Advertisement

ಮತಗಟ್ಟೆಗಳತ್ತ ಅಧಿಕಾರಿಗಳ ಪಯಣ

09:17 AM May 19, 2019 | Team Udayavani |

ಧಾರವಾಡ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದು (ಮೇ 19) ನಡೆಯಲಿರುವ ಮತದಾನಕ್ಕೆ ಸಕಲ ಸಿದ್ಧ್ದತೆಗಳು ಪೂರ್ಣಗೊಂಡಿದ್ದು, ಎಲ್ಲ ಮತಗಟ್ಟೆಗಳಿಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ 214 ಮತಗಟ್ಟೆಗಳಿಗೂ ಶನಿವಾರ ಮಧ್ಯಾಹ್ನವೇ ಚುನಾವಣಾಧಿಕಾರಿಗಳನ್ನು ಕಳುಹಿಸಲಾಗಿದೆ. ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದು, 379 ವಿದ್ಯುನ್ಮಾನ ಮತಯಂತ್ರಗಳನ್ನು ರವಾನಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ಒಟ್ಟು 189437 ಮತದಾರರಿದ್ದು, 97 ಸಾವಿರ ಪುರುಷ 91 ಸಾವಿರ ಮಹಿಳಾ ಮತದಾರರು ಸೇರಿದಂತೆ 04 ಜನ ತೃತೀಯ ಲಿಂಗಿಗಳು ಇದ್ದಾರೆ. ಕ್ಷೇತ್ರದಲ್ಲಿ 2487 ವಿಕಲಚೇತನರಿದ್ದು ಅವರ ಮತದಾನಕ್ಕೆ 134 ವಾಹನಗಳ ವ್ಯವಸ್ಥೆ ಮಾಡಲಾಗಿದೆ.ಇಲ್ಲಿ 16 ಸಖೀ ಮತಗಟ್ಟೆಗಳಿದ್ದು, ಒಂದು ವಿಕಲಚೇತನರ ಮತಗಟ್ಟೆಗೆ ವ್ಯವಸ್ಥೆ ಮಾಡಲಾಗಿದೆ.

ಇನ್ನು ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿದ್ದು, ಯಾವುದೇ ಮೆರವಣಿಗೆ, ಬಹಿರಂಗವಾಗಿ ಗುಂಪುಗಳಲ್ಲಿ ಸುತ್ತಾಡುವುದು, ಪ್ರಚೋದನಕಾರಿ ಹೇಳಿಕೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದರು.

ಕುಂದಗೋಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೂ ಒಟ್ಟು 72,19,591 ರೂ.ಗಳ ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ 35 ಲೀಟರ್‌ ಮದ್ಯ, 30 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಸೇರಿವೆ. ಒಟ್ಟಾರೆ ಕುಂದಗೋಳ ಉಪ ಚುನಾವಣೆಗೆ ಸಕಲ ಸಿದ್ಧ್ದತೆ ಮಾಡಿಕೊಳ್ಳಲಾಗಿದೆ ಎಂದು ದೀಪಾ ಚೋಳನ್‌ ಹೇಳಿದರು.

Advertisement

ಕುಂದಗೋಳ: ಸ್ಥಳೀಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮೇ 19ರಂದು ನಡೆಯಲಿದ್ದು, ಪಟ್ಟಣದ ಹರಭಟ್ಟ ಕಾಲೇಜಿನ ಆವರಣದಿಂದ ಒಟ್ಟು 214 ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಮತಯಂತ್ರ ಹಾಗೂ ಸಲಕರಣೆಗಳೊಂದಿಗೆ ತೆರಳಿದರು.

ಬೆಳಗ್ಗೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರು ಮಸ್ಟರಿಂಗ್‌ನ ಸಮಗ್ರ ವಿವರಗಳನ್ನು ಪಡೆದುಕೊಂಡರು. ಅಣಕು ಮತದಾನ ನಡೆಸಿ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿ ಯಾವ ಲೋಪ ದೋಷವಾಗಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಸಿಬ್ಬಂದಿ ಕರ್ತವ್ಯಕ್ಕೆ ಶುಭ ಹಾರೈಸಿದರು.

214 ಮತಗಟ್ಟೆಗಳಿಗೆ 968 ಅಧಿಕಾರಿಗಳು, 242 ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 42 ಮಾರ್ಗಗಳನ್ನು ಗುರುತಿಸಿದ್ದು, 30 ಬಸ್ಸುಗಳು, 8 ಮ್ಯಾಕ್ಸಿಕ್ಯಾಬ್‌ಗಳು, 3 ಜೀಪುಗಳು ಸೇರಿ 41 ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ ಎಂದು ಚುನಾವಣಾಧಿಕಾರಿ ವಿ. ಪ್ರಸನ್ನ ಹೇಳಿದರು.

ಚುನಾವಣೆ ಬಂದೋಬಸ್ತ್ಗೆ 4 ಡಿವೈಎಸ್‌ಪಿ, 7 ಇನ್ಸ್‌ಪೆಕ್ಟರ್‌, 2 ಪಿಎಸ್‌ಐ, 42 ಎಎಸ್‌ಐ, 165 ಪೊಲೀಸ್‌ ಸಿಬ್ಬಂದಿ, 263 ಹೋಂಗಾರ್ಡ್ಸ್‌, 12 ಡಿಆರ್‌, 2 ಕೆಎಸ್‌ಪಿ, 68 ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಲಾಗಿದೆ ಎಂದು ಸಿಪಿಐ ವೆಂಕಟಸ್ವಾಮಿ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next