Advertisement

ನಕಲಿ ಕ್ಲಿನಿಕ್‌ಗಳಿಗೆ ಅಧಿಕಾರಿಗಳಿಂದ ಬೀಗ

03:51 PM Jul 05, 2019 | Suhan S |

ಕೊರಟಗೆರೆ: ತಾಲೂಕಿನ ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಕಲಾ ಮತ್ತು ಅವರ ತಂಡ 3 ನಕಲಿ ಕ್ಲಿನಿಕ್‌ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬೀಗ ಮುದ್ರ ಹಾಕಿದರು.

Advertisement

ಜಂಟಿ ಕಾರ್ಯ:ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವ ಬಗ್ಗೆ ಕಳೆದ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳ ಸಾರ್ವ ಜನಿಕರಿಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಜಿಲ್ಲಾ ಔಷಧ ನಿಯಂತ್ರಕರು ಜಂಟಿ ಕಾರ್ಯಾಚರಣೆ ನಡೆಸಿದರು.

ಈ ವೇಳೆ ಹೊಳವನಹಳ್ಳಿ ಹೋಬಳಿ ಯಲ್ಲಿ ರುವ ಹಲವು ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿ ಹೊಳವನ ಹಳ್ಳಿಯ ಶ್ರೀನಿವಾಸ ಕ್ಲಿನಿಕ್‌, ಭ್ಯಾಗ್ಯಮ್ಮ ಕ್ಲಿನಿಕ್‌, ಅಕ್ಕಿರಾಂಪುರದ ಕರೀಂ ಕ್ಲಿನಿಕ್‌ಗಳ ದಾಖಲೆಗಳನ್ನು ಪರಿಶೀಲಿಸಿದರು. ನಂತರ ಈ ಎಲ್ಲಾ ಕ್ಲಿನಿಕ್‌ಗಳಲ್ಲಿ ನಕಲಿ ವೈದ್ಯರೆಂದು ತಿಳಿದು ಬಂದಿದ್ದು ಸದರಿ ಆಸ್ಪತ್ರೆಗಳನ್ನು ಮುಚ್ಚಿಸಲಾಗಿದೆ.

ಈ ಬಗ್ಗೆ ಪ್ರತಿಕಿಯಿಸಿದ ಜಿಲ್ಲಾ ವೈದ್ಯಾ ಧಿಕಾರಿ ಡಾ.ಚಂದ್ರಿಕಲಾ, ಜಿಲ್ಲೆಯಲ್ಲಿ 93 ನಕಲಿ ವೈದ್ಯರ ಕ್ಲಿನಿಕ್‌ ಇರುವ ಮಾಹಿತಿ ಯಿದೆ, ಕೊರಟಗೆರೆ ತಾಲೂಕಿನಲ್ಲಿ 5 ನಕಲಿ ಕ್ಲಿನಿಕ್‌ ಇದ್ದು, ಈ ಮೊದಲು 2 ಕ್ಲಿನಿಕ್‌ಗಳಿಗೆ ಬೀಗ ಮುದ್ರೆ ಹಾಕಲಾಗಿದೆ, ಉಳಿದ 3 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ್ದು ಕ್ರಿಮಿನಲ್ ಕೇಸ್‌ ದಾಖಲಿಸ ಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next