Advertisement

ಹುಕ್ಕಾಬಾರ್‌ಗೆ ಅಧಿಕಾರಿಗಳ ಕಿಕ್‌

10:40 AM Dec 25, 2019 | Team Udayavani |

ಹುಬ್ಬಳ್ಳಿ: ಕೆಫೆ ಹೆಸರಿನಲ್ಲಿ ಅನಧಿಕೃತವಾಗಿ ಹುಕ್ಕಾ ಬಾರ್‌ ನಡೆಸುತ್ತಿದ್ದ ಹೋಟೆಲ್‌ ಮೇಲೆ ಪಾಲಿಕೆ ಆರೋಗ್ಯಾಧಿಕಾರಿಗಳು ಮಂಗಳವಾರ ಸಂಜೆ ದಾಳಿ ಮಾಡಿ, ಅಂದಾಜು 5 ಲಕ್ಷ ರೂ. ಮೌಲ್ಯದ ಹುಕ್ಕಾ ಸಾಮಗ್ರಿ, ಸುಗಂಧ ದ್ರವ್ಯ ಸೇರಿದಂತೆ ಇನ್ನಿತರೆ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

Advertisement

ವಿದ್ಯಾನಗರ ಹೊಸೂರು-ಉಣಕಲ್ಲ ರಸ್ತೆಯ ಮರಿಯನ್‌ ತಿಮ್ಮಸಾಗರ ಲೇಔಟ್‌ನ ನೂತನ ಕೋರ್ಟ್‌ ಸಂಕೀರ್ಣ ಬಳಿ ಅರ್ಬನ್‌ ರೂಟ್ಸ್‌ ಹೆಸರಿನಲ್ಲಿ ಕೇಶ್ವಾಪುರ ಬೆಂಗೇರಿಯ ಟೀಚರ್ಸ್‌ ಕಾಲೋನಿಯ ನರೇಂದ್ರ ಎಸ್‌. ತಿಕಂದರ ಹಾಗೂ ಜಯಶೀಲ ಬಾಲ್ಮಿ ಅಕ್ರಮವಾಗಿ ಕೆಫೆ ನಡೆಸುತ್ತಿದ್ದರು. ಇಲ್ಲಿ ಅನಧಿಕೃತವಾಗಿ ಹುಕ್ಕಾಬಾರ್‌ ನಡೆಯುತ್ತಿದೆ ಎಂಬ ದೂರಿನ ಮೇರೆಗೆ ಪಾಲಿಕೆ ವೈದ್ಯಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಆರೋಗ್ಯಾಧಿಕಾರಿ ಡಾ| ಪ್ರಭು ಬಿರಾದಾರ, ಕಳೆದ ಎರಡು ತಿಂಗಳಿನಿಂದ ಅನಧಿಕೃತವಾಗಿ ಹುಕ್ಕಾ ಬಾರ್‌ ನಡೆಸುತ್ತಿದ್ದರು. ಈ ಕುರಿತು ಸಾಕಷ್ಟು ದೂರುಗಳು ಬಂದಿದ್ದವು. ಇವರು ಕಿಮ್ಸ್‌ ಕಾಯ್ದೆ ಅನ್ವಯ ಟ್ರೇಡ್‌ ಲೈಸನ್ಸ್‌ ಪಡೆದಿರಲಿಲ್ಲ ಹಾಗೂ ಕಾಟ್ಪಾ ನಿಯಮ ಉಲ್ಲಂಘಿಸಿ ಹುಕ್ಕಾ ಬಾರ್‌ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೆಫೆ ಮೇಲೆ ದಾಳಿ ಮಾಡಿ, ಅಂದಾಜು 5ಲಕ್ಷ ರೂ. ಮೌಲ್ಯದ ಹುಕ್ಕಾ ಬಾರ್‌ಗೆ ಸಂಬಂಧಿಸಿದ ಸಾಮಗ್ರಿಗಳಾದ 20ಕ್ಕೂ ಅಧಿಕ ಸುಗಂಧದ್ರವ್ಯ, ಫಿಲ್ಟರ್‌ ಪೈಪ್‌ ಸೇರಿದಂತೆ ಇನ್ನಿತರೆ ವಸ್ತು ಜಫ್ತು ಮಾಡಲಾಗಿದೆ. ಕೆಫೆಯ ಜಾಗವು ಕಬಾಡೆ ಎಂಬುವರಿಗೆ ಸೇರಿದ್ದಾಗಿದ್ದು, ನರೇಂದ್ರ ಮತ್ತು ಜಯಶೀಲ ಜಾಗವನ್ನು ಬಾಡಿಗೆ ಮೇಲೆ ಪಡೆದು ನಡೆಸುತ್ತಿದ್ದರು ಎಂದರು. ದಾಳಿ ವೇಳೆ ಕೋಪ್ಟಾ ಕಾಯ್ದೆ ಜಿಲ್ಲಾ ಸಲಹೆಗಾರ ಎಂ.ಐ. ಕಲ್ಲಪ್ಪನವರ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಜಿ.ವಿ. ಓಂಕಾರೇಗೌಡ್ರ, ವಿದ್ಯಾನಗರ ಠಾಣೆ ಪೊಲೀಸರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next