ರಸ್ತೆ ಕಾಮ ಗಾರಿಗಳನ್ನು ಸುಸೂತ್ರವಾಗಿ ನಡೆಸಲು ಮೆಸ್ಕಾಂ, ಅರಣ್ಯ ಇಲಾಖೆಯ ಜತೆಗೆ ಲೋಕೋ ಪಯೋಗಿ, ಪಂಚಾಯತ್‌ರಾಜ್‌ ಎಂಜಿನಿಯರ್‌ಗಳನ್ನೂ ಸೇರಿಸಿ ಸಭೆ ನಡೆಸ ಲಾಗುವುದು. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿಗಳು ಹೊಂದಾಣಿಕೆ ನಡೆಸಬೇಕು ಎಂದು ಹರೀಶ್‌ ಪೂಂಜ ಸೂಚಿಸಿದರು.

ರೆಂಬೆ ಕಡಿಯಲು ಅನುಮತಿ ಇಲ್ಲ
ವೇಣೂರಿನಲ್ಲಿ ಹೊಸದಾಗಿ ಸಬ್‌ಸ್ಟೇಷನ್‌ ನಿರ್ಮಾಣವಾಗಿದ್ದು, ಅದರಿಂದ ಹೊಸಂಗಡಿ, ಬಡಕೋಡಿ, ಕಾಶಿಪಟ್ಣ ಗ್ರಾಮಗಳ ವಿದ್ಯುತ್‌ ಸಮಸ್ಯೆ ನಿವಾರಣೆ ದೃಷ್ಟಿಯಿಂದ ತಂತಿ ಹಾದುಹೋಗಲು ಮೂಡುಬಿದಿರೆ ರಸ್ತೆಯಲ್ಲಿ ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ. ಆದರೆ ಪ್ರಸ್ತುತ ರೆಂಬೆ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡದೇ ಇರುವುದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಮೆಸ್ಕಾಂ ಎಇಇ ಶಿವಶಂಕರ್‌ ಅವರು ಶಾಸಕರ ಗಮನಕ್ಕೆ ತಂದರು.

Advertisement

20 ಕೋ. ರೂ. ಅನುದಾನ
ಪ್ರಸ್ತುತ ಅರಣ್ಯ ಇಲಾಖೆಯ ಅನುಮತಿ ಗಿಂತಲೂ ಮುಖ್ಯವಾಗಿ ಮೆಸ್ಕಾಂ ಲೋಕೋ ಪಯೋಗಿ ಇಲಾಖೆಯ ಅನುಮತಿ ಪಡೆಯ ಬೇಕಿದೆ. ಆ ರಸ್ತೆಯ ಅಭಿವೃದ್ಧಿಗೆ 20 ಕೋ. ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ವೇಳೆ ತೊಂದರೆಯಾಗ ಬಾರದು ಎಂದು ಶಾಸಕರು ತಿಳಿಸಿದರು. ಪ್ರಸ್ತುತ ಅಳವಡಿಸಿರುವ ಕಂಬಗಳನ್ನು ರಸ್ತೆಯಿಂದ ಸಾಕಷ್ಟು ದೂರದಲ್ಲಿದೆ ಎಂದು ಎಇಇ ಸಲಹೆ ನೀಡಿದರು.

ಅಪಾಯಕಾರಿ ಮರ ತೆರವು
ಹೆದ್ದಾರಿ ಬದಿ ಹಳೆಕೋಟೆ ವಾಣಿ ಕಾಲೇಜು ಸಮೀಪ ಹಾಗೂ ಧರ್ಮಸ್ಥಳ ರಸ್ತೆಯ ನೀರಚಿಲುಮೆ ಬಳಿ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಶಾಸಕರು ಸಲಹೆ ನೀಡಿದ್ದು, ಅದರ ಕುರಿತು ಗಮನಿಸಲಾಗುವುದು ಎಂದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಭರವಸೆ ನೀಡಿದರು. ನಾವುಂದ ರಸ್ತೆಯಲ್ಲಿರುವ ಅಪಾಯಕಾರಿ ಮರಗಳ ತೆರವಿನ ಕುರಿತು ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ಮಾಡುವಂತೆ ಶಾಸಕರು ತಿಳಿಸಿದರು. ಕೊಕ್ಕಡ ಪೇಟೆ, ಎಂಜಿರ ರಸ್ತೆ ಅಪಾಯಕಾರಿ ಮರಗಳ ತೆರವಿಗೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕತ್ತರಿಗುಡ್ಡೆ, ಪೆರಾಲ್ದರಕಟ್ಟೆಯಲ್ಲಿರುವ ಅಪಾಯಕಾರಿ ಮರಗಳ ಕುರಿತು ಸಭೆಯ ಗಮನಕ್ಕೆ ತರಲಾಯಿತು.

ನೀರಿನ ಬರ ತಪ್ಪಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಮಳೆ ನೀರು ಇಂಗಿಸುವ ಕುರಿತು ದೊಡ್ಡ ಅಭಿಯಾನ ನಡೆಸುವ ಯೋಚನೆ ಇದ್ದು, ಹೀಗಾಗಿ ಅರಣ್ಯ ಹಾಗೂ ಮೆಸ್ಕಾಂನವರು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒಂದೊಂದು ಯೋಜನೆಯನ್ನು ಅನುಷ್ಠಾನಗೊಳಿಸಿ ವರದಿ ನೀಡುವಂತೆ ಶಾಸಕ ಹರೀಶ್‌ ಪೂಂಜ ಅವರು ಸೂಚನೆ ನೀಡಿದರು. ಜತೆಗೆ ಇದೇ ವಿಚಾರವಾಗಿ ಮುಂದೆ ಪಿಡಿಒಗಳ ಸಭೆ ಕರೆಯಲಾಗು ವುದು ಎಂದು ತಿಳಿಸಿದರು.

ನೀರಿಂಗಿಸುವ ಯೋಜನೆ: ಸೂಚನೆ
ನೀರಿನ ಬರ ತಪ್ಪಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಮಳೆ ನೀರು ಇಂಗಿಸುವ ಕುರಿತು ದೊಡ್ಡ ಅಭಿಯಾನ ನಡೆಸುವ ಯೋಚನೆ ಇದ್ದು, ಹೀಗಾಗಿ ಅರಣ್ಯ ಹಾಗೂ ಮೆಸ್ಕಾಂನವರು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಒಂದೊಂದು ಯೋಜನೆಯನ್ನು ಅನುಷ್ಠಾನಗೊಳಿಸಿ ವರದಿ ನೀಡುವಂತೆ ಶಾಸಕ ಹರೀಶ್‌ ಪೂಂಜ ಅವರು ಸೂಚನೆ ನೀಡಿದರು. ಜತೆಗೆ ಇದೇ ವಿಚಾರವಾಗಿ ಮುಂದೆ ಪಿಡಿಒಗಳ ಸಭೆ ಕರೆಯಲಾಗು ವುದು ಎಂದು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next