Advertisement
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಮನೋಜ್ ಜೈನ್, ಪಿ.ಎ. ಮೇಘಣ್ಣವರ ಕಾರ್ಯ ನಿರ್ವಹಿಸಿದ್ದರೆ, ಸಮ್ಮಿಶ್ರ ಸರ್ಕಾರದಲ್ಲಿ ಕೆ.ಜಿ. ಶಾಂತಾರಾಮ್ ಜಿಲ್ಲಾಧಿಕಾರಿಯಾಗಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಜಿಲ್ಲೆಗೆ ಆಗಮಿಸಿರುವ ಹಾಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಜಿಲ್ಲೆಯ ದಂಡಾಧಿಕಾರಿಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಜನಸಾಮಾನ್ಯರೊಂದಿಗೆ ತಕ್ಷಣ ಬೆರೆಯುತ್ತಿದ್ದ ಅವರನ್ನು ವರ್ಗಾವಣೆ ಮಾಡಲಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ.
Related Articles
Advertisement
ಹೊಸಬರ ನೇಮಕ: ಸದ್ಯ ಜಿಪಂ ಸಿಇಒ ಹುದ್ದೆಗೆ ಮೊಹ್ಮದ ಇಕ್ರಮಮುಲ್ಲಾ ಶರೀಫ್, ಬಾಗಲಕೋಟೆ ಉಪ ವಿಭಾಗಾಧಿಕಾರಿಯಾಗಿ ಕಿರಿಯ ಶ್ರೇಣಿಯ ಪರೀಕ್ಷಾರ್ಥಿ ಕೆಎಎಸ್ ಅಧಿಕಾರಿ ಎಂ.ಗಂಗಪ್ಪ ಅವರ ನೇಮಕವಾಗಿದೆ. ಮಹತ್ವದ ಇಲಾಖೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರ ಹುದ್ದೆ ಎರಡೂ ಸ್ಥಾನಗಳಿಗೆ 1997ರ ಬ್ಯಾಚ್‌ನ ಹಿರಿಯ ಐಎಎಸ್ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ನೇಮಕಗೊಂಡಿದ್ದಾರೆ.
ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಆಯುಕ್ತರಾಗಿದ್ದಾರೆ. ಹೀಗಾಗಿ ಅವರ ಅವಧಿಯಲ್ಲಿ ಬಾಕಿ ಉಳಿದ ಸಂತ್ರಸ್ತರ ಸಮಸ್ಯೆ, ಕಾರ್ಯಗಳು ವೇಗವಾಗಿ ನಡೆಯುತ್ತವೆ ಎಂಬ ನಿರೀಕ್ಷೆಯನ್ನು ಇಲ್ಲಿನ ಸಂತ್ರಸ್ತರು ಇಟ್ಟುಕೊಂಡಿದ್ದಾರೆ.
ಯಕೆಪಿಯಡಿ ಇದೇ ಮೊದಲ ಬಾರಿಗೆ ಅಪರ ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿಸಲಾಗಿದ್ದು, ಈ ಹುದ್ದೆಗೆ ಡಾ| ಸಿದ್ದು ಹುಲ್ಲೋಳ್ಳಿ (ಪುನರವಸತಿ)ನೇಮಕಗೊಂಡಿದ್ದಾರೆ. ಯುಕೆಪಿ ವಿಶೇಷ ಜಿಲ್ಲಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಮಹಾದೇವ ಮುರಗಿ (ಈ ಹಿಂದೆ ಬಾಗಲಕೋಟೆ ಎಸಿ ಮತ್ತು ಬಿಟಿಡಿಎ ಆರ್‌ಒ ಆಗಿದ್ದರು) ನೇಮಕಗೊಂಡಿದ್ದು, ಇದರೊಂದಿಗೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ವಿಶೇಷಾಧಿಕಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಯುಕೆಪಿಯ ಮಹಾ ವ್ಯವಸ್ಥಾಪಕ ಹುದ್ದೆಗೆ ಮತ್ತೋರ್ವ ಕೆಎಎಸ್ ಅಧಿಕಾರಿ ಡಾ| ಔದ್ರಾಮ (ಈ ಹಿಂದೆ ನಗರಸಭೆ ಆಯುಕ್ತ, ಬಿಟಿಡಿಎ ಆರ್‌ಒ ಮತ್ತು ಡಿಸಿ ಕಚೇರಿಯ ಯೋಜನಾ ನಿರ್ದೇಶಕರಾಗಿದ್ದರು) ಅವರನ್ನು ವರ್ಗಾವಣೆ ಮಾಡಲಾಗಿದೆ. ಸದ್ಯ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾಗಿರುವ ಡಾ| ಔದ್ರಾಮ ಯುಕೆಪಿ ಮಹಾ ವ್ಯವಸ್ಥಾಪಕರ ಹುದ್ದೆಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
•ಶ್ರೀಶೈಲ ಕೆ. ಬಿರಾದಾರ